Friday, March 29, 2024
spot_img
HomeChikballapurಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದೇವಿಮಂಜುನಾಥ್ ಅವಿರೋದ ಆಯ್ಕೆ

ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದೇವಿಮಂಜುನಾಥ್ ಅವಿರೋದ ಆಯ್ಕೆ

ಪಾಲಾರ್ ಪತ್ರಿಕೆ | Palar Pathrike

ಗೌರಿಬಿದನೂರು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ದೇವಿಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾA ಅವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕು ಗೌರವಾಧ್ಯಕ್ಷರಾಗಿ ಪಠಾಣ್‌ಸೈಫುಲ್ಲ,ಅಧ್ಯಕ್ಷರಾಗಿ ದೇವಿಮಂಜುನಾಥ್, ಪ್ರಧಾನಕಾರ್ಯದರ್ಶಿ ಸಿ.ಎ.ಮುರಳೀಧರ್, ಉಪಾಧ್ಯಕ್ಷ ಎಸ್.ಸಿ.ಜಗನ್ನಾಥರೆಡ್ಡಿ, ಸಹಕಾರ್ಯದರ್ಶಿ ಜಿ.ಎ.ಪ್ರದೀಪ್, ಖಜಾಂಚಿ ಜಿ.ಎನ್.ಅಶ್ವತ್ಥನಾರಾಯಣ್, ನಿರ್ದೇಶಕರಾಗಿ ಕೆ.ರಾಮಾಂಜಿನೇಯುಲು, ಲೇಪಾಕ್ಷಿಸಂತೋಷ್‌ರಾವ್, ವಿ.ಡಿ.ಗಣೇಶ್,ಆದಿಯಪ್ಪ, ಬಿ.ಟಿ.ಶ್ರೀನಿವಾಸಮೂರ್ತಿ, ಆರ್.ಮಂಜುನಾಥ್, ಲೋಕೇಶ್, ರವರುಗಳು ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾಧ್ಯಕ್ಷ ಎಂ.ಜಯರಾಮ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಪತ್ರಕರ್ತರು ವಸ್ತುನಿಷ್ಟೆ ವರದಿಯನ್ನು ಮಾಡುವ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು, ಪತ್ರಿಕೋದ್ಯಮ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಈ ನಿಟ್ಟಿನಲ್ಲಿ ಬದ್ದತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿ ಪತ್ರಕರ್ತರು ಸೇವಾ ಮನೋಭಾವನೆಯನ್ನು ತಮ್ಮ ಬರವಣಿಗೆಯ ಮೂಲಕ ರೂಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಹಿರಿಯ ಪತ್ರಕರ್ತ ಹಾಗೂ ನಗರಸಭೆ ಸದಸ್ಯ ಡಿ.ಜೆ.ಚಂದ್ರಮೋಹನ್ ಮಾತನಾಡಿ ಪತ್ರಕರ್ತರು ನೇರ ನಿಷ್ಟೋರವಾದಿಗಳಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದ ಮನ್ನಣೆಗೆ ಪಾತ್ರರಾಗಲು ಸಾಧ್ಯ ಎಂದು ತಿಳಿಸಿದರು.
ನೂತನ ಅಧ್ಯಕ್ಷ ದೇವಿಮಂಜುನಾಥ್ ಮಾತನಾಡಿ ಪತ್ರಕರ್ತರು ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯನ್ನು ತಮ್ಮ ಬರವಣಿಗೆಯ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದುವ ಕೆಲಸವಾಗಬೇಕು, ಸಂಘದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕಾಗತಿನಾಗರಾಜಪ್ಪ, ಖಜಾಂಚಿ ರವಿ, ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಭಿನಂದನೆ: ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಬಿಜೆಪಿ ಮುಖಂಡರುಗಳಾದ ಎನ್.ಎಂ.ರವಿನಾರಾಯಣರೆಡ್ಡಿ, ಡಾ.ಹೆಚ್.ಎಸ್.ಶಶಿಧರ್, ವೀರಶೈವ ಸಮಾಜದ ಮುಖಂಡ ಜಯಣ್ಣ,ಜಿ.ಆರ್.ಪ್ರವೀಣ್, ರೈತ ಸಂಘದ ಅಧ್ಯಕ್ಷ ಲೋಕೇಶ್‌ಗೌಡ, ಕಾರ್ಯದರ್ಶಿ ಜಿ.ರಾಜಣ್ಣ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರೋಷನ್ ಅಬ್ಬಾಸ್, ತಾಲೂಕು ಕಾರ್ಯಾಧ್ಯಕ್ಷ ನಟರಾಜ್, ಖಜಾಂಚಿ ಕೋಟೆಭಾಸ್ಕರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಸಿ.ಆರ್.ನರಸಿಂಹಮೂರ್ತಿ, ಡಾ.ಕೆ.ಕೆಂಪರಾಜು, ಕೆ.ಹೆಚ್.ಪುಟ್ಟಸ್ವಾಮಿಗೌಡ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಜಿ.ಆರ್.ಶ್ರೀನಿವಾಸ್, ಅಧ್ಯಕ್ಷ ಜಿ.ಡಿ.ಶಿವಕುಮಾರ್, ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘ, ಸವಿತಾ ಸಮಾಜದ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments