Sunday, March 3, 2024
spot_img
HomeChikballapurಡಾ. ಎಂ. ಸಿ. ಸುಧಾಕರ್‌ಗೆ ಬೆಂಬಲ, ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಸೇರುವೆ: ವಿ ಅಮರ್

ಡಾ. ಎಂ. ಸಿ. ಸುಧಾಕರ್‌ಗೆ ಬೆಂಬಲ, ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಸೇರುವೆ: ವಿ ಅಮರ್

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ: ನಗರದ ಟ್ಯಾಂಕ್‌ಬoಡ್ ರಸ್ತೆಯಲ್ಲಿರುವ ವಿ. ಅಮರ್ ನಿವಾಸಕ್ಕೆ ಮಾಜಿ ಶಾಸಕ ಡಾ. ಎಂ. ಸಿ. ಸುಧಾಕರ್ ಸೌಹರ್ದ ಭೇಟಿ ನೀಡಿ ಕಾಂಗ್ರೇಸ್ ಪಕ್ಷಕ್ಕೆ ಆಹ್ವಾನ ನೀಡಿದರು.
ಡಾ. ಎಂ. ಸಿ. ಸುಧಾಕರ್ ಮಾತನಾಡಿ ನಮ್ಮ ತಂದೆಯವರ ಕಾಲದಲ್ಲಿ ವೆಂಕಟಸ್ವಾಮಿಯವರು ಕಾಂಗ್ರೇಸ್ ಪಕ್ಷಕ್ಕೆ ಬಲ ತುಂಬಿದವರಾಗಿದ್ದು, ಕಾಲ ನಂತರದಲ್ಲಿ ಉಂಟಾದ ಪರಿಣಾಮಗಳಿಂದ ನಾವು ಮತ್ತು ಅವರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡೆವು ಆದರೆ ಅವರು ಪುನಃ ಕಾಂಗ್ರೇಸ್ ಪಕ್ಷಕ್ಕೆ ವಿ ಅಮರ್ ಸೇರಿದಂತೆ ಅವರ ಬೆಂಬಲಿಗರು ಸೇರ್ಪಡೆಗೊಳ್ಳುವುದಾಗಿ ಭರವಸೆ ನೀಡಿದ್ದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆಂದು ಅವರ ಆಗಮನದಿಂದ ಪಕ್ಷ ಮತ್ತಷ್ಟು ಗಟ್ಟಿಗೊಳ್ಳುವುದರಲ್ಲಿ ಸಂಶಯವಿಲ್ಲವೆAದರು.
ವಿ. ಅಮರ್ ಮಾತನಾಡಿ ಜೆಡಿಎಸ್ ಪಕ್ಷಕ್ಕೆ ತಾವು ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದು ನನ್ನ ಏಳಿಗೆಯನ್ನು ಸಹಿಸದವರು ಮತ್ತು ಪಕ್ಷದ ಸಮಾರಂಭಗಳಲ್ಲಿ ನನ್ನನ್ನು ಕರೆಯದೆ ಸರ್ವಾಧಿಕಾರಿ ಧೋರಣೆಯನ್ನು ಮಾಡುತ್ತಿದ್ದುದರಿಂದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ನಾನು ನನ್ನ ಬೆಂಬಲಿಗರೊAದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ನಾಯಕನಾದ ಡಾ. ಎಂ. ಸಿ. ಸುಧಾಕರ್‌ರಿಗೆ ಬೆಂಬಲ ಸೂಚಿಸಿದ್ದು ಅದಕ್ಕೆ ಅವರ ಸಮ್ಮತಿ ಲಭ್ಯವಾದ ಹಿನ್ನಲೆಯಲ್ಲಿ ಅವರು ನಮ್ಮ ಮನೆಗೆ ಸೌಹರ್ದ ಭೇಟಿ ನೀಡುವುದರ ಮೂಲಕ ಮುಂದಿನ ದಿನಗಳಲ್ಲಿ ಒಂದು ಸೂಕ್ತ ವೇದಿಕೆಯಲ್ಲಿ ಕಾಂಗ್ರೇಸ್ ಸೇರ್ಪಡೆಗೊಂಡು ಪಕ್ಷವನ್ನು ಅಧಿಕಾರಕ್ಕೆ ತರುವುದರ ಮೂಲಕ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ನಾನು ಮತ್ತು ನಮ್ಮ ಎಲ್ಲಾ ಬೆಂಬಲಿಗರು ಶ್ರಮಿಸುವುದಾಗಿ ತಿಳಿಸಿದರು.
ಕ.ದ.ಸಂ.ಸ. ರಾಜ್ಯ ಸಂಘಟನಾ ಕಾರ್ಯದರ್ಶಿ ಜನಾರ್ಧನಬಾಬು ಮಾತನಾಡಿ ಸಂದೇಶ್ ಮತ್ತು ಅವರ ತಾಯಿಯವರನ್ನು ಬಿಟ್ಟರೆ ಉಳಿದವರೆಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುತ್ತಿರುವುದಾಗಿ ಯಾವುದೇ ಕಾರಣಕ್ಕೂ ನಮ್ಮ ಇಡೀ ಕುಟುಂಬ ಬೇರೆ ಪಕ್ಷಕ್ಕೆ ಬೆಂಬಲಿಸಿಲ್ಲವೆAದರು.
ಈ ಸಂದರ್ಭದಲ್ಲಿ ವೆಂಕಟಸ್ವಾಮಿ , ಕೃಷÀ್ಣಪ್ಪ, ವಿ. ನರಸಿಂಹಪ್ಪ, ಗ್ರಾ.ಪಂ ಉಪಾಧ್ಯಕ್ಷೆಯ ಪುತ್ರ ತನ್ವೀರ್, ಕೃಷÀ್ಣಪ್ಪ ನಾರಾಯಣಸ್ವಾಮಿ, ಮಲ್ಲಯ್ಯ, ನಲ್ಲಗುಟ್ಲಹಳ್ಳಿ ಆನಂದ್, ಮೋಹನ್, ಮಂಜು, ನರಸಿಂಹಪ್ಪ, ರಮೇಶ್, ಮುನಿಯಪ್ಪ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments