Friday, April 26, 2024
spot_img
HomeChikballapurGudibandaಶ್ರೀಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮರಥೊತ್ಸವ

ಶ್ರೀಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮರಥೊತ್ಸವ

ಗುಡಿಬಂಡೆ:   ಇತಿಹಾಸ ಪ್ರಸಿದ್ಧ  ಎಲ್ಲೋಡು ಶ್ರೀಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮರಥೊತ್ಸವ ಭಾನುವಾರ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. 
ಮಾಘಮಾಸದಲ್ಲಿ ನಡೆಯುವ ಈ ರಥೋತ್ಸವಕ್ಕೆ ಲಕ್ಷ್ಮೀ ಆದಿನಾರಾಯಣಸ್ವಾಮಿ  ದೇವರ  ಉತ್ಸವಮೂರ್ತಿಯನ್ನು ಮಂಗಳವಾದ್ಯ ಹಾಗೂ ಭಕ್ತರ ಜಯ ಘೋಷಗಳ ಮೂಲಕ ವಿವಿಧ ಹೂವುಗಳಿಂದ ಶೃಂಗಾರವಾಗಿ ನಿಂತಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದ್ದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ತಹಸೀಲ್ದಾರ್ ಮನಿಷಾ ನೇತೃತ್ವದಲ್ಲಿ  ವಿಶೇಷ ಪೂಜಾ ಕಾರ್ಯಗಳೊಂದಿಗೆ  ಚಾಲನೇ ನೀಡಿದರು.
ಸಾವಿರಾರು ಭಕ್ತರು ಆಗಮನ : ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ  ರಾಜ್ಯ ಮತ್ತು ನೆರೆಯ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರ ಸಮೂಹ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ ಸಾವಿರಾರು ಜನ ಪಾಲ್ಗೊಂಡು ಗೋವಿಂದ ಗೋವಿಂದ ಎಂದು ಜಪಮಾಡುತ್ತಾ ರಥವನ್ನು ಎಳೆದು ಭಕ್ತಿಭಾವ ಮೆರೆದರು. 
 ಮಜ್ಜಿಗೆ ಪಾನಕ ಪ್ರಸಾದ ವಿತರಣೆ: ದೇವಾಲಯದ ಆವರಣದಲ್ಲಿ  ಬಿಸಿಲಿನಲ್ಲಿ ದಣಿದ ಭಕ್ತಾಧಿಗಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಳೇ ಸಂಪ್ರದಾಯದಂತೆ ತಮ್ಮ ತಮ್ಮ ಗ್ರಾಮಗಳಿಂದ ವಿಶೇಷವಾಗಿ ಮಜ್ಜಿಗೆ ಪಾನಕ ವಿತರಿಸಿದರು ಇನ್ನು ಕೆಲವರು ದೇವರಲ್ಲಿ ಹರಕೆ ಹೊತ್ತ ಭಕ್ತರು ಸಹ ಮಜ್ಜಿಗೆ, ಪಾನಕ, ಕೋಸುಂಬರಿ ಹಾಗೂ ಪ್ರಸಾದವನ್ನು ಭಕ್ತಾದಿಗಳಿಗೆ ವಿನಿಯೋಗ ಮಾಡಿದರು.  
ಅನ್ನ ಸಂತರ್ಪನೆ : ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದ್ದು, ಜನರಿಂದ ಮೆಚ್ಚುಗೆ ಪಡೆಯಬೇಕೆಂದು ಎಂದೂ ಇಲ್ಲದ ರೀತಿಯಲ್ಲಿ ಒಂದು ಕಡೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತೊಂದು ಕಡೆ ಬಿಜೆಪಿ ಮುಖಂಡ ಹಾಗೂ ಅಕಾಂಕ್ಷಿ  ಅಭ್ಯರ್ಥಿ ಸಿ.ಮುನಿರಾಜು ಪೈಪೋಟಿಯಲ್ಲಿ ಅನ್ನಸಂತರ್ಪನೆ ಕಾರ್ಯವನ್ನು ಆಯೋಜಿಸಲಾಗಿದ್ದು ಸಾವಿರಾರು ಭಕ್ತರು ಯಾವುದೇ ರಾಜಕೀಯ ಪಕ್ಷ ಎನ್ನದೇ ದೇವರ ಪ್ರಸಾದದ ರೀತಿಯಲ್ಲಿ ಸ್ವೀಕರಿಸಿದರು.
ಉಚಿತ ಆಟೋಗಳು : ಬಿಜೆಪಿ ಮುಖಂಡ ಸಿ.ಮುನಿರಾಜು ಜಾತ್ರೆ ಪ್ರಯುಕ್ತ ಭಕ್ತಾಧಿಗಳಿಗೆ ಬಾಗೇಪಲ್ಲಿಯಿಂದ, ಗುಡಿಬಂಡೆಯಿಂದ, ಹಂಪಸಂದ್ರ ದಿಂದ ಸೇರಿ‌ ಅನೇಕ ಗ್ರಾಮಗಳಿಂದ ಭಕ್ತಾದಿಗಳು ದೇವರ ದರ್ಶನ ಪಡೆಯುವ ಉದ್ದೇಶದಿಂದ ಸುಮಾರು 150 ಕ್ಕು ಹೆಚ್ಚು ಆಟೋಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳು ಉಚಿತವಾಗಿ ಆಟೋಗಳನ್ನು ಆಯೋಜಿಸಿದ್ದ ಸಿ.ಮುನಿರಾಜು ರವರಿಗೆ ಅಭಿನಂದನೆ ಸಲ್ಲಿಸಿದರು.
ಮಹಿಳೆಯರಿಗೆ ಅರಿಷಿಣ, ಕುಂಕುಮ ವ್ಯವಸ್ಥೆ : ಉಚಿತ ಆಟೋಗಳನ್ನು ವ್ಯವಸ್ಥೆ ಮಾಡಿರುವ ಜತೆಗೆ ಜಾತ್ರೆಯಲ್ಲಿ‌ ಭಾಗವಹಿಸುವ ಮಹಿಳೆಯರಿಗೆ ಅರಿಷಿಣ, ಕುಂಕುಮ ಹಾಗೂ ಬಳೆಗಳನ್ನು ನೀಡುವ ಮೂಲಕ ಜಾತ್ರೆಗೆ ಮೇರಗು ತಂದಿದ್ದು, ಸಾವಿರಾರೂ ಭಕ್ತರು ಅರಿಷಿಣ ಕುಂಕುಮವನ್ನು ಪಡೆದು ಸಿ.ಮುನಿರಾಜು ರವರಿಗೆ ಅಶಿರ್ವಾದ ನೀಡಿದರು.
 ಉಚಿತ ಸುಂಕ : ಈ ಹಿಂದೆ ಜಾತ್ರೆಯಲ್ಲಿ ಭಾಗವಹಿಸುವ ಅಂಗಡಿಗಳಿಗೆ ಮತ್ತು ವಾಹನ ನಿಲುಗಡೆಗೆ ಸುಂಕವನ್ನು ಕಟ್ಟಬೇಕಾಗಿತ್ತು, ಆದರೆ ಈ ಭಾರಿ‌ ಬಿಜೆಪಿ ಮುಖಂಡ‌ ಸಿ.ಮುನಿರಾಜು ರವರೇ ಸುಮಾರು ೯೦ ಸಾವಿರಕ್ಕೆ ಹಾರಜು ಮಾಡಿಕೊಂಡು ಯಾರೀಂದಲೂ ಸುಂಕವನ್ನು ವಸೂಲಿ ಮಾಡದಂತೆ ವ್ಯವಸ್ಥೆ ಮಾಡಿದರು.
ಬ್ಯಾನರ್ ಗಳ ವಾಗ್ದಾಳಿ : ಜಾತ್ರೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ಬಿಜೆಪಿ ಮುಖಂಡ ಸಿ.ಮುನಿರಾಜು ನೂರಾರು ಬ್ಯಾನರ್ ಗಳನ್ನು ಅಳವಡಿಸಿದ್ದು, ಬಿಜೆಪಿ ಮುಖಂಡ ಸಿ.ಮುನಿರಾಜು ರವರ ಬ್ಯಾನರ್ ಗಳನ್ನು ಕಾಂಗ್ರೆಸ್ ನವರು ಹರಿದು ಬ್ಯಾನರ್ ನಲ್ಲಿ ಮುಖದ ಭಾಗವನ್ನು ಕೊಯ್ದ ಕಾಂಗ್ರೆಸ್ ನವರ ಸಣ್ಣತನವನ್ನು ತೋರಿಸಿದ್ದಾರೆ ಮುಂದಿನ ದಿನಗಳಲ್ಲಿ ‌ಅವರಿಗೆ ಕ್ಷೇತ್ರದ ಜನತೆ ಉತ್ತರ ನೀಡುತ್ತಾರೆ ಎಂದು ಬಿಜೆಪಿ ‌ಮುಖಂಡ  ಸಿ.ಮುನಿರಾಜು ಗಂಭೀರವಾಗಿ ಆರೋಪಿಸಿದರು.
ಸೂಕ್ತ ಪೊಲೀಸ್ ಬಂದೋಬಸ್ತ್ : ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜ್ ನೇತೃತ್ವದಲ್ಲಿ ಯಾವುದೇ ಗಲಾಟೆಗಳು ಆಗದಂತೆ ಹಾಗೂ ಭಕ್ತಾದಿಗಳಿಗೆ ವಾಹನಗಳ ಕಿರಿಕಿರಿ ಆಗದಂತೆ ಪ್ರತ್ಯೇಕವಾಗಿ ‌ಕಾರು, ಆಟೋಗಳು ಸೇರಿ ನಾಲ್ಕು ಚಕ್ರದ ವಾಹನಗಳಿಗೆ ಒಂದು ಕಡೆ ಮತ್ತು ದ್ವಿಚಕ್ರ ವಾಹನಗಳಿಗೆ ಒಂದು ಕಡೆ‌ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಈ ಜಾತ್ರೆಯಲ್ಲಿ ಹೆಚ್ಚು ಆಂದ್ರಪ್ರದೇಶದ ಪಿಕ್ ಪಾಕೇಟರ್ ಗಳು ಬರುವುದರಿಂದ ಹೆಚ್ಚು ಜನದಟ್ಟಣೆ ಆಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಸೋಮವಾರ ರಾತ್ರಿಗೆ ಪಲ್ಲಕ್ಕಿ : ಭಾನುವಾರ ‌ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಮುಗಿದ ನಂತರ ಸೋಮವಾರ ರಾತ್ರಿ ದೇವರ ಪಲ್ಲಕ್ಕಿ ಆಯೋಜನೆ ಮಾಡಿದ್ದು, ಸಾವಿರಾರು ‌ಭಕ್ತರು‌ಭಾಗವಹಿಸಲಿದ್ದಾರೆಂದು ದೇವಸ್ಥಾನ ಮಂಡಳಿ ತಿಳಿಸಿದ್ದಾರೆ.
 ಗುಡಿ ಚಿತ್ರ-1 : ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವರ ಬ್ರಹ್ಮರಥವನ್ನು ಸಾವಿರಾರು ಭಕ್ತರು ಎಳೆಯುತ್ತಿರುವುದು.
ಗುಡಿ ಚಿತ್ರ-2 : ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವರ ಬ್ರಹ್ಮರಥೋತ್ಸವಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ತಹಶಿಲ್ದಾರರ್ ‌ಮಿನಿಷಾ ಸೇರಿ ಹಲವು ಗಣ್ಯರು ಚಾಲನೇ ನೀಡಿದರು.
ಗುಡಿ ಚಿತ್ರ-3 : ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆಯಲ್ಲಿ ಬಿಜೆಪಿ ಮುಖಂಡ ಸಿ.ಮುನಿರಾಜು ಜಾತ್ರೆಗೆ ಆಗಮಿಸಿದ ಹೆಂಗಸರಿಗೆ ಹರಿಶಿನ ಕುಂಕುಮ ನೀಡಿ ಬಳೆ ತೊಡೆಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments