ಗೌರಿಬಿದನೂರು: ಎಲ್ಲ ದಾನಗಳಿಗಿಂತ ಅನ್ನದಾನ, ವಿದ್ಯಾದಾನ ಶೇಷ್ಠವಾದುದು, ಇಂತಹ ಸತ್ಕಾರ್ಯಕ್ಕೆ ಸಾಕ್ಷಿಯಾಗಿದ್ದ ಸಿದ್ದಗಂಗಾ ಶ್ರೀಗಳು ಕಲುಯುಗದ ನಡೆದಾಡುವ ದೇವರು ಎಂದೇ ಬಿಂಬಿತರಾಗಿದ್ದರು ಎಂದು ತಹಸೀಲ್ದಾರ್ ಎಚ್.ಶ್ರೀನಿವಾಸ್ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ತ್ರಿವಿದ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಭಕ್ತ ವೃಂದ ವತಿಯಿಂದ ಹಮ್ಮಿಕೊಂಡಿದ್ದ 3ನೇ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀಗಳು ಅನ್ನದಾನದ ಜತೆಗೆ ವಿದ್ಯಾದಾನವನ್ನೂ ನಿಡಿದ ಮಹಾನ್ ಮಾನವತಾವಾದಿ, ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿ ಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ದಾಸೋಹ: ಕೊರೊನಾ ನಿಮಿತ್ತ ಸರಳವಾಗಿ ಹಮ್ಮಿಕೊಂಡಿದ್ದ ಶ್ರೀಗಳ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಕೆಲ ಕಾಲ ಮಾತ್ರ ಪ್ರಸಾದ ವಿನಿಯೋಗಿಸಲಾಯಿತು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಗಳ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುತ್ತಿದ್ದ ದೃಶ್ಯಗಳು ಭಕ್ತಿಭಾವಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡಿತ್ತು.
ಶ್ರೀ ಶಿವಕುಮಾರಸ್ವಾಮಿ ಭಕ್ತ ವೃಂದದ ಮೃತ್ಯುಜಯಣ್ಣ ಮಾತನಾಡಿ ಪ್ರತಿ ವರ್ಷದಂತೆ ಈವರ್ಷವೂ ಶ್ರೀಗಳ ಪುಣ್ಣ ಸ್ಮರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕೊರೊನಾ ನಿಮಿತ್ತ ಸರಳವಾಗಿ ಆಚರಣೆ ಮಾಡಲಾಗಿದೆ , ಕಾರ್ಯಕ್ರಮದಲ್ಲಿ ಶ್ರೀಗಳ ದಿನಚರಿಯುಳ್ಳ ಕ್ಯಾಲೆಂಡರ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು
ಕಾಯಕ್ರಮದಲ್ಲಿ ನಗರಸಭಾಧ್ಯಕ್ಷ ರೂಪಅನಂತ ರಾಜು, ಸದಸ್ಯ ಪುಣ್ಯವತಿ ಜಯಣ್ಣ, ನಂಜುAಡಪ್ಪ, ಡಿ.ಜೆ.ಚಂದ್ರ ಮೋಹನ್, ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ತರಿದಾಳು ಚಿಕ್ಕಣ್ಣ, ಕಾರ್ಯಾಧ್ಯಕ್ಷ ಎಂ.ಎನ್.ಶಶಿಧರ್, ಕಾರ್ಯದರ್ಶಿ ಶಿವ ಕುಮಾರ್, ನಿರ್ಧೇಶಕರಾದ ಜಿ.ಆರ್. ನವೀನ್, ಶ್ರೀ ಶಿವಕುಮಾರ ಸ್ವಾಮಿ ಭಕ್ತ ವೃಂದದ ಜಿ.ಆರ್.ಪ್ರವೀಣ್, ದೇವಿ ಮಂಜುನಾಥ್, ಪ್ಯಾಕ್ಟರಿನಟರಾಜ್, ಗೌರೀಶ್, ಚಂದ್ರಶೇಖರ್, ರವಿ, ಬಸವಾಪುರ ಮಹೇಶ್, ಶಿವಕುಮಾರ್, ಬೆಸ್ಕಾಂಮAಜುನಾಥ್, ಬಸವರಾಜು, ನವೀನ್, ನಟರಾಜ್, ಜಿ.ರಾಜಣ್ಣ, ಆರ್.ಮಂಜು ನಾಥ್, ಕರವೇ ಜಿ.ಎಲ್.ಅಶ್ವತ್ಥನಾರಾಯಣ್, ಪ್ರಭು, ಹಳೇಹಳ್ಳಿ ಶಿವಕುಮಾರ್, ಅನಂತರಾಜು ಮುಂತಾದವರು ಭಾಗವಹಿಸಿದ್ದರು.