Monday, April 29, 2024
spot_img
HomeBangalore Ruralಗೋಮಾಳಗಳ ಜಾಗ ಶೀಘ್ರ ಗುರುತಿಸುವಂತೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ

ಗೋಮಾಳಗಳ ಜಾಗ ಶೀಘ್ರ ಗುರುತಿಸುವಂತೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ


ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ದೇವನಹಳ್ಳಿ ತಾಲೂಕಿನಲ್ಲಿರುವ ಗೋಮಾಳ ಜಾಗವನ್ನು ಗುರುತಿಸಿ ಶೀಘ್ರದಲ್ಲಿಯೇ ಸ್ಥಳೀಯ ಗ್ರಾಪಂ ಮತ್ತು ಪ್ರಾಧಿಕಾರಗಳಿಗೆ ಹಸ್ತಾಂತರಿಸುವAತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜು ಗೌಡ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷೆ ಅನುರಾಧಅಶೋಕ್ ಆಗ್ರಹಿಸಿದರು.
ಪಟ್ಟಣದ ತಹಶೀಲ್ಧಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರ್ ಶಿವರಾಜ್‌ರೊಂದಿಗೆ ಚರ್ಚ ನಡೆಸಿ ಅವರು ಮಾತನಾಡಿ, ‘ಸಾಕಷ್ಟು ಜನ ವಸತಿ ರಹಿತರು ತಾಲ್ಲೂಕಿನಲ್ಲಿದ್ದು, ಸಂಘಟನೆಯ ಹೋರಾಟವನ್ನು ದಿಕ್ಕು ತಪ್ಪಿಸಲು ಷ್ಯಡಂತ್ರ ರೂಪಿಸುತ್ತಿದ್ದಾರೆ, ಅದಕ್ಕೆ ಆಸ್ವಾದ ನೀಡದೇ ಅಧಿಕಾರಿಗಳೊಂದಿಗೆ ಮಾತನಾಡಿ ಗೋಮಾಳ ಗುರುತಿಸಬೇಕು’ ಎಂದು ಮನವಿ ಮಾಡಿದ್ದರಲ್ಲದೆ, ‘ಸಾಧ್ಯವಾದರೇ ಪರವಾನಗಿ ಸರ್ವೇಯರ್‌ಗಳನ್ನು ನೇಮಕ ಮಾಡಿ, ಸರ್ಕಾರಿ ಜಾಗವನ್ನು ಗುರುತಿಸಿದ್ದ ಪಕ್ಷದಲ್ಲಿ, ಕಡು ಬಡವರು, ಕೂಲಿ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ. ಖಾಸಗಿ ಬಡಾವಣೆಗಳಲ್ಲಿ ಖರಾಬು ಭೂಮಿ ಒತ್ತುವರಿ ಹೆಚ್ಚಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಿ, ಸರ್ಕಾರಕ್ಕೆ ಉಳಿಸಿ, ಜನ ಪರವಾಗಿ ನಿರ್ಧಾರ ಕೈಗೊಳ್ಳಿ ಎಂದು ಅಹವಾಲು ನೀಡಿದರು.
ರಾಜ್ಯಾಧ್ಯಕ್ಷ ನಿಂಗರಾಜುಗೌಡ ಮಾತನಾಡಿ, ರಾಯಸಂದ್ರದಲ್ಲಿ ಸಂಘಟನೆಯ ಹೋರಾಟದ ಫಲವಾಗಿ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ನೀಡಿದ್ದ ನೋಟಿಸ್‌ಗೆ ಬಾಲಾಢ್ಯರು ಯಾವುದೇ ಉತ್ತರ ನೀಡಿಲ್ಲ, ತಾಲ್ಲೂಕು ಆಡಳಿತ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೋರೆ ಹೋಗಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲಾಡಳಿತ ಕಠಿಣ ನಿರ್ದೇಶನ ಬರದಿದ್ದಲ್ಲಿ, ಉಗ್ರ ಹೋರಾಟಕ್ಕೆ ಸಂಘಟನೆ ಬದ್ಧವಾಗಿದೆ ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳಾದ ಜಾಲಿಗೆ ವೆಂಕಟೇಶ್, ಮುನೇಗೌಡ, ಅರದೇಶನಹಳ್ಳಿ ಕುಮಾರ್, ಅನುಪಮ, ಅನಿತಾ, ಶಶಿಕಲಾ, ಬೇಬಿ, ವೀಣಾ, ಅಲ್ಪಸಂಖ್ಯಾದ ಮಹಿಳಾ ಪದಾಧಿಕಾರಿಗಳು ಮತ್ತಿತರರು ಇದ್ದರು.
ಚಿತ್ರ: ೨೯ ಡಿಹೆಚ್‌ಎಲ್ ಪಿ೩
ದೇವನಹಳ್ಳಿ ತಾಲೂಕಿನಲ್ಲಿರುವ ಗೋಮಾಳ ಜಾಗವನ್ನು ಗುರುತಿಸಿ ಶೀಘ್ರದಲ್ಲಿಯೇ ಸ್ಥಳೀಯ ಗ್ರಾಪಂ ಮತ್ತು ಪ್ರಾಧಿಕಾರಗಳಿಗೆ ಹಸ್ತಾಂತರಿಸುವAತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments