Sunday, April 28, 2024
spot_img
HomeBangalore Ruralಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಲಯದಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ಬ್ರಹ್ಮರಥೋತ್ಸವ

ಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಲಯದಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ಬ್ರಹ್ಮರಥೋತ್ಸವ

ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಲಯದಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ಬ್ರಹ್ಮರಥೋತ್ಸವ ಹಾಗೂ ವಿಶೇಷ ಪೂಜೆ
ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಸೌಹರ್ದತೆ ಲಭಿಸುತ್ತದೆ ತಹಶೀಲ್ದಾರ್ ಶಿವರಾಜ್ ಅಭಿಮತ
ಧಾರ್ಮಿಕ ಪೂಜಾ ಕೈಂಕರ್ಯಗಳು ಹೆಚ್ಚು ಹೆಚ್ಚು ಗ್ರಾಮಗಳಲ್ಲಿ ನಡೆಯುವುದರಿಂದ ಸೌಹರ್ದತೆಯ ವಾತಾವರಣ ಸೃಷ್ಠಿಯಾಗುತ್ತದೆ ಎಂದು ದೇವನಹಳ್ಳಿ ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಶಿವರಾಜ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಲಯದಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ಬ್ರಹ್ಮರಥೋತ್ಸವ ಹಾಗೂ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿದಿನ ದೇವರ ಜಪ ಮಾಡುವುದರಿಂದ ಒತ್ತಡಗಳಿಂದ ಮುಕ್ತರಾಗಬೇಹುದು. ಒಬ್ಬೊಬ್ಬರಿಗೆ ಒಂದೊAದು ದೇವರ ಮೇಲೆ ಭಕ್ತಿ ಇರುತ್ತದೆ. ಭಕ್ತನ ಆರಾಧನೆ ಮಾಡುವುದರಿಂದ ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮನದ ದೋಷಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಭಜನೆ, ಪೂಜೆ, ಯಜ್ಞ, ಯಾಗ, ಪ್ರವಚನಗಳು ಸಾಧನಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷ ಬೈರೇಗೌಡ ಮಾತನಾಡಿ, ಧ್ಯಾನ, ಪೂಜೆಯಿಂದ ನಮ್ಮಲ್ಲಿ ಅಡಗಿರುವ ದ್ವೇಷ, ಅಸೂಯೆ ಕಡಿಮೆಯಾಗುತ್ತದೆ. ಸಮಾಜದ ಬಗ್ಗೆ ಗೌರವ, ಪ್ರೀತಿ ಬೆಳೆಯುತ್ತದೆ. ಧ್ಯಾನ,ಭಜನೆ ಮನಸ್ಸಿಗೆ ಮುದ ನೀಡುವುದರ ಜತೆಗೆ ಉತ್ತಮ ಆರೋಗ್ಯಕ್ಕೂ ಕಾರಣವಾಗುತ್ತದೆ. ದೇವರು ಇದ್ದಾನೆ ಎಂಬುದು ಮನುಷ್ಯನ ನಂಬಿಕೆಯಾಗಿದ್ದು, ಆ ನಂಬಿಕೆಯೇ ನಮ್ಮಲ್ಲಿ ಸಂಸ್ಕಾರ, ಆಚಾರ ವಿಚಾರ ಬೆಳೆಸುತ್ತದೆ. ಪೂರ್ವಜರು ಹೇಳಿರುವ ಪ್ರಕಾರ ಈ ಜಾಗದಲ್ಲಿ ಅಘಾದವಾದ ಶಕ್ತಿ ಇದ್ದು, ಶಿವಲಿಂಗವನ್ನು ತಬ್ಬಿಕೊಂಡಷ್ಟು ಅದರ ಗಾತ್ರ ಹೆಚ್ಚಾಗುವ ಪ್ರತೀತಿ ಇದೆ ಎಂದು ಹೇಳಿದರು.
ಸಮಿತಿಯ ಉಪಾಧ್ಯಕ್ಷ ಶಂಕರಪ್ಪ ಮಾತನಾಡಿ, ದೇವಾಲಯಗಳನ್ನು ನಮ್ಮ ಪೂರ್ವಜರು ನಿರ್ಮಿಸಿರುವ ಉದ್ದೇಶವೇ ಸಮಾಜದಲ್ಲಿ ಶಾಂತಿ, ನೆಮ್ಮದಿಗಾಗಿ. ಅಲ್ಲಿ ಪೂಜೆ, ಭಜನೆಯಲ್ಲಿ ಪಾಲ್ಗೊಂಡರೆ ನಮ್ಮಲ್ಲಿನ ಕ್ಲೇಶ ಮಾಯವಾಗಿ ಮನಸ್ಸು ಹಗುರವಾಗುತ್ತದೆ? ಎಂದರು.ಅವರು ತತ್ವಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ. ಅವರ ತತ್ವಪದಗಳು, ಕಾಲಜ್ಞಾನ ಇಂದಿಗೂ ಸತ್ಯವಾಗಿದೆ. ನಾವು ಹೇಗೆ ಬದುಕಬೇಕು, ಸಮಾಜಕ್ಕಾಗಿ ಏನು ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.
ವಿಶೇಷ ಪೂಜೆ: ಬೆಳ್ಳಿಗೆ ಕಾರ್ತಿಕ ಮಾಸದ ಪ್ರಯುಕ್ತ ಫಲಪಂಚಮೃತ ಹಾಗೂ ಶತರುದ್ರಾಭಿಷೇಕ ಮೂಲ ದೇವರಿಗೆ ಮಂಗಳಾರತಿ, ಶ್ರೀ ಗಿರಿಜಾಕಲ್ಯಾಣೋತ್ಸವ ಹಾಗೂ ಬ್ರಹ್ಮ ರಥೋತ್ಸವ ಸುತ್ತಮುತ್ತಲಿನ ಗ್ರಾಮಸ್ಥರ ಸಂಮುಖದಲ್ಲಿ ವಿವಿಧ ಗ್ರಾಮಗಳ ಬೀದಿಗಳಲ್ಲಿ ಯುವಕರು ನೇರವೇರಿಸಲಾಯಿತು ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ವೇಳೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಭಾರತಿ ಲಕ್ಷ÷್ಮಣ್ ಗೌಡ, ಬೂದಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ ಗೌಡ, ಗಂಗವಾರ-ಚೌಡಪ್ಪನಹಳ್ಳಿ ಗ್ರಾಪಂ ಸದಸ್ಯ ಎಂ.ರಾಜಣ್ಣ, ಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಾಲಯ ಟ್ರಸ್ಟ್ ಸದಸ್ಯ ಹೋಸಕೋಟೆ ಜಯರಾಜ್, ಜೋನ್ನಹಳ್ಳಿ ಪಿಳ್ಳೇಗೌಡ, ಗಂಗವಾರ ರಾಮಸ್ವಾಮಿ, ಸಿಂಗಹಳ್ಳಿ ನಾಗೇಶ್, ಚನ್ನರಾಯಪಟ್ಟಣ ರಾಜಸ್ವನೀರಿಕ್ಚಕ ಜನಾರ್ಧನ್, ಲೆಕ್ಕಧಿಕಾರಿ ಅಕ್ಷಯ್, ತಾಪಂ ಮಾಜಿ ಸದಸ್ಯ ಸೋಮತ್ತನಹಳ್ಳಿ ಮಂಜುನಾಥ್, ಕೆಪಿಸಿಸಿ ಸದಸ್ಯ ಚೀಮಾಚನಹಳ್ಳಿ ರಾಮಚಂದ್ರಪ್ಪ, ಭೂವನಹಳ್ಳಿ ಮುನಿರಾಜು, ಬೂದಿಗೆರೆ ಪ್ರಕಾಶ್, ಪ್ರಧಾನ ಅರ್ಚಕ ಲೋಕೇಶ್, ಚೌಡಪ್ಪನಹಳ್ಳಿ ಗೌಡಪ್ಪ, ಎಂ.ಲೋಕೇಶ್, ಜೊನ್ನಹಳ್ಳಿ ನಾಗೇಶ್, ಭಕ್ತಾಧಿಗಳು ಇದ್ದರು.
ಚಿತ್ರ: ೨೧ ಡಿಹೆಚ್‌ಎಲ್ ಪಿ೧
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ತಬ್ಬಲಿಂಗೇಶ್ವರಸ್ವಾಮಿ ದೇವಲಯದಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ಬ್ರಹ್ಮರಥೋತ್ಸವನ್ನು ತಹಸಿಲ್ದಾರ್ ಎಸ್. ಶಿವರಾಜ್ ನೇರವೇರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments