Monday, April 29, 2024
spot_img
HomeBangalore Ruralಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು


ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆ ಅದು ಸಂವಿಧಾನ ರಚನೆಯಾಗಿದೆ. ಸಂವಿಧಾನವನ್ನು ರಚಿಸುವುದರ ಮೂಲಕ ಭಾರತೀಯರಿಗೆ ತಮ್ಮ ಹಕ್ಕುಗಳನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಇವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಶಿವರಾಜ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಡಾ.ಬಿ.ಅರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ನ.26ರಂದು ಸಂವಿಧಾನವನ್ನು ರಚಿಸಿ ರಾಷ್ಟçಕ್ಕೆ ಸಮರ್ಪಣೆ ಮಾಡಿದ್ದಾರೆ. ಅಂದಿನ ದಿನವನ್ನು ಸಮರ್ಪಣಾ ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಸಂವಿಧಾನ ಪೀಠಿಕೆಯಲ್ಲಿ ಹೇಳಿರುವ ಪ್ರತಿಯೊಂದು ಅಂಶವನ್ನು ಸಮಗ್ರವಾಗಿ ದೇಶದ ಏಳಿಗೆಗೆ ರೂಪಿಸಿರುವ ಸಂವಿಧಾನವಾಗಿದೆ ಎಂದು ಹೇಳಿದರು.
ರಾಜ್ಯ ಡಿಎಸ್‌ಎಸ್ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಸ್ವಾತಂತ್ರö್ಯ ಅಮೃತ ಮಹೋತ್ಸವ ಆಚರಣೆಯ ಈ ಸುಸಂದರ್ಭದಲ್ಲಿ ದೇಶದ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿರುವುದು ದುರಂತವಾಗಿದೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಂವಿಧಾನವನ್ನು ರಕ್ಷಣೆ ನಮ್ಮೆಲ್ಲರ ಆದ್ಯ ಹೊಣೆಯಾಗಿದೆ ಎಂದರು.
ತಾಲೂಕು ಡಿಎಸ್‌ಎಸ್ ಸಂಚಾಲಕ ನರಸಪ್ಪ ಮಾತನಾಡಿ, ಸಂವಿಧಾನವನ್ನು ಬರೆದು ದೇಶದ ಏಳಿಗೆಗೆ ದೇಶದ ಅಭಿವೃದ್ಧಿಗೆ ಪೂರಕವಾಗಿರುವಂತಹ ಸಂವಿಧಾನವನ್ನು ತಂದುಕೊಟ್ಟ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವುದರ ಮೂಲಕ ಸಂವಿಧಾನ ಅರ್ಪಿಸುವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಈ ವೇಳೆ ತಾಪಂ ಇಒ ವಸಂತ್‌ಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಉಮಾಪತಿ, ಎಇಇ ಕೃಷ್ಣಕುಮಾರ್, ಭರತ್, ಡಿಎಸ್‌ಎಸ್‌ನ ಪದಾಧಿಕಾರಿಗಳಾದ ಆವತಿ ತಿಮ್ಮರಾಯಪ್ಪ, ನಾರಾಯಣಸ್ವಾಮಿ, ಸಿ.ಬಿ.ಮೋಹನ್, ಮುನಿರಾಜು, ರಮೇಶ್, ವಿದ್ಯಾರ್ಥಿ ಒಕ್ಕೂಟದ ರಾಮು, ಮುಖಂಡರಾದ ವೆಂಕಟರಮಣಪ್ಪ, ಚನ್ನಕೃಷ್ಣ, ಅಂಬರೀಶ್, ವೆಂಕಟೇಶ್, ಪ್ರಕಾಶ್, ಚಂದ್ರು, ಕಾಲೋನಿ ರಾಮಣ್ಣ, ಸೋಲೂರು ನಾಗರಾಜ್, ಇತರರು ಇದ್ದರು.
ಚಿತ್ರ: 26 ಡಿಹೆಚ್‌ಎಲ್ ಪಿ1
ದೇವನಹಳ್ಳಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಡಾ.ಬಿ.ಅರ್.ಅಂಬೇಡ್ಕರ್ ಅವರ ಪುತ್ಥಳಿಗೆ ತಹಶೀಲ್ದಾರ್ ಶಿವರಾಜ್ ಮಾಲಾರ್ಪಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments