ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ : ಮಾಜಿ ಸಚಿವ ದಿವಗಂತ ಕೆ.ಎಂ. ಕೃಷ್ಣಾರೆಡ್ಡಿ ಕ್ಷೇತ್ರದ ಬಡಬಗ್ಗರಿಗೆ ಉನ್ನತ ವಿದ್ಯಾಭ್ಯಾಸ, ಆರೊಗ್ಯ, ಉದ್ಯೋಗ ಕಲ್ಪಿಸಬೇಕೆಂಬ ಆಶಯವನ್ನು ಹೊಂದಿ ಮೂರಾರ್ಜಿ ದೇಸಾಯಿ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿದರು, ಅದರಂತೆ ಅವರ ಆಶಯಗಳನ್ನು ಉಳಿಸಿ ಬೆಳೆಸಬೇಕಾದರೆ ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ತನಗೆ ತಾವೆಲ್ಲ್ಲರು ಮತ ನೀಡಿ ಗೆಲಿಸಿದಾಗ ಮಾತ್ರ ಸಾದ್ಯವಾಗುತ್ತದೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎನ್.ವೇಣುಗೋಪಾಲ್ ತಿಳಿಸಿದರು.
ಚಿಂತಾಮಣಿ ತಾಲ್ಲೂಕು ಮಿಂಡಗಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸೇರ್ಪಡೆ ಹಾಗೂ ಪಂಚಾಯಿತಿ ಮಟ್ಟದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎನ್.ವೇಣುಗೋಪಾಲ್ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ ದಿವಂಗತ ಕೆ.ಎಂ.ಕೃಷ್ಣಾರೆಡ್ಡಿ ಆಶಯದಂತೆ ಕ್ಷೇತ್ರದ ಯುವಕರಿಗೆ ಉದ್ಯೋಗ ಕಲ್ಪಿಸಲು ಉದ್ಯೋಗ ಮೇಳಗಳು, ಆರೋಗ್ಯ ಶಿಬಿರಗಳನ್ನು ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರದ ಅಡಿಯಲ್ಲಿ ಎಲ್ಲಾ ಜನಪರ ಯೋಜನೆಗಳನ್ನು ಕಲ್ಪಿಸಲಾಗುವುದು ಎಂದರು.
ಇನ್ನು ಹತ್ತು ವರ್ಷಗಳಿಂದ ಆಡಳಿತ ನಡೆಸಿದ ಹಾಲಿ ಶಾಸಕರ ಅಭಿವೃದ್ದಿ ಕ್ಷೇತ್ರದಲ್ಲಿ ಶೂನ್ಯವಾಗಿದ್ದು, ಬರಿ ಪರ್ಸೆಂಟೇಜ್ ಪಡೆದು ಅಭಿವೃದ್ದಿಯನ್ನು ಮರೆತರು, ಮಾಜಿ ಶಾಸಕರು ಕೂಡ ಎರಡು ಬಾರಿ ಶಾಸಕರಾಗಿದ್ದರು ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕೆಲಸ ಕಾರ್ಯಗಳು ನಡೆದಿಲ್ಲ, ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜ್ ಇಲ್ಲ, ಇಂಜಿನಿಯರಿAಗ್ ಕಾಲೇಜ್ ಇಲ್ಲ, ಕೇವಲ ಒಬ್ಬರ ಮೇಲ್ಲೊಬ್ಬರನ್ನು ಎತ್ತಿಕಟ್ಟಿಕೊಂಡು ರಾಜಕೀಯ ಮಾಡ್ಕೊಂಡು ಕಾಲ ಕಳೆದರು ಎಂದು ಹಾಲಿ ಮತ್ತು ಮಾಜಿ ಶಾಸಕರ ವಿರುದ್ದ ಕಿಡಿಕಾರಿದರು.
ಇನ್ನೂ ಕಾರ್ಯಕ್ರಮಕ್ಕೂ ಮೊದಲ ದೇವನಹಳ್ಳಿ ಗೋಪಿರವರಿಗೆ ಮಿಂಡಗಲ್ ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಮಿಂಡಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಡಹಳ್ಳಿ ಮುನಿವೆಂಕಟರೆಡ್ಡಿ, ಗೊಲ್ಲಪಲ್ಲಿ ದೇವರಾಜ್, ಗುಟ್ಟೂರು ರಾಜಣ್ಣ, ಮಿಂಡಗಲ್ ಸುಧಾಕರ್, ನಳ್ಳರಾಳ್ಳÀಪಲ್ಲಿ ರಘು, ವೆಂಕಟರೆಡ್ಡಿ ಸೇರಿದಂತೆ ಮತ್ತಿತರರು ಕಾಂಗ್ರೇಸ್ ಪಕ್ಷ ತೊರೆದು ದೇವನಹಳ್ಳಿ ಗೋಪಿರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ದೇವನಹಳ್ಳಿ ಗೋಪಿರವರು ಆತ್ಮೀಯವಾಗಿ ಪಕ್ಷದ ಶಾಲು ಹಾಕಿ, ಪಕ್ಷಕ್ಕೆ ಬರಮಾಡಿಕೊಂಡು ಪಕ್ಷದ ಸಂಘಟನೆಗಾಗಿ ದುಡಿಯುವಂತೆ ಶುಭ ಹಾರೈಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ ಮುನಿವೆಂಕಟರೆಡ್ಡಿ ಮಾತನಾಡಿ 50-60 ವರ್ಷಗಳು ನಿಯತ್ತಾಗಿ ನಿಷ್ಟೆಯಿಂದ ಮಾಜಿ ಶಾಸಕ ಸುಧಾಕರ್ ರವರ ಕುಟುಂಬಕ್ಕೆ ದುಡಿದೆ ಆದರೆ ಅವರು ಹೇಳ್ತಾರೆ ಮುನಿವೆಂಕಟರೆಡ್ಡಿ ದುಡ್ಡಿಗೆ ಮಾರಿಹೋಗಿದ್ದಾರೆಂದು ಹೇಳ್ತಾರೆ ಅವರಿಗೆ ಹೇಗೆ ಮನಸ್ಸು ಬರುತ್ತೆ ಎಂದು ಮಾಜಿ ಶಾಸಕ ಎಂ.ಸಿ.ಸುಧಾಕರ್ ವಿರುದ್ದ ಕಿಡಿಕಾರಿದ ಅವರು ಸ್ವಾಭಿಮಾನಕ್ಕೆ ದುಡಿಯುತ್ತಿರುವನು ನಾನು ಯಾವುದೇ ದುಡ್ಡಿಗೆ ನಾನು ಸ್ವಾಭಿಮಾನವನ್ನು ಮಾರಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮತ್ತೊಬ್ಬರಾದ ದೇವರಾಜ್ ಮಾತನಾಡಿ ಹತ್ತಾರು ವರ್ಷಗಳು ಸುಧಾಕರ್ ರವರ ಬಣದಲ್ಲಿ ದುಡಿದೆ ಒಂಬತ್ತು ಲಕ್ಷ ಕೈಯಿಂದ ಖರ್ಚು ಮಾಡಿದೆ ಆದರೆ ನಮಗೆ ಬೆಲೆ ಇಲ್ಲ ಸ್ವಾಭಿಮಾನಕ್ಕೆ ಬೆಲೆ ಇಲ್ಲದ ಮೇಲೆ ಮನುಷ್ಯ ಇದ್ದು ಏನು ಪ್ರಯೋಜನ? ಅದಕ್ಕೆ ಸುಧಾಕರ್ ಬಣ ಬಿಟ್ಟು ಬಿಜೆಪಿ ಸೇರ್ಪಡೆ ಆಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಶಿವಾರೆಡ್ಡಿ, ಪ್ರ.ಕಾರ್ಯದರ್ಶಿ ಡಾಬಾ ಮಂಜು, ಜಿಲ್ಲಾ ಉಪಾಧ್ಯಕ್ಷ ಮಾಡಿಕೆರೆ ಆರುಣ್ ಬಾಬು, ಪೆದ್ದೂರು ನಾಗರಾಜರೆಡ್ಡಿ, ಮಾಜಿ ತಾ.ಪಂ ಸದಸ್ಯ ಗುಡಾರ್ಲಹಳ್ಳಿ ರಾಜಣ್ಣ, ಗುಟ್ಟೂರು ಜಯರಾಮರೆಡ್ಡಿ, ಸಂತೇಕಲ್ಲಹಳ್ಳಿ ಲಕ್ಕಣ್ಣ, ದೊಡ್ಡಗಂಜೂರು ನಾಗರಾಜ್, ಮನೋಹರರೆಡ್ಡಿ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.