ಪಾಲಾರ್ ಪತ್ರಿಕೆ | Palar Pathrike
ಶಿಡ್ಲಘಟ್ಟ :ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಗಡಿನಾಡು ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕ ಉದ್ಘಾಟನೆ ಕಾರ್ಯಕ್ರಮ ನಡೆಯಿತು,
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಕ.ರಾ.ಗ.ರೈ.ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರೈತರ ಗ್ರಾಮಸಭೆಗೆ ತಾಲ್ಲೂಕಿನ 15 ಇಲಾಖೆ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದರೂ ಕೇವಲ 4 ಇಲಾಖೆ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗಿ ಉಳಿದ 11 ಇಲಾಖೆ ಅಧಿಕಾರಿಗಳು ಗೈರಾಜರಾಗುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂಬುವುದು ಸಾಕ್ಷಿಯಾಗಿದೆ ಎಂದರು.
ಬಡ ರೈತರ ಮಕ್ಕಳಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಿದ್ದ ಸವಲತ್ತುಗಳನ್ನು ಇಲಾಖೆ ಮಟ್ಟದ ಅಧಿಕಾರಿಗಳನ್ನು ಕರೆಸಿ ಹೋಬಳಿ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಿ ಅವರಿಗೆ ಸೌಲಭ್ಯಗಳನ್ನು ಕೋಡಿಸುವುದು, ಆರೋಗ್ಯ ಶಿಬಿರಗಳನ್ನು ಮಾಡಿ ಉಚಿತ ಶಸ಼ಚಿಕಿತ್ಸೆ ಮಾಡಿಸುವುದು, ಗ್ರಾಮ ಪಂಚಾಯಿತಿ ಕಮಿಟಿ, ಹೋಬಳಿ ಮಟ್ಟದ ಕಮಿಟಿ, ಜಿಲ್ಲಾ ಕಮಿಟಿಗಳು ರೈತರಿಗೆ ಬಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಎಲ್ಲಾ ರೀತಿಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಬೇಕು. ಜೊತೆಗೆ ಪಂಚಾಯಿತಿ ಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಚೇರಿಗಳಿಗೆ ತಿರುಗಾಡಿಸದೆ ಸೌಲಭ್ಯಗಳನ್ನು ಕೊಡಿಸುವುದು ನಮ್ಮ ಸಂಘಟನೆ ಉದ್ದೇಶವಾಗಿದೆ. ಸರ್ಕಾರಿ ಶಾಲೆಗಳಿಗೆ ಉಚಿತ ಪುಸ್ತಗಳನ್ನು ನೀಡುವುಡುವ ಕಾರ್ಯಕ್ರಮಗಳು, ಭ್ರಷ್ಟ ವಿರೋಧಿ ನೀತಿ ಅನುಸರಿಸುವ ನಿಟ್ಟಿನಲಿ ಯಾವ ಅಧಿಕಾರಿಯೂ ಹಣ ಕೇಳಬಾರದು, ಒಂದು ವೇಳೆ ಹಣ ಕೇಳಿದರೆ ನಮ್ಮ ಜಿಲ್ಲಾ ಸಂಘಕ್ಕೆ ದೂರು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೆ 5000 ಸದಸ್ಯತ್ವ ನೊಂದಣಿ ಮಾಡಿಸಲು ಹೊರಟಿದ್ದೇವೆ, ತಾಲ್ಲೂಕಿನಲ್ಲಿ 150 ಮಂದಿ ಸದಸ್ಯರಾಗಿದ್ದಾರೆ.ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಇಲಾಖಾಧಿಕಾರಿಗಳು ಇಲಾಖಾವಾರು ದೊರೆಯುವ ಸರ್ಕಾರಿ ಸೌಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಿಗೆ ನೊಂದಣಿ ಕಾರ್ಡ್ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ವಿ.ವೆಂಕಟೇಶ್, ವಿಜಯಕುಮಾರ್, ಕ.ರಾ.ಗ.ರೈ.ಸಂಘದ ಜಿಲ್ಲಾಧ್ಯಕ್ಷ ಬಿ.ಬಸವರಾಜು, ಜಿಲ್ಲಾ ಕಾರ್ಯದರ್ಶಿ ಟಿ.ಮುನಿರಾಜು, ತಾ.ಅಧ್ಯಕ್ಷ ಚಂದ್ರಪ್ಪ, ಹಿಂದುಳಿದ ವರ್ಗ ಅಧ್ಯಕ್ಷ ವೆಂಕಟೇಶ್, ಒಬಿಸಿ ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ, ಎಸ್.ಎಂ.ಭಾಗ್ಯರೇಖಾ, ತಾಲ್ಲೂಕು ಮಹಿಳಾ ಸಂಘದ ಅಧ್ಯಕ್ಷೆ ಗಾಯಿತ್ರಿ, ಬಿ.ಎಂ.ವೆಂಕಟೇಶ್, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ಎಂ.ಪ್ರಭಾಕರರೆಡ್ಡಿ ಹಾಜರಿದ್ದರು.