Thursday, April 25, 2024
spot_img
HomeChikballapurಖಿನ್ನತೆಗೊಳಗಾಗದೆ ಆಶಾವಾದಿಗಳಾಗ

ಖಿನ್ನತೆಗೊಳಗಾಗದೆ ಆಶಾವಾದಿಗಳಾಗ

ಪಾಲಾರ್ ಪತ್ರಿಕೆ | Palar Patrike

ಚಿಂತಾಮಣಿ : ಯುವಜನತೆ ಖಿನ್ನತೆಗೊಳಗಾಗದೆ ಆಶಾವಾದಿಗಳಾಗಿರಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕಿನ ಮಾಡಿಕೆರೆಯ ಕ್ರಾಸ್‌ನ ಮಾವು ಕೊಯ್ಲೋತ್ತರ ನಿರ್ವಹಣಾ ಕೇಂದ್ರದಲ್ಲಿ ಕುರುಬೂರು ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಜನತೆಯಲ್ಲಿ ಅಪಾರವಾದ ಸಾಮರ್ಥ್ಯವಿದೆ. ಯುವಜನತೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ದೇಶ ಭವಿಷ್ಯ ಅಡಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಉತ್ಸಾಹಿಗಳಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ತಮ್ಮ ಕಲಿಯನ್ನು ತ್ವರಿತಗೊಳಿಸುವುದರೊಂದಿಗೆ, ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ದೇಶದ ಶಕ್ತಿ ಎಂದರೆ ಆ ದೇಶದ ಯುವ ಶಕ್ತಿಯೇ ಆಗಿರುತ್ತದೆ. ಇಂದಿನ ದಿನಗಳು ನಾಳೆಯ ಭವಿಷ್ಯವನ್ನು ನಿರ್ಮಾಣ ಮಾಡುತ್ತದೆ. ಆದಕಾರಣ ಈ ದಿನ ಮಾಡುವ ಕಾರ್ಯವನ್ನು ಶ್ರದ್ಥೆ, ಉತ್ಸಾಹದಿಂದ ಮಾಡಬೇಕು. ಕೆಲವೊಮ್ಮೆ ಬದುಕಿನಲ್ಲಿ ಸೋಲುಗಳು ಸಹಜವಾಗಿ ಎದುರಾಗುತ್ತದೆ, ಧೃತಿಗೆಡದೆ ಧೈರ್ಯವಾಗಿ ಮುನ್ನಡೆಯಬೇಕು. ಯುವಜನತೆ ದುಶ್ಚಟಗಳಿಗೆ ದಾಸರಾಗದೆ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಹೊಂದಬೇಕು ಎಂದರು.
ಯುವಜನತೆ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಹೊಂದಿಕೊಳ್ಳುವ ಮೌಲ್ಯಗಳು, ಶ್ರಮದಾನ, ಜೀವನ ಕೌಶಲ್ಯಗಳನ್ನು ವೃದ್ಧಿಪಡಿಸುವ ಅಂಶಗಳನ್ನು ಇಂತಹ ಶಿಬಿರಗಳಿಂದ ಪಡೆದುಕೊಳ್ಳಬಹುದಾಗಿದೆ. ಶಿಕ್ಷಣದ ಜೊತೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಂಡಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವವು ವಿಕಸನವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಯುವಜನತೆ ರೂಡಿಸಿಕೊಳ್ಳಬೇಕಾಗಿದೆ. ಇಂತಹ ಶಿಬಿರಗಳಿಂದ ಸಕಾರಾತ್ಮಕವಾದ ಚಿಂತನೆಗಳನ್ನು ಬೆಳೆಸಿಕೊಂಡು, ಸಮಾಜಮುಖಿಯಾಗಿ ಸೇವೆಯನ್ನು ಸಲ್ಲಿಸಲು ಸಹಕಾರಿಯಾಗಿದೆ ಎಂದರು.
ಶಿಬಿರಾಧಿಕಾರಿ ಸಂಜೀವ್ ರವರು ಮಾತನಾಡಿ ಶಿಬಿರದಿಂದ ಆತ್ಮಸ್ಥೆöÊರ್ಯ, ಶಿಸ್ತು. ನಾಯಕತ್ವ, ಸಹಕಾರ ಮನೋಭಾವ, ಸೇವಾ ಮನೋಭಾವ, ಸೌಹಾರ್ದತೆ, ಸಮಯದ ಸದ್ಬಳಕೆ, ರಾಷ್ಟಿçÃಯ ಭಾವೈಕ್ಯತೆ ಮುಂತಾದ ವಿಷಯಗಳನ್ನು ಶಿಬಿರಗಳಿಂದ ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ರಾಷ್ಟೀಯ ಸೇವಾ ಯೋಜನೆಯ ಪಾತ್ರ ಪ್ರಮುಖವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಗ್ರಾಮದಲ್ಲಿ ಶ್ರಮದಾನವನ್ನು ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments