ಪಾಲಾರ್ ಪತ್ರಿಕೆ | Palar Pathrike
ಶಿಡ್ಲಘಟ್ಟ : ಶಿಡ್ಲಘಟ್ಟಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಿರೀಕ್ಷೆಯಂತೆ ಪಕ್ಷದ ರಾಜ್ಯಾಧ್ಯಕ್ಷ ಬಿಡುಗಡೆಗೊಳಿಸಿರುವ ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಡ್ಲಘಟ್ಟಕ್ಕೆ – ಮೇಲೂರು ಬಿ.ಎನ್.ರವಿಕುಮಾರ್ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿದ್ದು ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ವರಿಷ್ಟರು ಸೂಚಿಸಿದ್ದಾರೆ.
ಬಿ.ಎನ್.ರವಿಕುಮಾರ್ ರವರಿಗೆ ಮಾಜಿ ಪ್ರಧಾನಿಗಳು ಹಾಗು ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ ರವರ ಆತ್ಮೀಯ ಆಶಿರ್ವಾದವು ಮೊದಲನಿಂದಲೂ ಇದೆ.
ಕಳೆದ ಒಂದುವರೆ ವರ್ಷದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾವಾರು ಪಕ್ಷದ ಪದಾಧಿಕಾರಿಗಳು, ನಾಯಕರ ಸಭೆ ಕರೆದು ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿದ್ದರು. ಇತ್ತೀಚೆಗೆ ಹಮ್ಮಿಕೊಂಡಿದ್ದ ಪಂಚರತ್ನಯಾತ್ರೆಯ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುವ ಮೂಲಕ ಕಣಕ್ಕಿಳಿಸುವ ದಳಪತಿಗಳ ಹೆಸರನ್ನು ದೃಢಪಡಿಸಿ ಪ್ರಚಾರದಲ್ಲಿ ತಿಳಿಸಿದ್ದರು.