Saturday, May 11, 2024
spot_img
HomeBangalore Ruralಹಿಮ್ಮಡಿ ಸಿದ್ಧರಾಮೇಶ್ವರ ಆದರ್ಶಗಳು ಯುವ ಪೀಳಿಗೆಗೆ ಮಾದರಿ

ಹಿಮ್ಮಡಿ ಸಿದ್ಧರಾಮೇಶ್ವರ ಆದರ್ಶಗಳು ಯುವ ಪೀಳಿಗೆಗೆ ಮಾದರಿ

ದೇವನಹಳ್ಳಿ: ಪ್ರತಿ ಶಾಲೆಯಲ್ಲಿ ಹಿಮ್ಮಡಿ ಸಿದ್ಧರಾಮೇಶ್ವರ ಅವರ ಜಯಂತಿಯನ್ನು ಆಚರಿಸುವಂತಾಗಬೇಕು. ಇವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಮ್ಮಡಿ ಸಿದ್ಧರಾಮೇಶ್ವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಭೋವಿ ಜನಾಂಗದ ಭವನ ನಿರ್ಮಾಣಕ್ಕೆ ಆಗಿನ ತಹಶೀಲ್ದಾರ್ ಅಜಿತ್ ರೈ ಇದ್ದಾಗ ಭವನಕ್ಕಾಗಿ ಜಾಗ ಗುರ್ತಿಸಿಕೊಡುವಂತೆ ಸೂಚಿಸಲಾಗಿತ್ತು. ಅದು ಯಾವ ಮಟ್ಟದಲ್ಲಿ ಮುನ್ನಡೆಯುತ್ತದೆ ಎಂಬುವುದನ್ನು ಸಮಾಜದ ತಾಲೂಕು ಅಧ್ಯಕ್ಷರು ಗಮನಕ್ಕೆ ತಂದಿದ್ದರೆ, ಅದನ್ನು ಸಕಾರಗೊಳಿಸಲು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಈಗಿನ ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ಅವರಿಗೂ ಸಹ ಜಾಗ ಗುರ್ತಿಸಿಕೊಡುವಂತೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ವಿಜೃಂಭಣೆಯಿAದ ಆಚರಣೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

ಭೋವಿ ಸಮಾಜದ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಚಿನ್ನಪ್ಪ ಮಾತನಾಡಿ, ನಮ್ಮ ಸಮುದಾಯೂ ಬಹಳಷ್ಟು ಹಿಂದುಳಿದಿದೆ. ಸರಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ಸಮಾಜವಾಗಿದೆ. ಕೊರೊನಾ ಮಹಾಮಾರಿಯಿಂದ ಈ ಬಾರಿಯೂ ಸಹ ಸಿದ್ಧರಾಮೇಶ್ವರರವರ ಜಯಂತಿಯನ್ನು ಸರಳವಾಗಿ ಆಚರಿಸುವಂತೆ ಆಗಿದೆ. ಹಿಮ್ಮಡಿ ಸಿದ್ಧರಾಮೇಶ್ವರ ರವರು ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸಮಾಜದ ಅಭಿವೃದ್ಧಿಗೆ ಸಮುದಾಯದ ಮುಖಂಡರು ಎಲ್ಲಾ ರೀತಿಯಲ್ಲಿ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಸಮುದಾಯದವರಿಗೂ ನಿವೇಶನಗಳನ್ನು ಸರಕಾರದ ಹಂತದಲ್ಲಿ ಮಂಜೂರು ಮಾಡಿಕೊಟ್ಟಿದೆ. ಆದರೆ ನಮ್ಮ ಸಮುದಾಯಕ್ಕೆ ಯಾವುದೇ ನಿವೇಶನ ಮಂಜೂರು ಮಾಡಿಲ್ಲ. ನಿವೇಶನಕ್ಕಾಗಿ ಸ್ಥಳ ಗುರ್ತಿಸಿಕೊಟ್ಟರೆ, ಅಭಿವೃದ್ಧಿ ನಿಗಮದಿಂದ 50ಲಕ್ಷ ಅನುದಾನ ಮತ್ತು ಸಮಾಜದ ಮುಖಂಡರಿAದ ದೇಣಿಗೆ ಪಡೆದು ನಿವೇಶನಗಳನ್ನು ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಸಿದ್ದರಾಮೇಶ್ವರವರ ಜಯಂತಿ ಕಾರ್ಯಕ್ರಮವನ್ನು ಪ್ರತಿ ಗ್ರಾಮ, ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಆಚರಣೆಯಾಗುವಂತೆ ಆಗಬೇಕು ಎಂದರು.

ಈ ವೇಳೆಯಲ್ಲಿ ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ಭೋವಿ ಸಮುದಾಯದ ಮುಖಂಡರು, ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments