Thursday, April 25, 2024
spot_img
HomeBangalore Ruralಬದುಕಿನ ನೀತಿ ನಿಯಮಗಳ ಕಟ್ಟಳೆಯೆ ಸಂವಿಧಾನ. ಮಾಜಿ ಶಾಸಕ ಜಿ ಚಂದ್ರಣ್ಣ ಅಭಿಮತ

ಬದುಕಿನ ನೀತಿ ನಿಯಮಗಳ ಕಟ್ಟಳೆಯೆ ಸಂವಿಧಾನ. ಮಾಜಿ ಶಾಸಕ ಜಿ ಚಂದ್ರಣ್ಣ ಅಭಿಮತ

ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ; ಎಲ್ಲರೂ ತಿಳಿದುಕೊಳ್ಳಬೇಕಾದ ತಿಳಿಸಬೇಕಾದ ನಿಜವಾಗಲೂ ಅನುಭವಿಸಬೇಕಾದ ಸ್ವಾತಂತ್ರ್ಯ ಸಮಾನತೆ ಭಾತೃತ್ವಗಳ ಪ್ರತೀಕ ಅನುಭವ ಜನ್ಯ ಸಾರ ಸಂಗ್ರಹವೇ ಭಾರತದ ಸಂವಿಧಾನ ಎಂದು ನೆಹರು ಯುವ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಟಿ. ಅಗ್ರಹಾರ ದೇವನಹಳ್ಳಿಯ ಪರಿವರ್ತನಾ ಕಲಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಜಿ. ಚಂದ್ರಣ್ಣ ನವರು ಉದ್ಘಾಟಿಸಿ ಮಾತನಾಡಿದರು.ಸುಮಾರು ಎರಡು ದಶಕಗಳಿಗಿಂತಲೂ ಕಲೆ,ಸಾಹಿತ್ಯ ಸಂಸ್ಕೃತಿಯನ್ನು ಯುವ ಮನಸ್ಸುಗಳಿಗೆ ಬಿತ್ತರಿಸುತ್ತಿರುವ ಪರಿವರ್ತನಾ ಕಲಾ ಸಂಸ್ಥೆ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾ ಮನುಷ್ಯನ ರೀತಿ ನೀತಿ ನಿಯಮಗಳ ಕಟ್ಟಳೆಯ ಸಂವಿಧಾನದ ಬಗ್ಗೆ ಎಲ್ಲರೂ ಅರಿತುಕೊಂಡು ಅನುಸರಿಸಿಕೊಂಡು ಬಾಳಬೇಕು ಎಂದು ಕರೆ ನೀಡಿದರು.ಸಮಾಜ ಸೇವಕರು ನಾಗರಿಕ ಸೇವಾ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ಜಿ.ಟಿ ಸದಾಶಿವಾರೆಡ್ಡಿಯವರು ಮಾತನಾಡುತ್ತಾ ಶರಣರಲ್ಲಿ ಶ್ರೇಷ್ಠರೆನಿಸಿ ಜಾತ್ಯಾತೀತವಾಗಿ ಬದುಕನ್ನು ಜಗತ್ತಿಗೆ ಸಾರಿದಂತಹ ಬಸವಣ್ಣನವರ ಅನುಭವ ಮಂಟಪ ಎಂದಿಗೂ ಲೋಕಮಾನ್ಯವಾದದ್ದು ಶರಣರ ತತ್ವಗಳಲ್ಲಿ ಬದುಕಿನ ಸಾರ ಅಡಕವಾಗಿದೆ ಅದನ್ನು ಅರಿತುಕೊಂಡು ಜಾತೀಯತೆಯನ್ನು ಹೋಗಲಾಡಿಸಿ ಸಹಬಾಳ್ವೆಯ ಬದುಕನ್ನು ಬದುಕಿದಾಗ ಮಾತ್ರ ಸಾರ್ಥಕತೆ ಮೂಡುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಶಾಲ ಮನೋಭಾವದವರಾಗಿ ಎಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಂ.ರವಿಕುಮಾರ್ ಅತಿಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡುತ್ತಾ ಪ್ರತಿಯೊಬ್ಬರು ಹೀಗೆ ಇರಬೇಕು ಎಲ್ಲರೂ ನಮ್ಮ ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲವನ್ನು ಅನುಭವಿಸಲು ಸರ್ವ ಸ್ವತಂತ್ರರು ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ವಿಶ್ವ ಮಾನವತೆಯ ನಿಟ್ಟಿನಲ್ಲಿ ಬದುಕನ್ನು ಸಾಗಿಸಿ ವಿದ್ಯಾರ್ಥಿಗಳು ಆದರ್ಶಪ್ರಾಯರಾಗಬೇಕು ಎಂದು ಕರೆ ನೀಡಿದರು.ರಸಪ್ರಶ್ನೆ ಕಾರ್ಯಕ್ರಮದಲ್ಲಿ ಗೆದ್ದಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಅತಿಥಿಗಳ ಕಡೆಯಿಂದ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಪುನೀತ್ ಗಿರೀಶ್ ತಂಡದವರಿಂದ ಅಂಬೇಡ್ಕರ್ ಗೀತ ಗಾಯನ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಅಮೀರ್ ಪಾಷಾ ರವರಿಂದ ಉಪನ್ಯಾಸ ಗಮನ ಸೆಳೆಯಿತು.ವಕೀಲರಾದ ಹಸೀನಾ ತಾಜ್ ರವರಿಂದ ಸಂವಿಧಾನ  ಕಾನೂನು ಅರಿವು ಮತ್ತು ವಿದ್ಯಾರ್ಥಿಗಳ ಜೊತೆ ಮುಕ್ತ ಸಂವಾದವನ್ನು ಹಮ್ಮಿಕೊಂಡಿದ್ದು, ಪರಿವರ್ತನಾ ಕಲಾ ಸಂಸ್ಥೆ ಕಲಾವಿದರು ಡಾ. ದೇವನಹಳ್ಳಿ ದೇವರಾಜ್ ರಚನೆ ಮತ್ತು ನಿರ್ದೇಶನದ ಯಾರು ಅಸ್ಪೃಶ್ಯ? ಎಂಬ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಚ್.ಎಮ್ ರವಿಕುಮಾರ್ ರೈತ ಮೋರ್ಚಾ ಬೆಂಗಳೂರು  ಗ್ರಾ.ಜಿಲ್ಲೆ ಅಧ್ಯಕ್ಷರು, ನೀಲೇರಿ ಅಂಬರೀಶ್ ಗೌಡ ಜಿಲ್ಲಾ ಸಂಚಾಲಕರು ಅಸಂಘಟಿತ ಕಾರ್ಮಿಕ ಪ್ರಕೋಷ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸುರೇಶ್ ಆಚಾರ್ ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಸಂಘ ದೇವನಹಳ್ಳಿ ತಾಲೂಕು, ಮುಖಂಡ ವಿಜಯಪುರ ಬೈರೇಗೌಡ,  ವಕೀಲರಾದ ಅರುಣ ಮುನಿಯಪ್ಪ,  ನೆಹರು ಯುವ ಕೇಂದ್ರದ ಅಧೀಕ್ಷಕಿ ಸುಂದರಮ್ಮ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮಂಜುಳಾ ಶಿವಬಸಪ್ಪ ದೇವಸೂರ್,ನೀರಜಾ, ಭಾನುಮತಿ, ಕಲಾವಿದರಾದ ನವ್ಯಶ್ರೀ, ಸುಪ್ರಿಯ, ಗಗನ್ ದರ್ಶನ್ ಹಾಸನ ತೇಜಸ್ ಗೌಡ, ಪಾರ್ಥ ಪ್ರಸಾದ್, ದೀಕ್ಷಿತ್, ಸಿಂಚನ, ರಘು ಹಾಜರಿದ್ದರೆ ಕಾರ್ಯಕ್ರಮದ ಸ್ವಾಗತವನ್ನು ಡಾ.ದೇವನಹಳ್ಳಿ ದೇವರಾಜ್ ಮಾಡಿದರೆ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಕಾರ್ಯದರ್ಶಿ ನೃತ್ಯ ನಿರ್ದೇಶಕಿ ದೀಪಿಕಾ ದೇವರಾಜ್ ರವರು ನಡೆಸಿಕೊಟ್ಟರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments