Friday, May 3, 2024
spot_img
HomeBangaloreಸುಗ್ಗಿ ಹಬ್ಬಕ್ಕೆ ವ್ಯಾಪಾರ ಭರಾಟೆ ಜೋರು!

ಸುಗ್ಗಿ ಹಬ್ಬಕ್ಕೆ ವ್ಯಾಪಾರ ಭರಾಟೆ ಜೋರು!

ದೇವನಹಳ್ಳಿ: ಕೋವಿಡ್ 3ನೇ ಅಲೆಯ ನಡುವೆಯೂ ಜನರು ಸುಗ್ಗಿ ಹಬ್ಬಕ್ಕೆ ಯಾವುದೇ ಭಯದ ಹಂಗಿಲ್ಲದೆ ವ್ಯಾಪಾರ ವಹಿವಾಟು ಖರೀದಿಯ ಭರಾಟೆಯಲ್ಲಿ ಮಗ್ನರಾಗಿರುವ ದೃಶ್ಯ ನಗರದ ಬಜಾರ್ ರಸ್ತೆಯಲ್ಲಿ ಕಂಡುಬAದಿದೆ.

ರೈತರ ಸುಗ್ಗಿ ಎಂದೇ ಕರೆಯುವ ಸಂಕ್ರಾAತಿ ಹಬ್ಬಕ್ಕೆ ಖರೀದಿ ಮಾಡಲು ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದ್ದು, ಬೆಲೆ ಏರಿಕೆಯಲ್ಲಿಯೂ ಸಹ ಹಬ್ಬವನ್ನು ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಅಂಗಡಿ ಮುಗ್ಗಟ್ಟುಗಳ ಮುಂದೆ ಜಮಾಯಿಸಿ ತಮಗೆ ಬೇಕಾದ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತಲೀನರಾಗಿದ್ದಾರೆ.

ಒಂದು ಕೆಜಿ ಅವರೇಕಾಯಿ 80-100ರೂ., ಕಡಲೇಕಾಯಿ 100-120ರೂ., ಒಂದು ಕಬ್ಬಿನ ಜೊಲ್ಲೆಗೆ ರೂ.60ರಂತೆ ಮಾರಾಟ ಮಾಡಲಾಗುತ್ತಿದೆ. ಹೂವಿನ ಬೆಲೆಯಂತೂ ಒಂದೂAದು ಅಂಗಡಿಯಲ್ಲಿ ಒಂದೊAದು ರೀತಿಯ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಗುಣಮಟ್ಟದ ಹಣ್ಣು-ಹಂಪಲು ಬೆಲೆಯಂತೂ ದುಬಾರಿಯಾಗಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ಅದರ ನಡುವೆಯೂ ಸಂಕ್ರಾAತಿ ಹಬ್ಬದ ಸಂಭ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಣ್ಣಬಣ್ಣದ ಸಕ್ಕರೆ ಅಚ್ಚು, ಸಿಹಿ-ತಿಂಡಿ ತಿನಿಸು, ಮನೆಗಳ ಮುಂಭಾಗದಲ್ಲಿ ರಂಗು-ರAಗಿನ ರಂಗೋಲಿ, ತಳಿರು ತೋರಣ, ವಿಶೇಷವಾಗಿ ಜೋಡೆತ್ತುಗಳಿಗೆ ಸಿಂಗರಿಸಿ ಕಿಚ್ಚಾಯಿಸುವ ಪದ್ಧತಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಸರಕಾರದ ಆದೇಶದಂತೆ ವಾರಾಂತ್ಯದ ಕರ್ಫ್ಯೂ ಹಿನ್ನಲೆಯಲ್ಲಿ ಜನಜಂಗುಳಿ ಹೆಚ್ಚಾಗಿ ಖರೀದಿಯಲ್ಲಿ ತೊಡಗಿದ್ದು, ಹಬ್ಬದ ಎಲ್ಲಾ ವಸ್ತುಗಳನ್ನು ಖರೀದಿಸಿ ಮನೆಗಳಿಗೆ ಕೊಂಡೈಯುತ್ತಿದ್ದು, ಹಬ್ಬವನ್ನು ಇಂದು ಯಾವ ರೀತಿ ಆಚರಣೆ ಮಾಡುತ್ತಾರೆಂಬುದು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments