Saturday, April 27, 2024
spot_img
HomeTumkurಶೇಂಗಾ ನಾಡಿನಲ್ಲಿ ಈ ಬಾರಿ ಶೇಂಗಾ ಬಿತ್ತನೆ ಕುಂಠಿತ : ಅವಧಿ ಮುಗಿದರೂ ಮುಟ್ಟದ ಬಿತ್ತನೆ...

ಶೇಂಗಾ ನಾಡಿನಲ್ಲಿ ಈ ಬಾರಿ ಶೇಂಗಾ ಬಿತ್ತನೆ ಕುಂಠಿತ : ಅವಧಿ ಮುಗಿದರೂ ಮುಟ್ಟದ ಬಿತ್ತನೆ ಗುರಿ

ಪಾಲಾರ್ ಪತ್ರಿಕೆ | Palar Pathrike


ಲಕ್ಷ್ಮೀಕಾಂತರಾಜು ಎಂ ಜಿ
ತುಮಕೂರು: ಶೇಂಗಾ ನಾಡೆಂದೇ ಪ್ರಸಿದ್ಧವಾದ ಶಿರಾ‌ ಮತ್ತು ಪಾವಗಡ ತಾಲ್ಲೂಕಿನಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಈ ಬಾರಿ ಶೇಂಗಾ ಬಿತ್ತನೆ ಪ್ರಮಾಣ ಕುಂಠಿತವಾಗಿದ್ದು ಇಲಾಖೆಯ ನಿರೀಕ್ಷಿತ ಬಿತ್ತನೆ ಗುರಿಯನ್ನ ತಲುಪದಾಗಿರುವುದು ಕೃಷಿ ಇಲಾಖೆಯ ಅಂಕಿ- ಅಂಶಗಳು ದೃಢೀಕರಿಸಿವೆ.

ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಾದ ಸಿರಾ ಮತ್ತು ಪಾವಗಡದಲ್ಲಿ ಶೇಂಗಾ ವಾಡಿಕೆಯ ವಾಣಿಜ್ಯ ಬೆಳೆಯಾಗಿದ್ದು, ರೈತರು ಈ ಭಾಗದಲ್ಲಿ ಹೆಚ್ಚು ಶೇಂಗಾ ಬೆಳೆಯುತ್ತಿದ್ದು ಈ ಬಾರಿ ಮುಂಗಾರು ಬೆಳೆಯಾಗಿ ಶೇಂಗಾ ಬಿತ್ತನೆ ಗುರಿಗೆ ರ‍್ಧದಷ್ಟು ಕಡಿಮೆ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ ಶೇಂಗಾ ಉತ್ಪಾದನೆ ಕಡಿಮೆ ಪ್ರಮಾಣದಲ್ಲಾಗಬಹುದಾಗಿದೆ.

ಶಿರಾ ತಾಲ್ಲೂಕಿನಲ್ಲಿ 25,179 ಹೆಕ್ಟೇರ್ ಬಿತ್ತನೆ ಗುರಿ ಇದ್ದು 8850 ಹೆಕ್ಟೇರ್ ಬಿತ್ತನೆಯಾಗಿದೆ. ಪಾವಗಡ ತಾಲ್ಲುಕಿನಲ್ಲಿ 29,457 ಹೆಕ್ಟೇರ್ ಗುರಿ ಇದ್ದು 13,829 ಹೆಕ್ಟೇರ್ ಬಿತ್ತನೆ ಯಾಗಿದೆ ಎಂದು ಕೃಷಿ ಇಲಾಖೆಯ ಮಾಹಿತಿ ತಿಳಿಸಿದ್ದು, ಇಲಾಖೆಯ ಮಾಹಿತಿ ಅನುಸಾರ ಈ ಎರಡೂ ತಾಲ್ಲೂಕಿನಲ್ಲಿ ಈ ಬಾರಿ ಶೇಂಗಾ ಬಿತ್ತನೆ ಗುರಿಗಿಂತ ರ‍್ಧಕ್ಕಿಂತ ಕಡಿಮೆಯಾಗಿರುವುದು ಕಂಡುಬಂದಿದೆ.ಶೇಂಗಾ ಬಿತ್ತನೆಗೆ ಈಗಾಗಲೇ ಅವಧಿ ಮುಗಿದಿರುವುದು ಬಿತ್ತನೆ ಗುರಿ ತಲುಪಲು ಸಾಧ್ಯವಿಲ್ಲ.

ಜುಲೈ ಮಾಹೆಯ 15 ವರೆಗೆ ಶೇಂಗಾ ಬಿತ್ತನೆಯ ವಾಡಿಕೆ ಸಮಯವಾಗಿದ್ದರೂ ಜುಲೈ ಅಂತ್ಯದವರೆಗೂ ಬಿತ್ತನೆಯಾಗಲಿದೆ. ಈ ಬಾರಿ ಬಿತ್ತನೆಗೆ ಪೂರಕವಾಗಿ ಮಳೆಯಾಗಿಲ್ಲ. ಜಡಿ ಮಳೆ, ಕ್ಷೇತ್ರವಾರು ಸಂಪರ‍್ಣ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಶೇಂಗಾ ಬಿತ್ತನೆ ಕುಂಠಿತವಾಗಿದೆ. ಕೃತಕ ನೀರಾವರಿಯಲ್ಲಿಯೂ ಬೇಸಿಗೆ ಬೆಳೆಯಾಗಿ ರೈತರುಗಳು ಶೇಂಗಾ ಬೆಳೆಯುವ ಕಾರಣ ಮುಂಗಾರಿನಲ್ಲಿ ಪ್ರಮಾಣ ಕಡಿಮೆಯಾಗಿದೆಯೆಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಮುಖ್ಯಾಂಶಗಳು

ಸಿರಾ ಮತ್ತು ಪಾವಗಡ ತಾಲ್ಲೂಕುಗಳಲ್ಲಿ ಶೇಂಗಾ ಬಿತ್ತನೆ ಗುರಿಗಿಂತ ರ‍್ಧಕ್ಕಿಂತ ಕಡಿಮೆ ಬಿತ್ತನೆ

ಮಳೆ ಕೊರತೆ ಹಿನ್ನೆಲೆ, ಬಿತ್ತನೆಗೆ ಹಿನ್ನೆಡೆ

ಜಿಲ್ಲೆಯಲ್ಲಿ ಶೇ 52.56 % ಶೇಂಗಾ ಬಿತ್ತನೆ


ಜುಲೈ ಮಧ್ಯ ಭಾಗ ಬಿತ್ತನೆ ವಾಡಿಕೆ ಸಮಯವಾದರೂ ಜುಲೈ ಅಂತ್ಯದವರೆಗೆ ಬಿತ್ತನೆಯಾಗಲಿದೆ. ಈಗ ಮಳೆಯಾಗುತ್ತಿರುವ ಕಾರಣ ಬಿತ್ತನೆ ಪ್ರಮಾಣ ಈ ತಿಂಗಳ ಅಂತ್ಯಕ್ಕೆ ಸುಧಾರಿಸಲಿದೆ. :ಅಶೋಕ್
ಪ್ರಭಾರ ಜಂಟಿ ನರ‍್ದೇಶಕ, ಕೃಷಿ ಇಲಾಖೆ
.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments