ಪಾಲಾರ್ ಪತ್ರಿಕೆ | Palar Pathrike
ದೇವನಹಳ್ಳಿ :ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮಲದಲ್ಲಿ ಕರುಕ್ಷೇತ್ರ ನಾಟಕೋತ್ಸವ ಸಮಾರಂಭ ನಡೆಯಿತು. ನಾಟಕೋತ್ಸವದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರು, ಜಾಲಿಗೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಬೆಟ್ಟೇನಹಳ್ಳಿ ಗ್ರಾಮದ ಮುಖಂಡರು ಭಾಗಿಯಾಗಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿ.ಶಾಂತಕುಮಾರ್ ಸೇರಿದಂತೆ ಹಲವಾರು ಮುಖಂಡರಿಗೆ ನಾಟಕ ಆಯೋಜನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ದೇವನಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಅರದೇಶನಹಳ್ಳಿ ಗ್ರಾಮದ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯ್‌ಕುಮಾರ್, ಜಾಲಿಗೆ ಗ್ರಾಪಂ ಉಪಾಧ್ಯಕ್ಷ ಹೆಚ್.ಬಾಲಸುಬ್ರಮಣ್ಯ, ಸದಸ್ಯ ಮಹೇಶ್, ಹೊಸೂರು ಶ್ರೀನಿವಾಸ್, ಬೆಟ್ಟೇನಹಳ್ಳಿ ಮುನಿರಾಜು, ದೇವಗಾನಹಳ್ಳಿ ಕಿರಣ್‌ಗೌಡ, ಬೆಟ್ಟೇನಹಳ್ಳಿ ಗ್ರಾಮಸ್ಥರು, ಕಲಾವಿದರು ಇದ್ದರು.
ಚಿತ್ರ: 19 ಡಿಹೆಚ್‌ಎಲ್ ಪಿ3
ಬೆಟ್ಟೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕೋತ್ಸವದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ಅವರನ್ನು ಅಭಿನಂದಿಸಲಾಯಿತು.