ಪಾಲಾರ್ ಪತ್ರಿಕೆ | Palar Pathrike
ಗೌರಿಬಿದನೂರು: ಇದು ಸ್ಪರ್ಧಾತ್ಮಕ ಜಗತ್ತು ಇಲ್ಲಿ ಶ್ರಮಿಸುವವರು ಮಾತ್ರ ಗೆಲುವು ಪಡೆಯಲು ಸಾಧ್ಯ ತಂದೆ ತಾಯಿಯರು ಮಕ್ಕಳನ್ನು ಶಾಲೆಗೆ ಕಳುಹಿಸಿ ಕೈ ತೊಳೆದುಕೊಳ್ಳದೇ ಉತ್ತಮ ವಿದ್ಯಾವಂತರನ್ನಾಗಿ ತಯಾರು ಮಾಡಲು ಶಿಕ್ಷಕರೊಂದಿಗೆ ಸಹಕರಿಸಿ ಎಂದು ಸಂಸ್ಥೆಯ ಅಧ್ಯಕ್ಷರಾದ ಹೆಚ್.ಎನ್ ಪ್ರಕಾಶ್ ರೆಡ್ಡಿ ರವರು ತಿಳಿಸಿದರು.
ಪಟ್ಟಣದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ನಡೆದ ಎಂಎಸ್‌ಎಸ್ ಸಮೂಹ ವಿದ್ಯಾ ಸಂಸ್ಥೆಗಳ ೩೦ನೇ ವಾರ್ಷಿಕೋತ್ಸವ ತರಂಗ್ -೨೦೨೨ ಸಮಾರಂಭದಲ್ಲಿ ಮಾತನಾಡಿ ನಮ್ಮ ಸಂಸ್ಥೆ ಕಡು ಬಡುವರ ಸ್ಥಳದಲ್ಲಿ ನಡೆಯುತ್ತಿದ್ದು ಸಮಾಜಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ ಹಾಗೆಯೇ ಸಮಾಜ ಸೇವೆಯಲ್ಲೂ ಸಹ ತನ್ನದೆಯಾದ ಛಾಪನ್ನು ಮೂಡಿಸಿದೆ. ಸತತ ೧೨೫ ನೇತ್ರ ಶಸ್ತç ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದು ಸುಮಾರು ೩೦,೬೮೫ ಅಂಧರ ಬಾಳಿಗೆ ಬೆಳಕನ್ನು ನೀಡುವ ಕಾರ್ಯ ಶ್ಲಾಘನೀಯ ಎಂದು ಅವರು ತಿಳಿಸಿದರು. ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ನೀಡಬೇಕೆಂದು ಪೋಷಕರಿಗೆ ತಿಳಿಸಿದರು.
ನಮ್ಮ ಹಿರಿಯರು ಮನೆಯೇ ಮೊದಲ ಪಾಠ ಶಾಲೆ, ತಾಯಿ ಮೊದಲ ಗುರು ಎಂದಿದ್ದಾರೆ. ಇಂತಹ ತಾಯಿ ಮಕ್ಕಳ ಬಳಿ ಕುಳಿತುಕೊಂಡು ಲಲ್ಲೆಯಿಂದ ಕಲಿಸಿಕೊಟ್ಟ ಶಿಕ್ಷಣ ಮಕ್ಕಳ ಬದುಕನ್ನು ಉಜ್ವಲಗೊಳಿಸುತ್ತದೆ. ಶಿಕ್ಷಣ ಸಂಸ್ಥೆಗಳು ವ್ಯಾಪಾರ ಮನೋಭಾವವನ್ನು ಬೆಳೆಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಈ ಸಂಸ್ಥೆ ಮಕ್ಕಳಿಗೆ ಶಿಕ್ಷಣವನ್ನು ಕೊಡುವುದರ ಜೊತೆಗೆ ಸಮಾಜ ಸೇವೆಯನ್ನು ಮಾಡುತ್ತಾ ಸಮಾಜದ ಬಗ್ಗೆ ತನಗಿರುವ ಕಳಕಳಿಯನ್ನು ವ್ಯಕ್ತಪಡಿಸಿದೆ ಎಂದು ವೃತ್ತ ನಿರೀಕ್ಷಕರಾದ ಕೆ.ಪಿ.ಸತ್ಯನಾರಾಯಣ್ ರವರು ತಿಳಿಸಿದರು.
ಹಿರಿಯ ವಕೀಲರು ಹಾಗೂ ಭಾರತ ಸರ್ಕಾರದ ನೋಟರಿ ಆಗಿರುವ ಪಠಾಣ್ ರಹಮತ್ತುಲ್ಲಾ ರವರು ತಮ್ಮ ಭಾಷಣದಲ್ಲಿ ಸರ್ವಜ್ಞನ ವಚನವನ್ನು ಉಲ್ಲೇಖ ಮಾಡಿ ಶಿಕ್ಷಣವು ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಮಕ್ಕಳು ಪಡೆಯಲು ಪೂರಕವಾದ ವಾತಾವರಣವನ್ನು ಪೋಷಕರು ನಿರ್ಮಾಣ ಮಾಡಬೇಕೆಂದರು.
ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಟಿ.ವಿಯಿಂದ ಕನಿಷ್ಠಪಕ್ಷ ಪಿ ಯು ಸಿ ವರೆಗೂ ದೂರವಿಡಲು ಪೋಷಕರು ಸಹ ಸಹಕರಿಸಿ ಮಕ್ಕಳ ಮನಸ್ಸನ್ನು ಗೆಲ್ಲಬೇಕು ಹಾಗೆಯೇ .ಪಟ್ಟಣದಲ್ಲಿ ೨೦ ಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ, ಆದರೆ ಈ ಎಲ್ಲಾ ಶಾಲೆಗಳಿಗಿಂತ ಭಿನ್ನವಾಗಿ ಈ ಸಂಸ್ಥೆ ಮಾದರಿಯಾಗಿ ನಿಂತಿದೆ ಎಂದು ನಗರಸಭಾ ಸದಸ್ಯರಾದ ಡಿ.ಎನ್.ವೆಂಕಟರೆಡ್ಡಿ ರವರು ತಿಳಿಸಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ನರಸಿಂಹಪ್ಪ ಮಾತನಾಡಿ ಮಕ್ಕಳಲ್ಲಿನ ಪ್ರತಿಭೆಯನ್ನು ಬಿಂಬಿಸಲು ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ ಎಂದರು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪೋಷಕರು ಪಡೆದು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಶ್ರಮಿಸಬೇಕೆಂದರು.
ಇಲ್ಲಿನ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೆ ಆದ ಹೆಸರನ್ನು ಮಾಡಿ ತಾವು ಕಲಿತ ಮೊದಲ ಶಾಲೆ ಎಂ ಎಸ್ ಎಸ್ ಶಾಲೆ ಎಂದು ಎದೆ ತಟ್ಟಿ ಹೇಳುವ ಹಾಗೆ ಉತ್ತೇಜನ ನೀಡಿದರು. ಈ ಸಂಸ್ಥೆಯು ಅನೇಕ ಸೇವ ಮನೋಭಾವ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ತರಂಗ್-೨೦೨೨ರ ಸಂಕೆತವಾಗಿರುತ್ತದೆ ಎಂದರು. ಮಕ್ಕಳಲ್ಲಿನ ಪ್ರತಿಭೆಯನ್ನು ಬಿಂಬಿಸಲು ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ ಎಂದು ನಗರಸಭಾ ಸದಸ್ಯರಾದ ಕಲೀಂ ಉಲ್ಲಾ ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷರಾದ ಕೆ.ಪಿ ಸತ್ಯನಾರಾಯಣ್ ರವರು ದೇಶ ಭಕ್ತಿ ಹಾಡನ್ನು ಹಾಡಿ ಪೋಷಕರನ್ನು ಪ್ರೇರೆಬ್ಬಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪಠಾಣ್ ಸೈಫುಲ್ಲಾ, ರ‍್ಕಿಟೆಕ್ಟ್ ಡಿ.ವಿ ರವಿತೇಜ, ಡಾ.ಆಫ್ರೀದಿ ಪಠಾಣ್ ಇದ್ದರು. ವಿದ್ಯಾರ್ಥಿಗಳು ಆಕರ್ಷಕ “ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಫಹೀಮಾ ಖಾನಂ ಶಾಲಾ ವರದಿ ಮಂಡಿಸಿದರು, ಮುಖ್ಯ ಶಿಕ್ಷಕಿ ರತ್ನಮ್ಮ ಸ್ವಾಗತಿಸಿ, ರಾಜ ಹೊನ್ನಪ್ಪ ನಾಯಕ್ ವಂದಿಸಿದರು. ಶಿಕ್ಷಕರಾದ ಆನಂದ್ ನಿರೂಪಿಸಿ, ಅಮೀನಾ ನೂರೈನ್, ನರಸಿಂಹಮೂರ್ತಿ, ಶಿಕ್ಷಕರಾದ ಸರಸ್ವತಮ್ಮ, ಶಿವಲಿಂಗಪ್ಪ, ಲಕ್ಮೀನಾರಾಯಣ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ವಹಿಸಿದರು.