Thursday, July 18, 2024
spot_img
HomeBangalore Ruralದೇವನಹಳ್ಳಿ ವಿ.ಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಸಮಧಾನದ ಹೊಗೆ ಕ್ಷೇತ್ರಕ್ಕೆ ಕೆ.ಎಚ್.ಮುನಿಯಪ್ಪ ಅಭ್ಯರ್ಥಿ ಸಾದ್ಯತೆಗೆ ಸ್ಥಳೀಯ ಅಭ್ಯರ್ಥಿಗಳಿಂದ...

ದೇವನಹಳ್ಳಿ ವಿ.ಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಸಮಧಾನದ ಹೊಗೆ ಕ್ಷೇತ್ರಕ್ಕೆ ಕೆ.ಎಚ್.ಮುನಿಯಪ್ಪ ಅಭ್ಯರ್ಥಿ ಸಾದ್ಯತೆಗೆ ಸ್ಥಳೀಯ ಅಭ್ಯರ್ಥಿಗಳಿಂದ ವಿರೋಧ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರೇ ಅಭ್ಯರ್ಥಿ ಎಂದು ಘೋಷಣೆಯಾಗದಿದ್ದರೂ ಕ್ಷೇತ್ರದಲ್ಲಿ ಹೈಕಮಾಂಡ್ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿದರೆ ಕಾಂಗ್ರೆಸ್ ಗೆಲ್ಲಿಸಿಕೊಳ್ಳುತ್ತೇವೆ. ಇಲ್ಲವಾದರೆ ಕಾಂಗ್ರೆಸ್ ಈ ಬಾರಿಯೂ ಸಹ ಸೋಲುಂಡುತ್ತದೆ ಎಂದು ಕೆ.ಎಚ್.ಮುನಿಯಪ್ಪ ಅವರಿಗೆ ಅಭ್ಯರ್ಥಿ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಘೋಷಿಸಬಾರದು ಎಂದು ಕಾಂಗ್ರೆಸ್ ನಾಯಕರು ಸಾಮೂಹಿಕವಾಗಿ ರಾಜೀನಾಮೆ ನೀಡುವುದರ ಮೂಲಕ ಒತ್ತಾಯಿಸಿದ್ದಾರೆ.
ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸಾಮೂಹಿಕ ರಾಜಿನಾಮೆ ಸಭೆಯಲ್ಲಿ ರಾಜೀನಾಮೆ ಪತ್ರಗಳಿಗೆ ಸಹಿ ಹಾಕುವುದರ ಮೂಲಕ ಬೆಂಬಲ ಸೂಚಿಸಿ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿ.ಶಾಂತಕುಮಾರ್ ಮಾತನಾಡಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹೈಕಮಾಂಡ್ ಸ್ಥಳೀಯ ಎಂಎಲ್‌ಎ ಆಕಾಂಕ್ಷಿಗಳಲ್ಲಿ ಯಾರಿಗಾದರೂ ಕೊಡಲಿ ಗೆಲ್ಲಿಸಿಕೊಳ್ಳಲಾಗುತ್ತದೆ. ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೇಟ್ ಕೊಡುತ್ತಿದ್ದಾರೆಂದು ಗಮನಕ್ಕೆ ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ರಾಜೀನಾಮೆ ನೀಡುವುದರ ಮೂಲಕ ಹೈಕಮಾಂಡ್‌ಗೆ ಸ್ಥಳೀಯ ಆಕಾಂಕ್ಷಿಗಳಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಈಗ ಹೈಕಮಾಂಡ್ ನಿರ್ಧರಿಸಿರುವ ಅಭ್ಯರ್ಥಿಯು ಕೆ.ಎಚ್.ಮುನಿಯಪ್ಪ ಅವರನ್ನು ಗುರ್ತಿಸಿದ್ದಾರೆ. ಸ್ಥಳೀಯವಾಗಿ ಇಲ್ಲಿನ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಇತರೆ ಅಧ್ಯಕ್ಷರುಗಳು, ಸದಸ್ಯರುಗಳು ಯಾರೇಂಬುದು ಅವರಿಗೆ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಯಾರೆಂಬುದು ವಿಚಾರವೇ ಗೊತ್ತಿಲ್ಲ. ಏನೇ ಕೆಲಸ ಕಾರ್ಯವಾಗಬೇಕಾದರೆ, ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬುವುದು ತಿಳಿದಿದೆ. ಕಾರ್ಯಕರ್ತರ ಮಧ್ಯೆ ಇದ್ದುಕೊಂಡು ಹಲವಾರು ಜನಸೇವೆ ಮಾಡಿರುವ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಟಿಕೇಟ್ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಿದರು.
ಇದೇ ಸಂದರ್ಭಕದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ವಿಜಯಪುರ ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಹಿಂದುಳಿದ ವರ್ಗಗಳ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಜಗನ್ನಾಥ್, ತೂಬಗೆರೆ ಹೋಬಳಿ ಅಧ್ಯಕ್ಷ ರಂಗಪ್ಪ, ಯುವ ಕಾಂಗ್ರೆಸ್‌ನ ಕೆ.ಆರ್.ನಾಗೇಶ್‌ಜಿಪಂ ಮಾಜಿ ಸದಸ್ಯರಾದ ಲಕ್ಷಿö್ಮÃನಾರಾಯಣ್, ಕೆ.ಸಿ.ಮಂಜುನಾಥ್, ಕಾರಹಳ್ಳಿ ಜಯರಾಮ್, ನಾಗೇಗೌಡ, ಪುರುಶೋತ್ತಮ್, ಮುಖಂಡರು ಕಾರ್ಯಖರ್ತರು ಇದ್ದರು.
ಚಿತ್ರ: 23 ಡಿಹೆಚ್‌ಎಲ್ ಪಿ2
ದೇವನಹಳ್ಳಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಸಾಮೂಹಿಕ ರಾಜೀನಾಮೆ ಪತ್ರವನ್ನು ತೋರಿಸುತ್ತಿರುವುದು.

ಸುದ್ದಿ 2
ದೇವನಹಳ್ಳಿ ವಿ.ಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಸಮಧಾನದ ಹೊಗೆ
ಕ್ಷೇತ್ರಕ್ಕೆ ಕೆ.ಎಚ್.ಮುನಿಯಪ್ಪ ಅಭ್ಯರ್ಥಿ ಸಾದ್ಯತೆಗೆ ಸ್ಥಳೀಯ ಅಭ್ಯರ್ಥಿಗಳಿಂದ ವಿರೋಧ
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರೇ ಅಭ್ಯರ್ಥಿ ಎಂದು ಘೋಷಣೆಯಾಗದಿದ್ದರೂ ಕ್ಷೇತ್ರದಲ್ಲಿ ಹೈಕಮಾಂಡ್ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿದರೆ ಕಾಂಗ್ರೆಸ್ ಗೆಲ್ಲಿಸಿಕೊಳ್ಳುತ್ತೇವೆ. ಇಲ್ಲವಾದರೆ ಕಾಂಗ್ರೆಸ್ ಈ ಬಾರಿಯೂ ಸಹ ಸೋಲುಂಡುತ್ತದೆ ಎಂದು ಕೆ.ಎಚ್.ಮುನಿಯಪ್ಪ ಅವರಿಗೆ ಅಭ್ಯರ್ಥಿ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಘೋಷಿಸಬಾರದು ಎಂದು ಕಾಂಗ್ರೆಸ್ ನಾಯಕರು ಸಾಮೂಹಿಕವಾಗಿ ರಾಜೀನಾಮೆ ನೀಡುವುದರ ಮೂಲಕ ಒತ್ತಾಯಿಸಿದ್ದಾರೆ.
ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸಾಮೂಹಿಕ ರಾಜಿನಾಮೆ ಸಭೆಯಲ್ಲಿ ರಾಜೀನಾಮೆ ಪತ್ರಗಳಿಗೆ ಸಹಿ ಹಾಕುವುದರ ಮೂಲಕ ಬೆಂಬಲ ಸೂಚಿಸಿ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿ.ಶಾಂತಕುಮಾರ್ ಮಾತನಾಡಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹೈಕಮಾಂಡ್ ಸ್ಥಳೀಯ ಎಂಎಲ್‌ಎ ಆಕಾಂಕ್ಷಿಗಳಲ್ಲಿ ಯಾರಿಗಾದರೂ ಕೊಡಲಿ ಗೆಲ್ಲಿಸಿಕೊಳ್ಳಲಾಗುತ್ತದೆ. ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೇಟ್ ಕೊಡುತ್ತಿದ್ದಾರೆಂದು ಗಮನಕ್ಕೆ ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ರಾಜೀನಾಮೆ ನೀಡುವುದರ ಮೂಲಕ ಹೈಕಮಾಂಡ್‌ಗೆ ಸ್ಥಳೀಯ ಆಕಾಂಕ್ಷಿಗಳಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಈಗ ಹೈಕಮಾಂಡ್ ನಿರ್ಧರಿಸಿರುವ ಅಭ್ಯರ್ಥಿಯು ಕೆ.ಎಚ್.ಮುನಿಯಪ್ಪ ಅವರನ್ನು ಗುರ್ತಿಸಿದ್ದಾರೆ. ಸ್ಥಳೀಯವಾಗಿ ಇಲ್ಲಿನ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಇತರೆ ಅಧ್ಯಕ್ಷರುಗಳು, ಸದಸ್ಯರುಗಳು ಯಾರೇಂಬುದು ಅವರಿಗೆ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಯಾರೆಂಬುದು ವಿಚಾರವೇ ಗೊತ್ತಿಲ್ಲ. ಏನೇ ಕೆಲಸ ಕಾರ್ಯವಾಗಬೇಕಾದರೆ, ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬುವುದು ತಿಳಿದಿದೆ. ಕಾರ್ಯಕರ್ತರ ಮಧ್ಯೆ ಇದ್ದುಕೊಂಡು ಹಲವಾರು ಜನಸೇವೆ ಮಾಡಿರುವ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಟಿಕೇಟ್ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಿದರು.
ಇದೇ ಸಂದರ್ಭಕದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ವಿಜಯಪುರ ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಹಿಂದುಳಿದ ವರ್ಗಗಳ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಜಗನ್ನಾಥ್, ತೂಬಗೆರೆ ಹೋಬಳಿ ಅಧ್ಯಕ್ಷ ರಂಗಪ್ಪ, ಯುವ ಕಾಂಗ್ರೆಸ್‌ನ ಕೆ.ಆರ್.ನಾಗೇಶ್‌ಜಿಪಂ ಮಾಜಿ ಸದಸ್ಯರಾದ ಲಕ್ಷಿö್ಮÃನಾರಾಯಣ್, ಕೆ.ಸಿ.ಮಂಜುನಾಥ್, ಕಾರಹಳ್ಳಿ ಜಯರಾಮ್, ನಾಗೇಗೌಡ, ಪುರುಶೋತ್ತಮ್, ಮುಖಂಡರು ಕಾರ್ಯಖರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments