Thursday, April 25, 2024
spot_img
HomeChikballapurಜೆ.ಡಿ.ಎಸ್.ಪಕ್ಷದಿಂದ ಶಾಸಕ ಎಂ.ಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಕೆ ಪಾದಯಾತ್ರೆಯಲ್ಲಿ ಕಿಕ್ಕಿರಿದ ಅಭಿಮಾನಿಗಳ ದಂಡು!

ಜೆ.ಡಿ.ಎಸ್.ಪಕ್ಷದಿಂದ ಶಾಸಕ ಎಂ.ಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಕೆ ಪಾದಯಾತ್ರೆಯಲ್ಲಿ ಕಿಕ್ಕಿರಿದ ಅಭಿಮಾನಿಗಳ ದಂಡು!

ಪಾಲಾರ್ ಪತ್ರಿಕೆ |Palar Pathrike

ಚಿoತಾಮಣಿ: ಶಾಸಕ ಎಂ.ಕೃಷ್ಣಾರೆಡ್ಡಿ ತಮ್ಮ ಅಪಾರ ಬೆಂಬಲಿಗರೊAದಿಗೆ ಕೋಲಾರ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಬೃಹತ್ ಪಾದಯಾತ್ರೆಯ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಜೆ.ಡಿ.ಎಸ್. ಪಕ್ಷದಿಂದ ತಮ್ಮ ನಾಮಪತ್ರವನ್ನು ಸಲ್ಲಿದರು.
ಇಂದು ಬೆಳಗ್ಗಿನಿಂದಲೇ ನಗರದ ಜೋಡಿ ರಸ್ತೆ, ಎಂ.ಜಿ.ರಸ್ತೆ, ಚೇಳೂರು ವೃತ್ತ, ಬೆಂಗಳೂರು ವೃತ್ತ, ಕೋಲಾರ ರಸ್ತೆ ಸೇರಿದಂತೆ ನಗರದ ಮುಖ್ಯ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಜನರು ಜಾತ್ರೆಯಂತೆ ನೆರೆದಿದ್ದರು.
ಇಂದು ಬೆಳಿಗ್ಗೆ 6 ಗಂಟೆಗೆ ತಮ್ಮ ನಿವಾಸದಿಂದ ಹೊರಟ ಶಾಸಕರು ಕುಂದಲಹಳ್ಳಿ ಗ್ರಾಮ ದೇವತೆಯಾದ ಮದಗದಮ್ಮ, ಶ್ರೀನಾಗನಾಥೇಶ್ವರ, ಭೂ ನೀಳಾ ಸಮೇತ ಶ್ರೀ ವೆಂಕಟೇಶ್ವರಸ್ವಾಮಿಗೆ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ನಂತರ ಆಶ್ರಮದಲ್ಲಿರುವ ಶಾಸಕರ ತಂದೆ ತಾಯಿಗಳ ಸಮಾಧಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ನಂತರ ಕೈವಾರದ ಯೋಗಿನಾರೇಯಣ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮುರುಗಮಲ್ಲಾ ಅಮ್ಮಾಜಾನ್-ಬಾಬಾಜಾನ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಕೋಲಾರ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಪಾರ ಜನರೊಂದಿಗೆ ಪಾದಯಾತ್ರೆ ಮೂಲಕ ಮಧ್ಯಾಹ್ನ 12ಕ್ಕೆ ತಾಲ್ಲೂಕು ಕಛೇರಿ ಆವರಣ ತಲುಪಿದರು. ದಾರಿಯುದ್ದಕ್ಕೂ ಅಭಿಮಾನಿಗಳು ತಮಟೆ, ಡ್ರಮ್ಸ್ ವಾದನ, ಪಟಾಕಿ ಸಿಡಿತ, ಹೂವಿನ ಹಾರ ಹಾಕುವುದರ ಜೊತೆಗೆ ಅವರು ಬರುತ್ತಿದ್ದ ರಸ್ತೆಯಲ್ಲಿ ಹೂವು ಚೆಲ್ಲುವ ಮೂಲಕ ಅದ್ದೂರಿಯಾಗಿ ಚುನಾವಣಾ ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ಕರೆ ತಂದರು.
ಮೆರವಣೆಗೆ ಎರಡು ಗಂಟೆಗೂ ಹೆಚ್ಚು ಕಾಲ ಸಾಗಿದ್ದರಿಂದ ನಗರದ ಪ್ರಮುಖ ಬೀದಿಗಳಲ್ಲಿ ಜನಸಂಚಾರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು, ಬಹುತೇಕ ವಾಹನ ಮತ್ತು ಜನರು ನಗರದಲ್ಲಿ ಓಡಾಡಲು ಹರಸಾಹಸ ಪಟ್ಟರು. ರಸ್ತೆಯಲ್ಲಿ ಕಿಕ್ಕಿರಿದು ತುಂಬಿದ ಅಪಾರ ಜನರ ನಡುವೆ ತಾಲ್ಲೂಕು ಕಛೇರಿ ವೃತ್ತದ ಬಳಿ ಸೈರನ್ ಹಾಕಿಕೊಂಡು ಹಠತ್ತಾಗಿ ಬಂದ ಆಂಬುಲೆನ್ಸ್ಗೆ ದಾರಿಕೊಟ್ಟು ಮಾನವೀಯತೆ ಮೆರೆದರು.
ಪಾದಯಾತ್ರೆಯಲ್ಲಿ ಆಗಮಿಸಿದ್ದ ಅಪಾರ ಅಭಿಮಾನಿಗಳನ್ನು ತಹಸೀಲ್ದಾರ್ ಕಚೇರಿಯ 100 ಮೀಟರ್ ದೂರದಲ್ಲಿಯೇ ಪೊಲೀಸರು ತಡೆದು ನಿಲ್ಲಿಸಿದರು. ಶಾಸಕರು ಅವರ ಧರ್ಮಪತ್ನಿ ಶ್ರೀಮತಿ ರೂಪ, ಆಪ್ತ ಗೆಳೆಯ ಕುಂದಲಹಳ್ಳಿ ಜಯರಾಂ, ಹಿರಿಯ ವಕೀಲ ಬಿ.ಆರ್.ಶ್ರೀನಾಥ್, ಯುವ ಮುಖಂಡ ಲೋಕೇಶ್‌ಗೌಡ ಜೊತೆಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ತೆರಳಿ ಜೆ.ಡಿ.ಎಸ್ ಪಕ್ಷದಲ್ಲಿ ತಮ್ಮ ನಾಮ ಪತ್ರವನ್ನು ಸಲ್ಲಿಸಿದರು.
ಜನಸ್ತೋಮಕ್ಕೆ ಅಭಾರಿ: ನಾಮಪತ್ರ ಸಲ್ಲಿಸಿದ ನಂತರ ಹೊರ ಬಂದ ಶಾಸಕ ಎಂ. ಕೃಷ್ಣಾರೆಡ್ಡಿ ಮಾತನಾಡಿ ಇಂದು ಅಪಾರ ಜನಸ್ತೋಮದೊಂದಿಗೆ ಪಕ್ಷದ ಎಲ್ಲಾ ಮುಖಂಡರುಗಳು, ಕಾರ್ಯಕರ್ತರು, ನಗರಸಭೆ ಸದಸ್ಯರು, ಮಾಜಿ ನಗರಸಭೆ ಸದಸ್ಯರು, ಗ್ರಾ,ಪಂ,ಸದಸ್ಯರು, ಟಿ.ಪಿ.ಎಸ್. ಸದಸ್ಯರು, ಕುಮಾರಣ್ಣನ ಅಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನ್ಯ ದೇವೇಗೌಡರ ಮಾರ್ಗದರ್ಶನದಲ್ಲಿ ನಾಮಪತ್ರ ಸಲ್ಲಿಸಿದ್ದು 14 ವರ್ಷಗಳ ಚಿಂತಾಮಣಿ ರಾಜಕೀಯ ಅನುಭವದಲ್ಲಿ ಪ್ರöಪ್ರಥಮ ಬಾರಿಗೆ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಇಷ್ಟೊಂದು ಕಾರ್ಯಕರ್ತರು ಆಗಮಿಸಿದ್ದು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಜೆ.ಡಿ.ಎಸ್. ಪಕ್ಷಕ್ಕೆ ಗೆಲುವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments