Thursday, July 18, 2024
spot_img
HomeBangaloreಕುಸುಬೆ ಬೆಳೆಗೆ ಪುನಶ್ಚೇತನ ನೀಡಲು ಮಿಷನ್ ಸ್ಯಾಫ್ಲವರ್ ಅಭಿಯಾನ

ಕುಸುಬೆ ಬೆಳೆಗೆ ಪುನಶ್ಚೇತನ ನೀಡಲು ಮಿಷನ್ ಸ್ಯಾಫ್ಲವರ್ ಅಭಿಯಾನ


ಪಾಲಾರ್ ಪತ್ರಿಕೆ | Palar Patrike

ಬೆಂಗಳೂರು: ಡಿ. 1 ರಂದು ಧಾರವಾಡದಲ್ಲಿ ನೈಸರ್ಗಿಕ ಕೃಷಿ ಮತ್ತು ಕುಸುಬೆ ಎಣ್ಣೆಕಾಳು ಬೆಳೆ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ರಾಜ್ಯದಲ್ಲಿ ಖಾದ್ಯ ತೈಲ ಕುಸುಬೆ ಎಣ್ಣೆ ಕಾಳು ಬೆಳೆಯನ್ನು ಪುನಶ್ಚೇತನಗೊಳಿಸಲು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಧಾರವಾಡದ ಜಡಿಗೆವಾಡದಲ್ಲಿರುವ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಮುಂದಾಗಿದ್ದು,*“ಮಿಷನ್ ಸ್ಯಾಫ್ಲವರ್: ಅಭಿಯಾನಕ್ಕೆ ಚಾಲನೆ ನೀಡಿದೆ. ಇದರ ಮೊದಲ ಹೆಜ್ಜಯಾಗಿ ಶೂನ್ಯ ಬಜೆಟ್ ನೈಸರ್ಗಿಕ ಕೃಷಿಯಡಿ ಕುಸುಬೆ ಬೆಳೆಗೆ ವೈಭವವನ್ನು ತಂದುಕೊಡಲು ಡಿಸೆಂಬರ್ 1 ರಂದು ಧಾರವಾಡ ಕೃಷಿ ವಿವಿಯ ಸಿಬ್ಬಂದಿ ತರಬೇತಿ ಘಟಕದಲ್ಲಿ ರಾಜ್ಯಮಟ್ಟದ “ನೈಸರ್ಗಿಕ ಕೃಷಿ ಮತ್ತು ಕುಸುಬೆ ಎಣ್ಣೆಕಾಳು ಬೆಳೆ: ಕುರಿತ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿದೆ.*
ಕೃಷಿ ವಿಜ್ಞಾನಿಗಳು, ಸಂಶೋಧಕರು, ರೈತರು ಮತ್ತಿತರ ಪಾಲುದಾರರು ಪಾಲ್ಗೊಳ್ಳಲಿದ್ದು, ಕುಸುಬೆಯ ಮಹತ್ವ ಮತ್ತು ಉತ್ತೇಜನ ಕುರಿತು ಮಾತನಾಡಲಿದ್ದಾರೆ. ಧಾರವಾಡ ಕೃಷಿ ವಿವಿ ಕುಲಪತಿ ಡಾ. ಬಿ.ಎಲ್. ಪಾಟೀಲ್ ಕಾರ್ಯಾಗಾರ ಉದ್ಘಾಟಿಸಲಿದ್ದು, ಧಾರವಾಡ ಪಶ್ವಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಶಶಿ ಮೌಳಿ ಕುಲಕರ್ಣಿ, ಧಾರವಾಡ ಕೃಷಿ ವಿವಿ ವಿಸ್ತರಣಾ ವಿಭಾಗದ ನಿರ್ದೇಶಕ ಡಾ. ಎ.ಎಸ್. ವಸ್ತ್ರದ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶೂನ್ಯ ಬಜೆಟ್ ನೈಸರ್ಗಿಕ ಕೃಷಿಯ ದಕ್ಷಿಣ ವಿಭಾಗದ ಸಂಚಾಲಕ ಪ್ರಸನ್ನಮೂರ್ತಿ ಟಿ, ಬೆಂಗಳೂರು ದಕ್ಷಿಣ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ ವಿ.ಎಂ, ಕುಸುಬೆ ಬೆಳೆಯನ್ನು ಹೆಚ್ಚು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುವುದು. ವಿಶ್ವ ಸಂಸ್ಥೆ ಈ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಆರೋಗ್ಯಕ್ಕೆ ಪೂರಕವಾದ, ಆರ್ಥಿಕವಾಗಿಯೂ ಲಾಭದಾಯಕವಾಗಿರುವ ಕುಸುಬೆ ಬೆಳೆಯಿಂದ ರೈತರ ಆದಾಯ ಹೆಚ್ಚಿಸಲು ನೆರವಾಗಲಿದೆ ಎಂದರು.
ಭಾರತದಲ್ಲಿ ಖಾದ್ಯ ತೈಲಕ್ಕಾಗಿ ಬೆಳೆಸಲಾಗುವ ಎಣ್ಣೆಬೀಜಗಳ ಬೆಳೆಗಳಲ್ಲಿ ಕುಸುಬೆ ಕೂಡ ಒಂದು. ಕುಸುಬೆಯಿಂದ ತೆಗೆದ ಹಳದಿ ಮತ್ತು ಕೆಂಪು ವರ್ಣದ್ರವ್ಯವನ್ನು ಬೆಣ್ಣೆ, ರೇಷ್ಮೆ ಇತ್ಯಾದಿ ಬಣ್ಣಗಳಲ್ಲಿ ಬಳಸಲಾಗುತ್ತಿತ್ತು. ಇದನ್ನು ವಿದೇಶಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ರಾಜ್ಯದಲ್ಲಿ ಕುಸುಬೆಯ ವಿಸ್ತೀರ್ಣ ಸುಮಾರು 0.40 ಲಕ್ಷ ಹೆಕ್ಟೇರ್. ಕುಸುಬೆಯ ಸರಾಸರಿ ಉತ್ಪಾದನೆಯು ಹೆಕ್ಟೇರ್‌ಗೆ ಸುಮಾರು 3 ರಿಂದ 4 ಕ್ವಿಂಟಾಲ್ ನಷ್ಟಿದೆ. ತಂಪಾದ ವಾತಾವರಣದಲ್ಲಿ ಆಳವಾದ ಕಪ್ಪು ಮಣ್ಣಿನಲ್ಲಿ ಉತ್ತಮ ಫಸಲು ಬರುತ್ತದೆ. ಈ ಸಸ್ಯ ಮುಳ್ಳಿನಿಂದ ಕೂಡಿದೆ ಮತ್ತು ಬಹುತೇಕ ಕಡಿಮೆ ನೀರಿನಿಂದ ಬೆಳೆಯಲಾಗುತ್ತದೆ ಎಂದರು.
ಇದು ರಕ್ತವನ್ನು ತೆಳುವಾಗಿಸುತ್ತದೆ. ಖಾದ್ಯ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ನಮಗೆ ದೇಶೀಯವಾಗಿರುವ ಕುಸುಬೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ವಿದೇಶಿ ವಿನಿಮಯವನ್ನು ತಗ್ಗಿಸಬಹುದು. ಮಿಷನ್ ಸ್ಯಾಫ್ಲವರ್‌ ನಡಿ ಬೆಳೆಗಾರರು, ಸಂಶೋಧನಾ ಸಂಸ್ಥೆಗಳು, ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಸರಿಯಾದ ಸಂಪರ್ಕವನ್ನು ಸ್ಥಾಪಿಸುವ, ವ್ಯಾಪಕ ಆರೋಗ್ಯ ಪ್ರಯೋಜನಗಳಿಗಾಗಿ ಗ್ರಾಹಕರಲ್ಲಿ ಕುಸುಬೆ ಖಾದ್ಯ ತೈಲದ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ವಿಸ್ತರಣಾ ಚಟುವಟಿಕೆಗಳನ್ನು ಸಂಘಟಿಸಲು ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಸಾಧಿಸಲು, ಕುಸುಬೆಯ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ, ರೈತರಿಗೆ ಸುಧಾರಿತ ತಂತ್ರಜ್ಞಾನವನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕುಸುಬೆ ಬೀಜಗಳು ಶೇ 25 ರಿಂದ 30 ರಷ್ಟು ಎಣ್ಣೆ, ಶೇ 15-22 ರಷ್ಟು ಪ್ರೋಟೀನ್ ಮತ್ತು 11-12 ರಷ್ಟು ಫೈಬರ್ ಅನ್ನು ಹೊಂದಿದೆ. ಇದು ನಿರ್ದಿಷ್ಟ ಪರಿಮಳವನ್ನು ಹೊಂದಿದ್ದು, ಸ್ಯಾಫ್ಲವರ್ ಖಾದ್ಯ ತೈಲ ರಕ್ತದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಲಿನೋಲಿಯಿಕ್ ಮತ್ತು ಒಲೀಕ್ ಆಮ್ಲವು ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕೊಬ್ಬನ್ನು ಕರಗಿಸುತ್ತದೆ, ಇದು ಅಧಿಕ ರಕ್ತದೊತ್ತಡ ತಗ್ಗಿಸಿ, ರಕ್ತ ಪರಿಚಲನೆ ಮತ್ತು ಇದು ಆರೋಗ್ಯವನ್ನು ಸುಧಾರಿಸುತ್ತದೆ ಎಂದರು.
ಮಿಷನ್ ಕುಸುಬೆಯು ಕರ್ನಾಟಕದ ಕುಸುಬೆ ಬೆಳೆಯುವ ಜಿಲ್ಲೆಗಳಾದ ಧಾರವಾಡ, ಬಿಜಾಪುರ, ಹಾವೇರಿ, ಗುಲ್ಬರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶೂನ್ಯ ಬಜೆಟ್ ನೈಸರ್ಗಿಕ ಕೃಷಿ ತಂತ್ರಗಳನ್ನು ಬಳಸಿಕೊಂಡು ಸರಣಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
*ಸುದ್ದಿಗೋಷ್ಠಿಯಲ್ಲಿ ಗುಬ್ಬಿ ತಾಲೂಕಿನ ಅಮ್ಮನಘಟ್ಟ ರೈತ ಎ.ಎಸ್. ಮಹೇಶ್, ಬೆಂಗಳೂರಿನ ಕೃಷಿ ತಜ್ಞ ಉದಯಕುಮಾರ ಕೊಳ್ಳಿಮಠ ಉಪಸ್ಥಿತರಿದ್ದರು.*

ರಾಮನಗರ, ನ.29 (ಕರ್ನಾಟಕ ವಾರ್ತೆ):  ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ಘಟಕ ಅಖಿಲ ಭಾರತ ಸಾಹಿತ್ಯ ಪರಿಷತ್, ಪವಿತ್ರ ರಾಷ್ಟಿçÃಯ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 3ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪವಿತ್ರ ರಾಷ್ಟಿçÃಯ ವಿದ್ಯಾಲಯದಲ್ಲಿ ಭಾರತದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಮಟ್ಟದ ರಾಷ್ಟಿçÃಯ ಹಬ್ಬಗಳ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಅಖಿಲ ಭಾರತ ಸಾಹಿತ್ಯ ಪರಿಷತ್ ಮಕ್ಕಳ ಘಟಕ ವತಿಯಿಂದ 6ನೇ ವಯಸ್ಸಿನಿಂದ 16ನೇ ವಯಸ್ಸಿನ ಬಾಲಕ ಬಾಲಕಿಯರಿಗೆ ರಾಜ್ಯದ, ದೇಶದ ಹಿರಿಮೆ ಸಾರುವ ಗೀತೆಗಳನ್ನು ಆಡುವ ಸ್ಪರ್ಧೆ, ರಾಮನಗರ ಜಿಲ್ಲೆಯ ಸಾಹಿತಿಗಳನ್ನು ಕುರಿತು ಭಾಷಣ ಹಾಗೂ ಸಂವಿಧಾನ ಕುರಿತಂತೆ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತ ಮಕ್ಕಳು ಡಿಸೆಂಬರ್ 1ರ ಗುರುವಾರ ಸಂಜೆ 5 ಗಂಟೆಯೊಳಗೆ ಹನ್ಶಿಕ ವಿಜೇತ. ಪಿ, ಸಂಚಾಲಕರು, ಮಕ್ಕಳ ಘಟಕ ಅಖಿಲ ಭಾರತ ಸಾಹಿತ್ಯ ಪರಿಷತ್ ರಾಮನಗರ. ದೂ.ಸಂಖ್ಯೆ: 8792701007 ಇವರಿಗೆ ಸಲ್ಲಿಸುವಂತೆ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಮಕ್ಕಳ ಘಟಕದ ಸಂಚಾಲಕರಾದ ಹನ್ಶಿಕ ವಿಜೇತ ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments