Monday, April 29, 2024
spot_img
HomeBangalore Ruralಪಂಚರತ್ನ ಯೋಜನೆಗೆ ಜನಸಾಮಾನ್ಯರಿಂದ ವ್ಯಾಪಕ ಬೆಂಬಲ

ಪಂಚರತ್ನ ಯೋಜನೆಗೆ ಜನಸಾಮಾನ್ಯರಿಂದ ವ್ಯಾಪಕ ಬೆಂಬಲ

ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ಪಂಚರತ್ನ ಯೋಜನೆಗೆ ಜನಸಾಮಾನ್ಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪಂಚರತ್ನ ಯೋಜನೆಯ ಐದು ಯೋಜನೆಗಳನ್ನು ಜಾರಿಗೊಳಿಸಲು ಜನರು ಆಶೀರ್ವಾದಿಸಿದರೆ ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಎಲ್ಲಾ ಸಿದ್ಧತೆಗಳ ಕ್ರಿಯಾ ಯೋಜನೆ ರೂಪಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವನ್ನು ಮುಗಿಸಿದ ನಂತರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಐದು ಪಂಚರತ್ನ ಯೋಜನೆಗೆ ೧ಲಕ್ಷ ೨೫ ಸಾವಿರ ಕೋಟಿರೂ. ಕ್ರಿಯಾ ಯೋಜನೆ ಸಿದ್ಧತೆ ಮಾಡಿಕೊಂಡಿದ್ದೇನೆ. ಸರಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರೆ, ಐದು ವರ್ಷದಲ್ಲಿ ಸಂಪೂರ್ಣ ಜಾರಿಗೆ ತರಲು ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ೧೧ ದಿನಗಳ ಪ್ರವಾಸದಲ್ಲಿ ನಿಜವಾದ ಭಾರತ ಏನು ಅನ್ನೋದು ಹಳ್ಳಿ ತಲುಪಿದಾಗ ಗೊತ್ತಾಗಲಿದೆ. ಮಾ.೨೫ರವರೆಗೂ ಪ್ರವಾಸ ಮಾಡಲು ಮಾನಸಿಕವಾಗಿ ಸಿದ್ದನಿದ್ದೇನೆ. ಮುಂದಿನ ಸಿಎಂ ಕುಮಾರಣ್ಣ ಅಂತ ಜನರೇ ಸ್ಲೋಗನ್ ಕೂಗ್ತಿದ್ದಾರೆ. ನಾನು ಬರುವಾಗ ಕಳಸ ಹೊತ್ತು ನಡೆದುಕೊಂಡು ಬರ್ತಿದ್ದಾರೆ. ಇದನ್ನ ದುಡ್ಡು ಕೊಟ್ಟು ಮಾಡಿಸೋದಕ್ಕೆ ಆಗಲ್ಲ. ಮನಸ್ಸಿನಲ್ಲಿದ್ದರೆ ಮಾತ್ರ ಸಾದ್ಯವಾಗುತ್ತದೆ. ದೇವನಹಳ್ಳಿ ವಿ.ಸಭಾ ಕ್ಷೇತ್ರದಲ್ಲಿ ಸತತವಾಗಿ ೨೦ ಗಂಟೆಗಳ ಕಾಲ ಜನರ ಜತೆ ಇದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ರಾತ್ರಿ ಒಂದೂವರೆ ಗಂಟೆಯಲ್ಲೂ ಸಹ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಇವತ್ತು ದೇಶ, ರಾಜ್ಯ ಪ್ರಗತಿಯನ್ನು ಕಾಣುತ್ತಿದೆ ಅಂತ ಮೇಲ್ನೋಟಕ್ಕೆ ಕಂಡುಬAದರೂ, ಎಲ್ಲವೂ ಕೃತಕವಾದ ಪ್ರಚಾರ ಅನ್ನೋದು ನನ್ನ ಅಭಿಪ್ರಾಯವಾಗಿದೆ. ಪ್ರತಿನಿತ್ಯ ನೂರಾರು ಬಡವರು ನನ್ನ ಮುಂದೆ ಬಂದು ಆಸ್ಪತ್ರೆ, ಶಿಕ್ಷಣ ಮತ್ತಿತರ ಕಾರಣಗಳಿಂದ ಸಹಾಯ ಕೇಳಿ ಬರುತ್ತಿದ್ದಾರೆ. ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳಿಂದ ಜನರು ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲ. ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಸಾಕಷ್ಟು ಇದೆ. ಜನತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಟ್ಟರೆ, ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಮೊದಲ ದಿನವೇ ಪಂಚರತ್ನದ ಯೋಜನೆಯನ್ನು ಘೋಷಣೆ ಮಾಡಲಿದ್ದೇನೆ ಎಂದು ಹೇಳಿದರು.
೧೪೭ಕಿ.ಮೀ., ೪೮ ಸಭೆಗಳನ್ನು ಗ್ರಾಮಗಳ ರಸ್ತೆಗಳ ಮೂಲಕ ಪ್ರತಿ ಗ್ರಾಮದಲ್ಲಿ ಜನರನ್ನು ಸಂಪರ್ಕಿಸಿದ್ದೇನೆ. ಸಭೆಯನ್ನು ಮುಗಿಸಲು ರಾತ್ರಿ ೧.೩೦ಗಂಟೆಯಾಗಿದೆ. ರಾತ್ರಿ ಐದಾರು ಗಂಟೆಗಳ ಕಾಲ ಮಹಿಳೆಯರು ಒಳಗೊಂಡAತೆ ಸಾವಿರಾರು ಜನ ಭಾಗಿಯಾಗಿದ್ದರು. ಸಭೆಯಲ್ಲಿ ನಡೆಯುವ ವಿಚಾರ ಜನತೆ ಮುಂದೆ ಮಂಡನೆ ಮಾಡುತ್ತೇನೆ. ಬಿಜೆಪಿ ಸಾಧನೆಯೂ ಕೃತಕ ಸಾಧನೆಯಾಗಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಬಾಕ್ಸ್ ೧
ನನ್ನದು ಸುಮ್ಮನೆ ಘೋಷಣೆ ಅಲ್ಲ:
ಕುಮಾರಸ್ವಾಮಿ ಅವರು ಸುಮ್ಮನೆ ಘೋಷಣೆ ಮಾಡುತ್ತಿದ್ದಾರೆ. ಅವರಿಗೆ ಬಹುಮತ ಬರುವುದಿಲ್ಲವೆಂದು ಟೀಕೆ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಒಂದು ಅಲೆ ಸೃಷ್ಠಿಯಾಗಿದೆ. ಹಳ್ಳಿಗಳಲ್ಲಿ ಜನರ ಬೆಂಬಲ ವ್ಯಕ್ತವಾಗುತ್ತಿದ್ದು, ನಮ್ಮ ಪಕ್ಷದಿಂದ ಯಾರೇ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ ಗೆಲ್ಲುವ ಅವಕಾಶ ಇದೆ.
ಬಾಕ್ಸ್ ೨
ನಿನ್ನೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಯಾರ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಅಷ್ಟು ತಿಳುವಳಿಕೆ ಇಲ್ಲ ರಕ್ತ ಪೀಪಾಸುಗಳು ಅಂತಾ ಹೇಳಿದ್ದಾರೆ. ನೆನ್ನೆ ಅವರ ಪಕ್ಷಕ್ಕೆ ಯಾರನ್ನೋ ಸೇರಿಸಿ ಕೊಳ್ತಾಇದ್ರಲ್ಲ. ಅವರ ಇತಿಹಾಸ ತೆಗೆದು ನೋಡಿದ್ರೆ ಗೊತ್ತಾಗುತ್ತೆ. ಯಾರು ರಕ್ತ ಹೀರುತ್ತಾ ಇದ್ದರು? ಯಾರು ರಕ್ತಪಿಪಾಸುಗಳು? ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿದರು.
ಈ ವೇಳೆಯಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿ ರಮೇಶ್‌ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರ.ಕಾರ್ಯದರ್ಶಿ ರವೀಂದ್ರ, ತಾಲೂಕು ಸೊಸೈಟಿ ಅಧ್ಯಕ್ಷ ಎ.ದೇವರಾಜ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಗ್ರಾಪಂ ಅಧ್ಯಕ್ಷೆ ಗೌರಮ್ಮರಾಮಣ್ಣ, ಉಪಾಧ್ಯಕ್ಷೆ ಕಾಂತ.ಸಿ.ಮುನಿರಾಜು, ಸದಸ್ಯರಾದ ರಘು, ಭೈರೇಗೌಡ, ಮುಖಂಡರಾದ ಸಿ.ಮುನಿರಾಜು, ರಾಮಣ್ಣ, ರಂಗಸ್ವಾಮಿ, ರಬ್ಬನಹಳ್ಳಿ ಪ್ರಭಾಕರ್, ಕೆ.ನಾಗೇಶ್, ಎಚ್.ಶ್ರೀನಿವಾಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ಚಿತ್ರ: ೨೯ ಡಿಹೆಚ್‌ಎಲ್ ಪಿ೧
ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವನ್ನು ಮುಗಿಸಿದ ನಂತರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments