ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ: ನಗರದ 16ನೇ ವಾರ್ಡಿನ ಮಾಜಿ ನಗರಸಭಾ ಸದಸ್ಯ ತೌಡು ಮಂಜುನಾಥ್ ನೇತೃತ್ವದಲ್ಲಿ ನೂರಾರು ಯುವಕರು ಮಾಜಿ ಶಾಸಕ ಡಾ ಎಂ ಸಿ ಸುಧಾಕರ್ ಬಣವನ್ನು ತ್ಯಜಿಸಿ ದೇವನಹಳ್ಳಿ ವೇಣುಗೋಪಾಲ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆಗೊಂಡರು.
ದೇವನಹಳ್ಳಿ ವೇಣುಗೋಪಾಲ್ ಮಾತನಾಡಿ ಸೇರ್ಪಡೆಗೊಂಡAತಹ ನಾಯಕರಿಗೆ ಮತ್ತು ಯುವಕರಿಗೆ ಬಿಜೆಪಿ ಪಕ್ಷವನ್ನು ಬಲಿಷ್ಟ ಗೊಳಿಸುವಂತೆ ಕರೆಯುತ್ತಿದ್ದರು. ಸನ್ಮಾನ್ಯ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳುತ್ತಿರುವ ಎಲ್ಲಾ ಯುವಕರಿಗೆ ಒಳಿತಾಗಲೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರ ಗದ್ದುಗೆ ಹಿಡಿಯಲಿದೆಯೆಂದು ಆಶಯ ವ್ಯಕ್ತಪಡಿಸಿದರು.
ಮಾಜಿ ನಗರಸಭಾ ಸದಸ್ಯ ತೌಡು ಮಂಜುನಾಥ ಮಾತನಾಡಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಹಾಗೂ ದೇವನಹಳ್ಳಿ ವೇಣುಗೋಪಾಲ್ ರವರ ಸಮಾಜ ಸೇವೆಯನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸತ್ಯನಾರಾಯಣಸಿಂಗ್, ಮಂಜುನಾಥ್, ವೆಂಕಟೇಶ್, ಬಾಲಾಜಿಸಿಂಗ್, ರಮೇಶಚಾರಿ, ಹರೀಶ್, ಸಂದೀಪ್, ಸುದೀಪ್, ಗಣೇಶ್‌ಸಿಂಗ್, ಮಣಿಕಂಠ, ನೂರಾರು ಯುವಕರು ಸೇರ್ಪಡೆಗೊಂಡರು.