Friday, April 26, 2024
spot_img
HomeRamnagarಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು: ಡಾ. ಅವಿನಾಶ್ ಮೆನನ್

ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು: ಡಾ. ಅವಿನಾಶ್ ಮೆನನ್

ಪಾಲಾರ್ ಪತ್ರಿಕೆ | Palar Patrike

ರಾಮನಗರ: ಜಿಲ್ಲೆಯಲ್ಲಿ ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಉತ್ತೇಜಿಸುವುದರಿಂದ ಪ್ರವಾಸಿಗರು ಕೃಷಿ ಮತ್ತು ಬೇಸಾಯದ ಕರ‍್ಯಚಟುವಟಿಕೆಗಳನ್ನು ಪರಿಚಯಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುವುದಲ್ಲದೇ ಸ್ಥಳೀಯ ಸಂಸ್ಕೃತಿ ಆಚಾರ-ವಿಚಾರ, ಕಲೆ-ಕ್ರೀಡೆ ಮುಂತಾದ ರ‍್ನಾಟಕದ ಗ್ರಾಮೀಣ ಜೀವನದ ವಿವಿಧ ಆಯಾಮಗಳಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಅವರು ಇಂದು ಜಾನಪದ ಲೋಕದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಮನಗರ ಜಿಲ್ಲೆಯ ರೈತರಿಗೆ ಕೃಷಿ ಪ್ರವಾಸೋದ್ಯಮದ ಅವಕಾಶಗಳು ಕುರಿತು ಒಂದು ದಿನದ ಕರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಸಮುದಾಯಗಳು ಪ್ರವಾಸೋದ್ಯಮದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳುವ ಪ್ರಮಾಣವನ್ನು ಹೆಚ್ಚಿಸಲು ಮತ್ತು ಪ್ರವಾಸೋದ್ಯಮದಿಂದ ಆಗುವ ಸಾಮಾಜಿಕ-ರ‍್ಥಿಕ ಲಾಭಗಳನ್ನು ಪಡೆಯಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕರ‍್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಾಗೂ ಕನಿಷ್ಠ ೧೦ ರೈತ ಕುಟುಂಬಗಳು ಮುಂದೆ ಬರುವಂತೆ ತಿಳಿಸಿದರು.
ಜಿಲ್ಲೆಯು ಬೆಂಗಳೂರು ನಗರ ಸಮೀಪವಿರುವುದರಿಂದ ನಗರದ ಜನರನ್ನು ಜಿಲ್ಲೆಗೆ ಆರ‍್ಷಣೆ ಮಾಡಿ ಆದಾಯ ಹೆಚ್ಚಿಸಿ ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಜೊತೆಗೆ ಗ್ರಾಮೀಣ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಈ ಕರ‍್ಯಗಾರದಲ್ಲಿ ಸಲಹೆಗಳನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ರ‍್ಕಾರದಿಂದ ಸಿಗುವ ಮೂಲಭೂತ ಸೌರ‍್ಯಗಳಿಗೆ ಅನುಕೂಲಮಾಡಿಕೊಡಲಾಗುವುದು ಎಂದರು.
ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನರ‍್ದೇಶಕರಾದ ಡಾ. ಕೆ. ನಾರಾಯಣ ಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿರುವ ಬೆಟ್ಟಗುಡ್ಡಗಳು, ಕಾಡು, ನೀರು, ಪರಿಸರವು ಕೃಷಿ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ.
ದೇಶದಲ್ಲಿ ಪ್ರವಾಸೋದ್ಯವು ಅಪಾರ ಕೊಡುಗೆಗಳನ್ನು ನೀಡಿದೆ. ಇದರಿಂದ ಉದ್ಯೋಗಗಳ ಸೃಷ್ಠಿಯಾಗಿದೆ. ಸುಮಾರು ೨೦ರಷ್ಟು ಜಿಡಿಪಿ ಕೊಡುಗೆ ನೀಡಲಾಗಿದೆ. ಕೆಲವು ದೇಶಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ರ‍್ಥಿಕತೆಯಲ್ಲಿ ಹೆಚ್ಚು ಮುನ್ನೆಡೆ ಸಾಧಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಈ ಕರ‍್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕರ‍್ಯಗಾರದಲ್ಲಿ ಕೃಷಿ ಇಲಾಖೆಯ ಉಪನರ‍್ದೇಶಕರಾದ ಉಮೇಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನರ‍್ದೇಶಕಿ ರೂಪ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments