ಪಾಲಾರ್ ಪತ್ರಿಕೆ | Palar Pathrike
ಚಿಂತಾಮಣಿ : ಪುರಾತನ ಕ್ಷೇತ್ರವಾದ ಆಲಂಬಗಿರಿ ಕಲ್ಕಿ ಲಕ್ಷಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೂತನ ಶೋಭಕೃತುನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು. ದೇವಾಲಯದಲ್ಲಿ ಬೆಳಗಿನಿಂದಲೇ ಭಕ್ತಾಧಿಗಳು ವಿಶೇಷ ಪೂಜೆಗಳನ್ನು ನೇರವೇರಿಸಿದರು. ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಗಳನ್ನು ಅಲಂಕರಿಸಲಾಗಿತ್ತು.
ಆಲAಬಗಿರಿ ದೇವಾಲಯದಲ್ಲಿ ನೂತನ ಸಂವತ್ಸರದAದು ಪಂಚಾAಗ ಶ್ರವಣವನ್ನು ಯುಗಾದಿ ಹಬ್ಬದಂದು ಏರ್ಪಡಿಸಲಾಗುತ್ತದೆ. ಊರಿನ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಹಬ್ಬದ ಊಟ ಮಾಡಿಕೊಂಡು ದೇವಾಲಯದ ಪ್ರಾಂಗಣದಲ್ಲಿ ಸೇರುವ ವ್ಯವಸ್ಥೆ ಮೊದಲಿನಿಂದಲೂ ಸಂಪ್ರದಾಯದAತೆ ನಡೆದುಕೊಂಡು ಬರುತ್ತಿದೆ.
ಶೋಭಕೃತುನಾಮ ಸಂವತ್ಸರದ ಪ್ರಥಮದಿನ ಯುಗಾದಿಯಂದು ಪಂಚಾAಗಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಅರ್ಚಕ ವೃಂದ ಮಂತ್ರಘೋಷದೊAದಿಗೆ ಪಂಚಾAಗ ಶ್ರವಣವನ್ನು ಮಾಡಿದರು. ಈ ಸಂದರ್ಭದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ|| ಎಂ.ಆರ್.ಜಯರಾಮ್ ದಂಪತಿಗಳು ರವರು ಭಾಗವಹಿಸಿದ್ದರು.
ಯುಗಾದಿ ಪ್ರಯುಕ್ತ ವಿಶೇಷ ಪ್ರಾಕಾರೋತ್ಸವವನ್ನು ಏರ್ಪಡಿಸಲಾಗಿತ್ತು. ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಲಂಬಗಿರಿ ಮತ್ತು ಸುತ್ತ ಮುತ್ತಲಿನ ಊರಿನ ಪ್ರಮುಖರು ಮತ್ತು ಭಕ್ತಾದಿಗಳು ಪಂಚಾAಗ ಶ್ರವಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.