Sunday, May 12, 2024
spot_img
HomeBusinessಸಾಕು ಪ್ರಾಣಿಗಳ ಆರೋಗ್ಯ ಸುಧಾರಣೆಯಲ್ಲಿ ನರೇಗಾ

ಸಾಕು ಪ್ರಾಣಿಗಳ ಆರೋಗ್ಯ ಸುಧಾರಣೆಯಲ್ಲಿ ನರೇಗಾ

 ಸಾಕು ಪ್ರಾಣಿಗಳಾದ ಹಸು, ಮೇಕೆ ,ಕುರಿಗಳನ್ನೆ ಸಾಕಿ ಜೀವನ ನಡೆಸುತ್ತಿದ್ದ ಶಿವಲಿಂಗಯ್ಯ ಅವರು  ಸಾಕಿದ್ದ  ಮೇಕೆಗಳ ಕಟ್ಟಲು ಯಾವುದೇ ವ್ಯವಸ್ಥೆ ಮಾಡಿಕೊಳ್ಳದೇ ಇದ್ದಾಗ ನೆಲದಲ್ಲಿ ಮಲಗಿ ಮೇಕೆಗಳಿಗೆ ಗಾಯಗಳಾಗಿ ಸಾಂಕ್ರಾಮಿಕ ರೋಗ ಕಾಲು ಬಾಯಿ ರೋಗದಿಂದ ಮೇಕೆ , ಹಸುಗಳು ಬಳಲಿ  ಸಾಯುವ ಪರಿಸ್ಥಿತಿ ಎದುರಿಸಬೇಕಿತ್ತು,  ನರೇಗಾ ಯೋಜನೆಯಡಿ ಮೇಕೆ ಶೆಡ್ಡು ನಿಮಾ೯ಣ ಮಾಡಿ ಕೊಂಡ ಮೇಲೆ  ಸಾಕು ಪ್ರಾಣಿಗಳ  ಆರೋಗ್ಯದಲ್ಲಿ ಸುಧಾರಣೆ ತಂದಿದೆ  ಎಂದಿದ್ದಾರೆ ಫಲಾನುಭವಿ ಶಿವಲಿಂಗಯ್ಯ.
ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ವಿರುಪಾಕ್ಷಿಪುರ ಗ್ರಾಮದ ಸುಮಾರು 65 ವಯಸ್ಸಿನ ಶಿವಲಿಂಗಯ್ಯನವರ ಬಡಕುಟುಂಬವಾಗಿದ್ದು, ಅವರಿಗೆ ನರೇಗಾ ಯೋಜನೆಯಡಿ ಇರುವ ಉಪಯೋಗವನ್ನು  ತಿಳಿಸಿ ತಂದೆಯ ಹೈನುಗಾರಿಕೆಗೆ  ಹೆಗಲು ಕೊಟ್ಟು ಆಸರೆಯಾಗಿದ್ದಾರೆ ಅವರ ಮಗ ಮಧು, ವಿದ್ಯಾ ವಂತನಾಗಿರುವ ಮಗ ಕೆಲಸಕ್ಕೆ ಹೋಗಿ ಸಂಸಾರಕ್ಕಾಗಿ ದುಡಿದು ನೆರವಾಗಿದ್ದಾನೆ, ಅವನ ಒತ್ತಡದ ಸಮಯದಲ್ಲಿಯು  ಯೋಜನೆಯ ಬಗ್ಗೆ ತಿಳಿಸಿ ಕೊಟ್ಟು ಕೆಲಸದಲ್ಲಿಯೂ ಹೆಗಲು  ಕೊಟ್ಟಿದ್ದಾನೆ ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ ತಂದೆ ಶಿವಲಿಂಗಯ್ಯ.
ಮೊದಲಿಗೆ 2 ಕುರಿಗಳನ್ನು ಸಾಕುತ್ತಿದ್ದು  ಶೆಡ್ಡು ನಿಮಾ೯ಣದ  ನಂತರ 7 ಕುರಿಗಳನ್ನು ತಂದಿದ್ದೇವೆ ಕುರಿಗಳ ತಳಿ ಬಂಡೂರ್, ಹೆಚ್ವು ತೂಕ ವನ್ನು ಹೊಂದಿದ್ದು, ಕುರಿ ಮರಿಗಳಿಗೆ ಸುಮಾರು 17,000 ದಿಂದ 18, 000 ಕೊಟ್ಟು ತಂದಿದ್ದೇನೆ ,  ಕೊಬ್ಬಿನ ಅಂಶ ಕಮ್ಮಿ, ತೂಕ ಹೆಚ್ವು, ಇವುಗಳನ್ನು 1 ವಷ೯ ನಿವ೯ಹಣೆ ನಂತರ ಒಂದು ಕುರಿ 30 ರಿಂದ 35 ಸಾವಿರ ಮಾರಾಟವಾಗುತ್ತವೇ  ಹಾಗೂ  ಬಕ್ರೀದ್ ಗೆ ಅಂತಲೇ ಹೆಚ್ಚು ಮಾರಾಟ ವಾಗುವ ತಳಿ ಇದಾಗಿದೆ.

ನರೇಗಾ ಯೋಜನೆಯಡಿ  ಮೇಕೆ ಶೆಡ್ಡಿಗೆ 68 ಸಾವಿರ ಹಾಗೂ ದನದ ಕೊಟ್ಟಿಗೆಗೆ 19 ಸಾವಿರ ಅನುದಾನ ಪಡೆದು ಸಾಕು ಪ್ರಾಣಿಗಳ ನಿವ೯ಹಣೆಗೆ ಸಹಕಾರಿಯಾಗಿ ನಮ್ಮ ಕುಟುಂಬ ಆಥಿ೯ಕವಾಗಿ ಸಬಲರಾಗಲು ನೆರವಾಗಿದೆ ನರೇಗಾ, ನಮ್ಮ ಮನೆಗೆ ಬೆಳಕು ತಂದಿದೇ.
 ತಮ್ಮ ಹೊಲದಲ್ಲೆ ಬೆಳೆದ ಸೀಮೆ ಹುಲ್ಲು, ಮುಸುಕಿನ ಜೋಳ  ಕುರಿಗಳಿಗೆ ಆಹಾರವಾಗಿ ನೀಡಲಾಗುವುದರಿಂದ ಖಚು೯ ಕೂಡ ಕಡಿಮೆ ಇದ್ದು, ಶೆಡ್ಡು ನಿರ್ಮಿಸಿಕೊಂಡ ನಂತರ  ಕುರಿಗಳ ಆರೋಗ್ಯದಲ್ಲಿ  ಸುಧಾರಣೆಯಾಗಿದೇ, ಇನ್ನು ಹೆಚ್ಚು ಮೇಕೆಗಳನ್ನು ಸಾಕುವಲ್ಲಿ ಆಸಕ್ತಿ ತಂದಿದೆ  ಎಂದು  ಸಂತೋಷದ ನಗು ಬೀರಿದ್ದಾರೆ ರೈತ ಶಿವಲಿಂಗಯ್ಯ.
ಗ್ರಾಮದ ಇತರ ಜನರು ನಾನು ಮಾಡಿಕೊಂಡಿರುವ ಶೆಡ್ಡನ್ನು ನೋಡಿ ಕೊಂಡು ಅವರು ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ. ನಾನು ಕೂಡ ಅದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸುತ್ತಿದ್ದೇನೆ . 
ಬಡತನ, ನಿರುದ್ಯೋಗವೇ ಗ್ರಾಮೀಣ ಪ್ರದೇಶದ ಜನರನ್ನು  ಕಿತ್ತು ತಿನ್ನುವ ಪರಿಸ್ಥಿಯನ್ನು ದೂರ ಮಾಡುವ ಯೋಜನೆಯಾಗಿದೇ ನರೇಗಾ ಇದು ಉತ್ತಮ ಫಲಾನುಭವಿಗಳಿಗೆ ಸಿಕ್ಕರೇ ಅದುವೇ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದಿದ್ದಾರೆ ಮಧು.
ವಷ೯ಕ್ಕೆ ಮೇಕೆಗಳನ್ನು ಮಾರಿ 1 ಕುರಿಗೆ 7 ರಿಂದ 8 ಸಾವಿರ ಲಾಭದ ನಿರೀಕ್ಷೆಯಲ್ಲಿದ್ದು ,  ವಷ೯ಕ್ಕೆ 1 ಲಕ್ಷ ಲಾಭದ  ಸಿಗಬಹುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ..
ಯುವ ಯುವಕರು ಕೆಲಸ ಇಲ್ಲ ವೆಂದು ಕೊರಗುವ ಬದಲು ಯೋಜನೆಯನ್ನು ಬಂಡವಾಳವಾಗಿಸಿಕೊಂಡು  ಆದಾಯ ಗಳಿಸಿ ಜೀವನಕ್ಕೆ ದಾರಿ ಮಾಡಿಕೊಳ್ಳುವುದರ ಜೊತೆಗೆ ಲಾಭವನ್ನು ಪಡೆಯಬಹುದು ಯಾರದೇ ಅಂಗಿಲ್ಲದೇ ಎಂದಿದ್ದಾರೆ ರೈತನ ಮಗ.
ಶೆಡ್ಡು ನಿಮಾ೯ಣ ದಿಂದ ದಿನ ನಿತ್ಯ ಕೊಟ್ಟಿಗೆ ಸ್ವಚ್ಚ ಗೊಳಿಸುವ ಶ್ರಮ ಇರುವುದಿಲ್ಲ, ಜೊತೆಗೆ ಮೇಕೆ ಇಕ್ಕೆಯು ಕೆಳಕ್ಕೆ ಬೀಳುವುದರಿಂದ ಕೋಳಿ ಗಳಿಗೆ ಆಹಾರ ವಾಗುತ್ತದೇ  ನಂತರ 1 ತಿಂಗಳಿಗೋ ಅಥವಾ 2 ತಿಂಗಳಿಗೋ ಸ್ಚಚ್ಚ ಗೋಳಿಸಬಹುದು, ಶ್ರಮ ಕಡಿಮೆಯಾಗುತ್ತದೆ, ಸಮಯವು ಉಳಿಯುತ್ತದೆ .
ಮೊದಲಿಗೆ 15 ನಾಟಿ ಕೋಳಿ ಸಾಕಿದ್ದೆ ನಂತರ ಮೇಕೆ ಶೆಡ್ಡು ಮಾಡಿದ ಮೇಲೆ ಕೆಳಗೆ ಇರುವ ಜಾಗದಲ್ಲು ಕೋಳಿ ಸಾಕಾಣಿಕಿಗೆ ಅನುಕೂಲವಾಗಿದ್ದು ಇತ್ತೇಚೆಗೆ ಸುಮಾರು 25 ಕಡಕ್ ನಾಟಿ ಕೋಳಿ ಮರಿಗಳನ್ನು ತಂದಿದ್ದೇನೆ ಅದರಲ್ಲಿ ಹುಂಜ,  ಮೋಟ್ಟೆ ಕೋಳಗಳು ಇದ್ದು ಮೊಟ್ಟೆಗಳಿಗು  ಬೇಡಿಕೆ ಹೆಚ್ಚಿರುವುದರಿಂದ  ಕೋಳಿಗಳ ಮಾರಾಟದಲ್ಲಿಯು ಹೆಚ್ಚು ಲಾಭ ಗಳಿಸಬಹುದು, ಹುಂಜಕ್ಕೂ ಬೇಡಿಕೆ ಜೊತೆಗೆ ಲಾಭವು ದುಪ್ಪಟ್ಟಿರುವುದರಿಂದ  ಬಂಡಾವಳಾಕ್ಕಿಂತ ಹೆಚ್ಚು ಲಾಭ ಸಿಗುತ್ತದೆ.
 ಒಂದು ಸಾರಿ ಶೆಡ್ಡಿಗೆ ಬಂಡವಾಳ ಹಾಕಿದರೆ ಸಾಕು  ಮತ್ತೆ ಬಂಡವಾಳ ಕೇಳುವುದಿಲ್ಲ, ಗರಿ ಶೆಡ್ಡು ಮೊದಲಿದ್ದು 3 ತಿಂಗಳಿಗೊಮ್ಮೆ ಹೊಸದಾಗಿ ಕಟ್ಟಬೇಕಿತ್ತು ಹೆಚ್ಚು ಬಂಡವಾಳ ಹಾಕಬೇಕಿತ್ತು ಈಗ ಅಂತ ಕಷ್ಟ ಇರುವುದಿಲ್ಲ ಎಂದಿದ್ದಾರೆ ರೈತ ….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments