Thursday, July 18, 2024
spot_img
HomeChikballapurBagepalliಶ್ರೀ ಯೋಗಿ ನಾರೇಯಣ ತಾತಯ್ಯನವರ ಜಯಂತೋತ್ಸವ  ಕಾರ್ಯಕ್ರಮ

ಶ್ರೀ ಯೋಗಿ ನಾರೇಯಣ ತಾತಯ್ಯನವರ ಜಯಂತೋತ್ಸವ  ಕಾರ್ಯಕ್ರಮ

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ: ಬಾಗೇಪಲ್ಲಿ ತಾಲ್ಲೂಕು ಕೇಂದ್ರದಲ್ಲಿ  ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಜಯಂತೋತ್ಸವ  ಕಾರ್ಯಕ್ರಮವನ್ನು ಬಲಿಜಗ ಸಮುದಾಯದವರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬಾಗೇಪಲ್ಲಿ ಪಟ್ಟಣದ ರಾಜಬೀದಿಗಳಲ್ಲಿ ಕೈವಾರ ತಾತಯ್ಯ ನವರ ಭಾವಚಿತ್ರಪಟವನ್ನು ಕುದುರೆ ರಥದಲ್ಲಿ ಮೆರವಣಿಗೆ ಮಾಡಲಾಯಿತ್ತು.ತಾಲ್ಲೂಕು ಬಲಜ ಸಂಘದ ಅಧ್ಯಕ್ಷಬಿ.ಎನ್.ಶ್ರೀನಿವಾಸ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಕೈವಾರ ತಾತಯ್ಯ ರವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಅವರ ಆದರ್ಶಗಳನ್ನು ಜನರಿಗೆ ತಲುಪಿಸಬೇಕು. ಮುಂದಿನ ವರ್ಷ ಇನ್ನಷ್ಟು ವಿಜೃಂಭಣೆಯಿಂದ ಅವರ ಜಯಂತಿಯನ್ನು ಆಚರಿಸಲಾಗುವುದು’ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಡಿ.ವಿ. ರಾಮಲಿಂಗಪ್ಪ ರವರು ಮಾತನಾಡಿ ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಬಲಿಜ ಸಮಾಜ ಮುಂದೆ ಬರಬೇಕು ಸರ್ಕಾರ 2 ಎ ಜಾರಿ ಮಾಡಬೇಕು ಬಲಿಜಗರಿಗೆ ಅಭಿವೃದ್ಧಿ ನಿಗಮ ಮಾಡಬೇಕು ಬಲಜಿಗ ಸಮುದಾಯದ ಶೈಕ್ಷಣಿಕವಾಗಿ,ಆರ್ಥಿಕವಾಗಿ, ಹಿಂದುಳಿದಿದ್ದಾರೆಆದ್ದರಿಂದ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಹಾಗೂ ಬಲಿಜ ಸಮುದಾಯದ  ಅಭಿವೃದ್ಧಿ ನಿಗಮ ಮಾಡಬೇಕು ಎಂದು  ಹೇಳಿದರು. ಹಾಗೂ ಒಂದು ಎಕರೆ ಜಮೀನನ್ನು ಸಂಘಕ್ಕೆ ನೀಡುವುದಾಗಿ ತಿಳಿಸಿದರು. ತಾತಯ್ಯ ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.ಅವರ ತತ್ವಗಳು ಸರಳವಾಗಿ ಸಾಮಾನ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಕೈವಾರ ತಾತಯ್ಯ ತಮ್ಮ ಕೀರ್ತನೆಗಳಿಂದ ಮಾಡಿದರು. ಹಾಗೂಜನರ ಕಣ್ಣು ತೆರೆಸುವಂತಹ ಪದ್ಯಗಳನ್ನು ಬರೆದಿದ್ದಾರೆ. ಶರಣ, ದಾಸ ಮತ್ತು ಸೂಫಿ ಪರಂಪರೆಗಳಿಗೆ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಅವರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

 ಈ ಸಂದರ್ಭದಲ್ಲಿ  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಬಲಿಜ ಸಮುದಾಯದವರು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎನ್. ಸಂಪಂಗಿ, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ  ಚಿಕ್ಕನರಸಿಂಹಯ್ಯ, ಬಿ.ಆರ್.ನರಸಿಂಹ ನಾಯ್ಡು, ಎ.ಜಿ.ಸುಧಾಕರ್,  ನಾಗಭೂಷಣ, ಹಾಗೂ ಹಲವಾರು ಸಮುದಾಯದ ಹಿರಿಯರು ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments