Sunday, April 28, 2024
spot_img
HomeBangalore Ruralಮೊದಲಹಂತದ ಗ್ರಾಮಸಭೆಯಲ್ಲಿ ಜನರಿಲ್ಲದೆ ಸರಕಾರಿ ಶಾಲಾ ಮಕ್ಕಳಿಂದ ಕೂಡಿದ್ದ ಸಭೆ

ಮೊದಲಹಂತದ ಗ್ರಾಮಸಭೆಯಲ್ಲಿ ಜನರಿಲ್ಲದೆ ಸರಕಾರಿ ಶಾಲಾ ಮಕ್ಕಳಿಂದ ಕೂಡಿದ್ದ ಸಭೆ


ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಅಭಿಯಂತರ ಭರತ್ ಗೈರು ಹಾಜರಿಯಲ್ಲಿಯೇ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷ ಲಕ್ಷಿö್ಮÃಕಾಂತ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಬೆರಳೆಣಿಕೆಯಷ್ಟು ಮಾತ್ರ ಸರಕಾರಿ ಅಧಿಕಾರಿಗಳ ಹಾಜರಿಯಲ್ಲಿ ಕನ್ನಮಂಗಲ ಗ್ರಾಮ ಪಂಚಾಯಿತಿಯ ಮೊದಲ ಹಂತದ ಗ್ರಾಮಸಭೆಗೆ ಜನರಿಂದ ಆಕ್ರೋಶ ವ್ಯಕ್ತವಾಯಿತು.
ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿ ಕನ್ನಮಂಗಲ ಗ್ರಾಮಪಂಚಾಯಿತಿಯ ಮೊದಲ ಹಂತದ ಗ್ರಾಮಸಭೆಯನ್ನು ಉದ್ಘಾಟಿಸಿ, ಗ್ರಾಮಸಭೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಸಭೆಯಲ್ಲಿ ಇತ್ತ ಅಧಿಕಾರಿಗಳಿಲ್ಲ, ಅತ್ತ ಜನರೇ ಇಲ್ಲದಂತಾಗಿತ್ತು. ಹಾಕಿರುವ ಚೇರುಗಳನ್ನು ತುಂಬಿಸಲು ಸರಕಾರಿ ಶಾಲೆಯ ಮಕ್ಕಳನ್ನು ಕರೆಸಿ ಮಕ್ಕಳ ಸಾಮಾನ್ಯ ಸಭೆಯಂತೆ ಗ್ರಾಮಸಭೆಯನ್ನು ನಡೆಸಿದ್ದು ಒಂದು ಕಡೆಯಾದರೆ, ಮತ್ತೊಂದೆಡೆ ಬೆರಳೆಣಿಕೆಯಷ್ಟು ಮಾತ್ರ ಸಾರ್ವಜನಿಕರು ಇದ್ದು ತಮ್ಮ ಅಹವಾಲು ಮತ್ತು ಸಮಸ್ಯೆಗಳನ್ನು ಗ್ರಾಪಂ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತರುವುದರ ಮೂಲಕ ಚರ್ಚಿಸಿದರು.
ಗ್ರಾಪಂ ಅಧ್ಯಕ್ಷ ಲಕ್ಷಿö್ಮÃಕಾಂತ ಮಾತನಾಡಿ, ಗ್ರಾಮಸಭೆಯಲ್ಲಿ ಕೆಲವು ವಿಷಯಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಅವಕಾಶ ಇರುತ್ತದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂನಿAದ ಆಗಬೇಕಿರುವ ಕೆಲಸಕಾರ್ಯಗಳನ್ನು ಪ್ರಾಮಾಣಿಕವಾಗಿ ಸ್ಪಂಧಿಸುವುದರ ಮೂಲಕ ಮಾಡಿಕೊಡಲಾಗುತ್ತದೆ ಎಂದರು.
ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಮಸ್ಯೆ ಹೇಳಿಕೊಳ್ಳುವ ಸಾರ್ವಜನಿಕರ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಸಾದಹಳ್ಳಿ ಗ್ರಾಮದ ಯುವಕರ ತಂಡ ಮಕ್ಕಳನ್ನು ಕರೆಸಿ ಗ್ರಾಮಸಭೆ ಮಾಡುತ್ತಿರುವುದು ಯಾವ ನ್ಯಾಯ, ಶಾಲಾ ಮಕ್ಕಳಿಗೆ ಕೂರಿಸಿ ಕಾಟಚಾರದ ಗ್ರಾಮಸಭೆಯನ್ನು ಅಧಿಕಾರಿಗಳು ಆಯೋಜಿಸಿರುವುದು ಎಷ್ಟರ ಮಟ್ಟಿಗೆ ಸರಿಯೆಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸಭೆಯಲ್ಲಿ ವಕೀಲ ಮಧು ಮಾತನಾಡಿ, ಇ-ಖಾತೆ ಮಾಡಲು ಅರ್ಜಿ ಕೊಟ್ಟ ನಂತರ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳೇ ಮೂರನೇ ವ್ಯಕ್ತಿಯಿಂದ ತಕರಾರು ಅರ್ಜಿಯನ್ನು ಪಡೆದುಕೊಂಡು ಖಾತೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ವಿಳಂಬದೋರಣೆ ಬಗ್ಗೆ ಪ್ರಶ್ನೆ ಮಾಡಿದರೆ, ಏನೇನು ಪ್ರಯೋಜನವಾಗುತ್ತಿಲ್ಲ. ಮುಂದುವರೆದು ಗ್ರಾಮಸ್ಥರಿಲ್ಲದಿರುವುದರ ಬಗ್ಗೆ ಆರೋಪ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಲಕ್ಷಿö್ಮÃಕಾಂತ, ಮಾಜಿ ಅಧ್ಯಕ್ಷ ಕೆ.ಆರ.ನಾಗೇಶ್, ಉಪಾಧ್ಯಕ್ಷೆ ನಂದಿನಿತ್ಯಾಗರಾಜ್, ಸದಸ್ಯರಾದ ಎಸ್.ಜಿ.ಮಂಜುನಾಥ್, ಎಸ್.ವೆಂಕಟಸ್ವಾಮಿ, ನರಸಿಂಹಮೂರ್ತಿ, ವನಜಾಕ್ಷಮ್ಮ, ಕೃಷ್ಣಯ್ಯ, ಆಶಾಮಹೇಶ್, ಸೋಮಶೇಖರ್, ವನಿತಾ, ಶ್ರೀನಾಥ್.ಎಸ್.ಅಯರ್, ಮೇಘಶ್ರೀ, ಎನ್.ಮಂಜುನಾಥ್, ಶಿಲ್ಪ, ಎಸ್.ಎಂ.ವೆAಕಟೇಶ್, ನೇತ್ರಾವತಿ, ಶಾಲಿನಿ, ಅಂಬರೀಶ್, ನಿವಿತಾ, ಇಲಾಖಾಧಿಕಾರಿಗಳು, ಸರಕಾರಿ ಶಾಲಾ ಮಕ್ಕಳು ಮತ್ತು ಇತರರು ಇದ್ದರು.
ಚಿತ್ರ: ೨೯ ಡಿಹೆಚ್‌ಎಲ್ ಪಿ೨
ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಪಂ ವತಿಯಿಂದ ಸಾದಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೊದಲ ಗ್ರಾಮಸಭೆಯಲ್ಲಿ ಸರಕಾರಿ ಶಾಲಾ ಮಕ್ಕಳ ಉಪಸ್ಥಿತಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments