Tuesday, April 23, 2024
spot_img
HomeChikballapurBagepalliಮಹಿಳೆಯರಿಗೆ ಸೀರೆ, ಅರಿಶಿನ ,ಕುಂಕುಮ, ಬಳೆಗಳು ನೀಡುವುದು ನಮ್ಮ ದೇಶದ ಸಂಸ್ಕೃತಿ : ಡಿ.ಜೆ ನಾಗರಾಜರೆಡ್ಡಿ

ಮಹಿಳೆಯರಿಗೆ ಸೀರೆ, ಅರಿಶಿನ ,ಕುಂಕುಮ, ಬಳೆಗಳು ನೀಡುವುದು ನಮ್ಮ ದೇಶದ ಸಂಸ್ಕೃತಿ : ಡಿ.ಜೆ ನಾಗರಾಜರೆಡ್ಡಿ

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ: ಮಹಿಳೆಯರಿಗೆ ನೀಡುವ ಸೀರೆ, ಅರಿಶಿನ ,ಕುಂಕುಮ, ಬಳೆಗಳ ಬಗ್ಗೆ ಪ್ರಶ್ನಿಸುವವರು ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ತಿಳಿಯದವರು ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್. ರಾಜಾರೆಡ್ಡಿ ತಿಳಿಸಿದರು.ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಜೆ ನಾಗರಾಜರೆಡ್ಡಿ ರವರು ಮನೆ ಮನೆಗೆ ಭೇಟಿ ಮತ್ತು ಮಹಿಳೆಯರಿಗೆ ಸೀರೆ, ಅರಿಶಿನ, ಕುಂಕುಮ, ಬಳೆಗಳನ್ನು ನೀಡುವ ಭಾಗೀನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರಿಗೆ ಬಾಗೀನ ಕೊಡುವುದು ನಮ್ಮ ಸಂಸ್ಕೃತಿ. ಮಕ್ಕಳಿಗೆ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಮಹಿಳೆಯರನ್ನು ಗೌರವ ಭಾವದಿಂದ ಕಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿ ಸೀರೆ, ಅರಿಶಿನ-ಕುಂಕುಮ ಬಾಗಿನ ನೀಡುವುದು ಹಿಂದೂ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಆಧುನಿಕತೆ ಬೆಳೆದಂತೆಲ್ಲಾ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ. ಭಾರತದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನವಿದೆ. ಅದನ್ನು ನಾವೆಲ್ಲಾ ಉಳಿಸಿಕೊಂಡು ಹೋಗಬೇಕು. ಬಾಗೀನ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯೂ ಪಾಲಿಸುವಂತೆ ಮಾಡಬೇಕು. ಅದ್ದರಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಡಿಜೆ ನಾಗರಾಜರೆಡ್ಡಿ ರವರನ್ನು ಗೆಲ್ಲಿಸಿ, ಕುಮಾರಸ್ವಾಮಿಯವರ ಕೈ ಬಲಪಡಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಜೆ. ನಾಗರಾಜರೆಡ್ಡಿ, ಯುವ ಜನತಾದಳದ ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಎಸ್.ಆರ್. ಲಕ್ಷ್ಮೀನಾರಾಯಣ, ಗುಡಿಬಂಡೆ ತಾಲ್ಲೂಕು ಜನತಾದಳದ ಕಾರ್ಯಾಧ್ಯಕ್ಷ ಮುರಳಿ, ಮುಖಂಡರಾದ ಅಪ್ಪಿ, ಕರ್ರೆ ಶ್ರೀರಾಮಪ್ಪ, ಮಲ್ಲಪ್ಪ,   ವೆಂಕಟರೆಡ್ಡಿ, ನಾಗರಾಜ ನಾಯಕ್, ಯರ್ರಪ್ಪ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments