ಪಾಲಾರ್ ಪತ್ರಿಕೆ | Palar Pathrike
ಬಾಗೇಪಲ್ಲಿ: ಕರ್ನಾಟಕ ರಾಜ್ಯ ಮುಸ್ಲಿಂ ಯುನಿಟಿ ಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗ ದ ಜಿಲ್ಲಾಧ್ಯಕ್ಷ ರಾದ ಬಾಗೇಪಲ್ಲಿಯ ಡಾ. ಮಹಮ್ಮದ್ ನೂರುಲ್ಲಾ ರವರನ್ನು ನೇಮಕ ಮಾಡಲಾಗಿದೆ.ಅವರ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ಮತ್ತು ಸಂಘಟನಾತ್ಮಕ ಚಾತುರ್ಯವನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ.ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮುಸ್ಲಿಂ ಸಮುದಾಯದ ಶೈಕ್ಷಣಿಕ,ರಾಜಕೀಯ, ಆರ್ಥಿಕ ಹಾಗು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಮುದಾಯದ ಏಳ್ಗೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು.ಮುಂಬರುವ ಮೇ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 50,000 ಕ್ಕೂ ಮೇಲ್ಪಟ್ಟು ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ವನ್ನು ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಈ ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ ಯ ರಾಜ್ಯಾಧ್ಯಕ್ಷ ಅಬ್ದುಲ್ ಸತ್ತಾರ್, ರಾಜ್ಯ ಕಾರ್ಯಾಧ್ಯಕ್ಷ ಜಿ. ಎ. ಬಾವಾ, ರಾಜ್ಯ ಉಪಾಧ್ಯಕ್ಷ ಟಿ. ಎಂ. ನಾಸಿರ್, ದಕ್ಷಿಣ ಕರ್ನಾಟಕದ ರಾಜ್ಯ ಸಂಚಾಲಕ ಅಬ್ದುಲ್ ವಾಹಿದ್ ಮಾಗುಂದಿ,ಉತ್ತರ ಕರ್ನಾಟಕ ದ ರಾಜ್ಯ ಸಂಚಾಲಕ ಜಬ್ಬಾರ್ ಕಲ್ಬುರ್ಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸೀಮ್ ಸಾಬ್, ಮುಂತಾದ ಮುಖಂಡರು ಭಾಗವಹಿಸಿದ್ದರು.