Tuesday, April 23, 2024
spot_img
HomeChikballapurಇ-ಶ್ರಮ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಅಗತ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಇ-ಶ್ರಮ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಅಗತ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ರ‍್ಕಾರದ ಯೋಜನೆಗಳಿಂದ ವಂಚಿತರಾಗುತ್ತಿರುವ ಅಸಂಘಟಿತ ವಲಯದ ಕರ‍್ಮಿಕರಿಗೆ ಒಂದೇ ಸೂರಿನಡಿ ಹಲವು ಅವಕಾಶ ಕಲ್ಪಿಸುವ ಇ-ಶ್ರಮ್ ಯೋಜನೆಯಡಿ ನೋಂದಣಿ ಕುರಿತು ಜಿಲ್ಲೆಯಾದ್ಯಂತ ಸರ‍್ವಜನಿಕರಿಗೆ ಅರಿವು ಮೂಡಿಸುವ ಸಂಚಾರಿ ವಾಹನಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕರ‍್ಯರ‍್ಶಿಗಳಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ರವರು ಸಂಚಾರಿ ವಾಹನಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ‍್ಮಿಕ ಇಲಾಖೆ ವತಿಯಿಂದ ಸೋಮವಾರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇ-ಶ್ರಮ್ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ, ರ‍್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರು ನೋಂದಣಿಯಾಗುವ ವಿಧಾನ ಮತ್ತು ಸೌಲಭ್ಯಗಳ ಬಗ್ಗೆ ಹಾಗೂ ಇ-ಶ್ರಮ್ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ ೧೪ ದಿನಗಳ ಕಾಲ ವಾಹನವು ಸಂಚರಿಸಿ ಸರ‍್ವಜನಿಕರಲ್ಲಿ ಅರಿವು ಮೂಡಿಸಲಿದೆ ಎಂದರು.

ರ‍್ಹ ಅಸಂಘಟಿತ ಕರ‍್ಮಿಕರು ಇ-ಶ್ರಮ್ ಯೋಜನೆಯಡಿ ಇ.ಎಸ್.ಐ ಮತ್ತು ಪಿ.ಎಫ್ ಸದಸ್ಯರಾಗಿರದ ಹಾಗೂ ಆದಾಯ ತೆರಿಗೆ ಪಾವತಿಸದ ಸುಮಾರು ೩೭೯ ರ‍್ಗಗಳ ಅಸಂಘಟಿತ ಕರ‍್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ “ಇತರೆ ರ‍್ಗಗಳ” ಅಸಂಘಟಿತ ಕರ‍್ಮಿಕರು ಕಾಮನ್ ರ‍್ವೀಸ್ ಸೆಂಟರ್ (ಸಿ.ಎಸ್.ಸಿ) ಮೂಲಕ ಅಥವಾ ಆನ್ಲೈನ್ ನಲ್ಲಿ ಸ್ವಯಂ ನೋಂದಣಿ ಆಗಬಹುದು ಅಥವಾ ಕರ‍್ಮಿಕ ಇಲಾಖೆಗೆ ಭೇಟಿ ನೀಡಿ ಸದರಿ ಯೋಜನೆಯಡಿ ನೋಂದಾಯಿಸಿ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸರ‍್ವಜನಿಕರಲ್ಲಿ ಕೋರಿದರು.

ಕರ‍್ಮಿಕ ಅಧಿಕಾರಿ ಆರ್. ವರಲಕ್ಷ್ಮೀ ಅವರು ಮಾತನಾಡಿ, ಕೇಂದ್ರ ರ‍್ಕಾರವು ಅಸಂಘಟಿತ ಕರ‍್ಮಿಕರ ನೋಂದಣಿಗೆ ಸಂಬಂಧಿಸಿದಂತೆ ಇ-ಶ್ರಮ್ ಯೋಜನೆಯಡಿ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರು, ಕೃಷಿ ಕರ‍್ಮಿಕರು, ಮೀನುಗಾರರು, ಆಶಾ ಕರ‍್ಯರ‍್ತೆಯರು, ಮನೆಗೆಲಸ ಕರ‍್ಮಿಕರು, ಚಾಲಕರು, ರ‍್ಜಿಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕರ‍್ಯರ‍್ತೆಯರು, ರಿಕ್ಷಾ ಎಳೆಯುವವರು, ಬಿಸಿ ಊಟ ಕರ‍್ಮಿಕರು, ನರೇಗಾ ಕರ‍್ಮಿಕರು, ಇಟ್ಟಿಗೆ ಮಾಡುವವರು ಸೇರಿದಂತೆ ಕೇಂದ್ರ ರ‍್ಕಾರವು ಗುರುತಿಸಿರುವ ಸುಮಾರು ೧೫೬ ರ‍್ಗಗಳ ಕರ‍್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕರ‍್ಮಿಕರು “ಇತರೆ ರ‍್ಗ”ಗಳಡಿ ನೋಂದಣಿಯಾಗಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸರ‍್ವಜನಿಕರಿಗೆ ತಿಳಿಸಿದರು.

ಇ-ಶ್ರಮ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅಸಂಘಟಿತ ಕರ‍್ಮಿಕರಾಗಿರಬೇಕು, ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇಎಸ್‌ಐ ಫಲಾನುಭವಿಯಾಗಿರಬಾರದು. ೧೬ ರಿಂದ ೫೯ ವಯೋಮಾನದವರಾಗಿರಬೇಕು. ಸದರಿ ಯೋಜನೆಯಡಿ ನೊಂದಣಿಯಾಗಲು ಅವಶ್ಯಕ ದಾಖಲೆಗಳು ಆಧಾರ್ ಕರ‍್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ನೀಡತಕ್ಕದ್ದು ಎಂದು ಹೇಳಿದರು.
ಇ-ಶ್ರಮ್ ಯೋಜನೆಯ ಪ್ರಯೋಜನೆಗಳು

ಸಾಮಾಜಿಕ ಭದ್ರತೆ ಮತ್ತು ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಅನುಕೂಲ. ದತ್ತಾಂಶವು ರ‍್ಕಾರಕ್ಕೆ ಅಸಂಘಟಿತ ಕರ‍್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯಕ. ಇ-ಶ್ರಮ್‌ನಲ್ಲಿ ನೊಂದಾಯಿಸಿಕೊಂಡರೆ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದಲ್ಲಿ ರೂ.೨ ಲಕ್ಷ ರೂ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ರೂ.೧ ಲಕ್ಷ ರೂ ಪರಿಹಾರ ಪಡೆಯಬಹುದಾಗಿರುತ್ತದೆ. ರಾಷ್ಟ್ರೀಯ ವಿಪತ್ತು ಅಥವಾ ಕೋವಿಡ್-೧೯ರ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ ರ‍್ಹ ಕರ‍್ಮಿಕರಿಗೆ ನೆರವು ನೀಡಲು ಸಹ ದತ್ತಾಂಶವನ್ನು ಬಳಸಿಕೊಳ್ಳಬಹುದಾಗಿದೆ.

ಇ-ಶ್ರಮ್ ನೊಂದಣಿಯು ಉಚಿತವಾಗಿದ್ದು, ನೋಂದಣಿಗಾಗಿ ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಭೇಟಿ ಮಾಡುವುದು ಅಥವಾ ಇ-ಶ್ರಮ್ ಪರ‍್ಟಲ್ ತಿತಿತಿ.eshಡಿಚಿm.gov.iಟಿ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಹಾಗೂ ನೊಂದಾಯಿತ ಕರ‍್ಮಿಕರು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು (Uಂಓ) ಪಡೆಯಬಹುದಾಗಿದ್ದು, ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ. ಎಲ್ಲಾ ರ‍್ಹ ಅಸಂಘಟಿತ ಕರ‍್ಮಿಕರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು (ಅSಅ) ಗಳಿಗೆ ಭೇಟಿ ನೀಡಿ ಕೇಂದ್ರ ರ‍್ಕಾರದ ಇ-ಶ್ರಮ್ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ನೊಂದಣಿ ಮಾಡಿಸಿ, ಸದರಿ ಸೌಲಭ್ಯವನ್ನು ರ‍್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಕರ‍್ಮಿಕ ಅಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ; ಜಿಎ-೩, ನೆಲಮಹಡಿ. ಜಿಲ್ಲಾಡಳಿತ ಭವನ, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರ ಹಾಗೂ ಎಲ್ಲಾ ತಾಲ್ಲೂಕು ವ್ಯಾಪ್ತಿಯ ಕರ‍್ಮಿಕ ನಿರೀಕ್ಷಕರುಗಳ ಕಚೇರಿ ಹಾಗೂ ಕರ‍್ಮಿಕ ಸಹಾಯವಾಣಿ-೧೫೫೨೧೪, ಇ-ಶ್ರಮ್ ಸಹಾಯವಾಣಿ-೧೪೪೩೪ ಗೆ ಸಂರ‍್ಕಿಸಬಹುದು.

ಈ ಸಂರ‍್ಭದಲ್ಲಿ ಕರ‍್ಮಿಕ ಇಲಾಖೆಯ ಕರ‍್ಮಿಕ ನಿರೀಕ್ಷಕರು, ಅಸಂಘಟಿತ ಕರ‍್ಮಿಕರ ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments