Monday, April 29, 2024
spot_img
HomeBangalore Ruralವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಬಿ.ಕೆ.ನಾರಾಯಣಸ್ವಾಮಿಗೆ ಸಂಧ ಪ್ರಶಸ್ತಿ

ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಬಿ.ಕೆ.ನಾರಾಯಣಸ್ವಾಮಿಗೆ ಸಂಧ ಪ್ರಶಸ್ತಿ

ಪಾಲಾರ್ ಪತ್ರಿಕೆ | Palar patrike

ದೇವನಹಳ್ಳಿ: ದುಬೈನ ಕನ್ನಡಿಗರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಆಯೋಜನೆ.

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ರಾಷ್ಟçಮಟ್ಟದಲ್ಲಿ ದುಬೈನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಹಬ್ಬವನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಸುಸುಂದರವಾಗಿ ಕನ್ನಡದ ಹಬ್ಬವನ್ನು ಆಚರಿಸುವುದರ ಮೂಲಕ ರಾಜ್ಯದಲ್ಲಿನ ವಿವಿಧ ಪ್ರತಿಭೆಗಳನ್ನು ಹೊಂದಿರುವ ಸಮಾಜದಲ್ಲಿ ಸಮಾಜಿಕ ಸೇವೆ ಸೇವೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕನ್ನಡ ಕೇವಲ ಕರ್ನಾಟಕಕ್ಕೆ ಸಿಮಿತವಾಗಿಲ್ಲ. ಇಡೀ ವಿಶ್ವದಾದ್ಯಂತ ಕನ್ನಡವನ್ನು ಪಸರಿಸುವ ಮಹೋನ್ನತ ಕಾರ್ಯಕ್ರಮವನ್ನು ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಯು.ಎ.ರಾಷ್ಟçದಲ್ಲಿ ಆಯೋಜಿಸಿರುವುದು ಹಲವಾರು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಮೊದಲಿಗೆ ಕಾರ್ಯಕ್ರಮದಲ್ಲಿ ಯು.ಐ.ಎ ರಾಷ್ಟçಗೀತೆಗೆ ಆಗಮಿಸಿದ್ದ ಗಣ್ಯರು ಎದ್ದುನಿಂತು ಗೌರವ ಸಲ್ಲಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ದುಬೈ ಕನ್ನಡಿಗ ಪದಾಧಿಕಾರಿಗಳು ರಾಷ್ಟç ಧ್ವಜ ಹಾಗೂ ಕನ್ನಡ ಬಾವುಟಗಳನ್ನು ಹಿಡಿದು ವೇದಿಕೆಗೆ ಆಗಮಿಸಿ, ಭುವನೇಶ್ವರಿ ದೇವಿ, ಮೈಸೂರು ಮಹರಾಜರು ಸೇರಿದಂತೆ ಕನ್ನಡಾಂಬೆಗೆ ಜೈಕಾರ ಮೊಳಗಿದರು. ನಂತರ ಭಾರತೀಯ ರಾಷ್ಟçಗೀತೆ ಮತ್ತು ನಾಡಗೀತೆಯನ್ನು ಹಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು. ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮಾಡಿದಂತಹ ಹಲವಾರರಿಗೆ ಗುರ್ತಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದೇವನಹಳ್ಳಿ ತಾಲೂಕಿನವರಾದ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಶ್ರೀಕ್ಷೇತ್ರ ಧರ್ಮಸ್ಥಳದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಅವರು ಸಮಾಜಿಕ ಸೇವೆಯಲ್ಲಿ ಗುರ್ತಿಸಿಕೊಂಡು ಪ್ರಶಸ್ತಿಯನ್ನು ಪಡೆದು ಅವರು ಮಾತನಾಡಿದರು. ಅಂತಾರಾಷ್ಟಿçÃಯ ಮಟ್ಟದಲ್ಲಿ ದುಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವಾಗಿದೆ. ಸುಮಾರು 19 ದೇಶದ ವಿವಿಐಪಿಗಳು ಸೇರಿ ವಿಶ್ವ ಕನ್ನಡ ಹಬ್ಬವನ್ನು ಆಚರಿಸುವಂತಹ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಗುರ್ತಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನವರು ಆಹ್ವಾನಿಸಿ, ಪ್ರಶಸ್ತಿಗಳನ್ನು ಗಣ್ಯರ ಮುಖೇನ ನೀಡಿದ್ದಾರೆ. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಅಲ್ಲಿನ ಅನುಭವವನ್ನು ಹಂಚಿಕೊAಡರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಾವಂತ ಸಮಾಜಿಕ, ರಾಜಕೀಯ, ಕೃಷಿ, ಇತರೆ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿರುವವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಪ್ರೋತ್ಸಾಹಿಸಲಾಯಿತು. ಈ ವೇಳೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಕಲ್ಚರಲ್ ಅಧ್ಯಕ್ಷ ರವಿ, ಕರ್ನಾಟಕ ಪ್ರೆಸ್ ಕ್ಲಬ್‌ನ ಕಲೆ ಮತ್ತು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಗುಣವಂತ ಮಂಜು, ದುಬೈನ ಕನ್ನಡಿಗ ಶೇಖ್ ರಶೀದ್, ಕರ್ನಾಟಕದ ರಾಜ ಮನೆತನದ ಯುವ ಮಹರಾಜ ಯದುವೀರ ಚಾಮರಾಜ ಒಡೆಯರ್, ಡಾ.ಮಹರ್ಷಿ ಆನಂದ್ ಗುರೂಜಿ, ಬಸವರಾನಂದ ಸ್ವಾಮಿಜಿ, ಗಲ್ಫ್ರಾಷ್ಟç ಅಧ್ಯಕ್ಷ ಸಾನಂದಾಸ್, ಹಿರಿಯ ಕವಿ ಡಾ.ಸಿ.ಸೋಮಶೇಖರ್, ಪತ್ರಕರ್ತ ಡಾ.ಟಿ.ಶಿವಕುಮಾರ್ ನಾಗರನವಲೆ, ಕನ್ನಡ ಚಲನಚಿತ್ರ ನಟರು ಮತ್ತು ನಟಿಯರು ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.
ಪೋಟೋ 26ಡಿಹೆಚ್‌ಎಲ್ ಪಿ4
ಅಂತಾರಾಷ್ಟಿçÃಯ ಮಟ್ಟದಲ್ಲಿ ದುಬೈನಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಶ್ರೀಕ್ಷೇತ್ರ ಧರ್ಮಸ್ಥಳದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಅವರಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments