ಪಾಲಾರ್ ಪತ್ರಿಕೆ | Palar Pathrike
ಗುಡಿಬಂಡೆ: ಶನಿವಾರ ಪಟ್ಟಣದ ಶ್ರೀ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಸ್ವರ್ಣ ಭೂಮಿ ಫೌಂಡೇಷನ್ ಹಾಗೂ ಐ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿ,
ವೃದ್ದರು ವಯಸ್ಸಾದಂತೆ ಕಣ್ಣುಗಳ ಬಗ್ಗೆ ಹೆಚ್ಚು ಜಾಗೃತಿವಹಿಸಿ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು, ಕ್ಷೇತ್ರದಲ್ಲಿ ನಮ್ಮ ಫೌಂಡೇಷನ್ ವತಿಯಿಂದ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದು ಕ್ಷೆತ್ರದ ಜನತೆ ಇಂತಹ ತಪಾಸಣೆ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮನುಷ್ಯ ತನ್ನ ಸೂಕ್ಷ್ಮ ಅಂಗವಾಗಿರುವ ಕಣ್ಣುಗಳು ಬಾಹ್ಯ ಪರಿಸರವನ್ನು ನೋಡಿ ಆನಂದಿಸಲು ಆಗಾಗ ಇಂತಹ ತಪಾಸಣೆ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕಾಗಿದೆ, ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ ಜನರಿಗೆ ಉತ್ತಮವಾದ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯಕ್ಕೆ ಒದಗಿಸಲು ಬಿಜೆಪಿ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಕಾರ ಇಂದು ನಾವು ಆರೋಗ್ಯಕ್ಕೆ ಸಂಬಂಧಿಸಿದ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬೇರೆ ಬೇರೆ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದು ಇದರ ಸದುಪಯೋಗ ಜನತೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಂತರ ಶಿಬಿರವನ್ನು ಉದ್ದೇಶಿಸಿ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ಮನುಷ್ಯ ಪ್ರಪಂಚವನ್ನು ನೋಡಲು ಕಣ್ಣಿನ ಅವಶ್ಯಕತೆ ಹೆಚ್ಚಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಕಣ್ಣುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು, ಒಂದು ವೇಳೆ ತಮಗೆ ಕಣ್ಣಿನಲ್ಲಿ ಏನಾದರು ತೊಂದರೆಗಳು ಇದ್ದಲ್ಲಿ ಇಂತಹ ತಪಾಸಣಾ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ತಾಲೂಕಿನ ಜನತೆಗೆ ಅವಶ್ಯಕತೆ ಇರುವ ಶಿಬಿರ ಆಯೋಜಿಸಿರುವುದು ಎಲ್ಲರಿಗೂ ಅನುಕೂಲವಾಗಿದೆ, ನಮ್ಮ ಪ್ರಧಾನ ಮಂತ್ರಿಗಳ ಆಶಯದಂತೆ ಜನರಿಗೆ ಉತ್ತಮವಾದ ಆರೋಗ್ಯ ನೀಡಲು ಇವರು ಆಯೋಜಿಸಿರುವ ತಪಾಸಣೆ ಶಿಬಿರ ಹೆಚ್ಚು ಜನರಿಗೆ ಅನುಕೂಲಕರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲು ಅ ದೇವರು ಶಕ್ತಿ ನೊಡಲಿ ಎಂದು ತಿಳಿಸಿದರು.
ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ತಾಲೂಕಿನ 500 ಕ್ಕು ಹೆಚ್ಚು ವಯೋವೃದ್ದರು ಸೇರಿ ಯುವಕರು ತಪಾಸಣೆ ಮಾಡಿಸಿಕೊಂಡಿದ್ದು, ಹಲವರಿಗೆ ಸ್ಥಳದಲ್ಲೆ ಕನ್ನಡಕಗಳನ್ನು ವಿತರಣೆ ಮಾಡಿದ್ದು, ಇನ್ನು ಕೆಲವರಿಗೆ ಮುಂದಿನ 15 ದಿನಗಳ ಒಳಗಾಗಿ ನೀಡಲಾಗುತ್ತದೆಂದು ತಿಳಿಸಿದರು.
ಈ ಶಿಬಿರದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ರಾಜಗೊಪಾಲ, ಎಲ್ಲೋಡು ನಾಗಭೂಷಣ ರೆಡ್ಡಿ, ಬಿಜೆಪಿ ರೈತ ಯುವಮೋರ್ಚ ಅಧ್ಯಕ್ಷ ನಂಜೇಶ್ ರೆಡ್ಡಿ, ಮುಖಂಡರಾದ ನಾಗರಾಜು, ಪದ್ಮಾವತಿ, ಮಧು, ನಂದೀಶ್, ಜಿ.ಎಸ್. ನವೀನ್ ಕುಮಾರ್, ನರಸಿಂಹಮೂರ್ತಿ ಸೇರಿ ಇತರರು ಇದ್ದರು.