ಪಾಲಾರ್ ಪತ್ರಿಕೆ | Palar Pathrike
ಶಿಡ್ಲಘಟ್ಟ : ನಗರ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ನಾಳೆ ಕ್ರಿಸ್‍ಮಸ್ ಹಬ್ಬದ ಆಚರಣೆಗೆ ತಯಾರಿ ನಡೆದಿದ್ದು, ಈಗಾಗಲೇ ಹಬ್ಬದ ಸಿದ್ಧತೆ ಗರಿಗೆದರಿವೆ.
ನಗರ ಮತ್ತು ಗ್ರಾಮೀಣ ಭಾಗದ ಹಲವು ಚರ್ಚ್‍ಗಳಿಗೆ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.
ಕ್ರೈಸ್ತ ಸಮುದಾಯದ ಶಾಂತಿಧೂತ ಏಸುಕ್ರಿಸ್ತನ ಸಂದೇಶ ಸಾರುವ ಕ್ರಿಸ್ಮಸ್
ಹಬ್ಬದ ಸಂಭ್ರಮಕ್ಕೆ ಡಿಸೆಂಬರ್ 23 ರಿಂದಲೇ ನಗರದ ಹಲವು ಮನೆಗಳಲ್ಲಿ ಸಿದ್ಧತೆಗಳು ನಡೆದಿದ್ದು, ಜನವರಿ 3 ರ ವರೆಗೂ ಕ್ರಿಸ್ ಮಸ್ ಹಬ್ಬದ ಆಚರಣೆ ನಡೆಯಲಿದೆ.
ಕ್ರಿಶ್ಚಿಯನ್ ಸಮುದಾಯದ ಮನೆಗಳಲ್ಲಿ ಕ್ರಿಸ್‍ಮಸ್‍ನ ಅಲಂಕಾರಿಕ ವಿನ್ಯಾಸದ ಕ್ರಿಸ್‍ಮಸ್ ಟ್ರೀ, ಬಣ್ಣದ ಸ್ಟಾರ್‍ಗಳು, ಸಾಂತಾಕ್ಲಾಸ್ ಬೊಂಬೆಗಳು, ಕ್ರಿಬ್‍ಗಳು, ತೋರಣಗಳು, ಸಿಂಗಾರ ಗೊಳಿಸಿದ್ದು ಸಂಭ್ರಮ ಮನೆ ಮಾಡಿದೆ.
ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ಕ್ರಿಸ್‍ಮಸ್ ಆಚರಣೆಗೆ ನಗರದಾದ್ಯಂತ ಇರುವ ಎಲ್ಲ ಚರ್ಚ್‍ಗಳು ಸಿಂಗಾರಗೊಂಡಿವೆ.
ವರದಿ ನಂದಿ ರಾಜೇಶ್ ಶಿಡ್ಲಘಟ್ಟ