Friday, April 26, 2024
spot_img
HomeRamnagarಡಾ. ವಿಷ್ಣುರ‍್ಧನ್ ಸವಿ ನೆನಪು ಹಾಗೂ ಅನಿರುದ್ದ್ ಜತ್ಕರ್ ಹುಟ್ಟು ಹಬ್ಬದ ಅಂಗವಾಗಿ : ಕಲಿಕಾ...

ಡಾ. ವಿಷ್ಣುರ‍್ಧನ್ ಸವಿ ನೆನಪು ಹಾಗೂ ಅನಿರುದ್ದ್ ಜತ್ಕರ್ ಹುಟ್ಟು ಹಬ್ಬದ ಅಂಗವಾಗಿ : ಕಲಿಕಾ ಪರಿಕರಗಳ ವಿತರಣೆ

ಪಾಲಾರ್ ಪತ್ರಿಕೆ | Palar Pathrike

ಕನಕಪುರ : ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ವಿಷ್ಣುರ‍್ಧನ್ ಎಂದು ರೋಟರಾಕ್ಟ್ ಬಸವೇಶ್ವರನಗರ ಬೆಂಗಳೂರು ಜಿಲ್ಲಾ ಪ್ರತಿನಿಧಿ ರೊ.ಜೋಸೆಫ್ ವಿಲ್ಸನ್ ಹಾಗೂ ರೋಟ ರಾಕ್ಟ್ ಜಿಲ್ಲಾ ಉಪಾಧ್ಯಕ್ಷ ಕೆ. ಎಸ್ ಮಂಜುನಾಥ ತಿಳಿಸಿದರು.
ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೋಟರಾಕ್ಟ್ ಬೆಂಗಳೂರು ಬಸವೇಶ್ವರನಗರ ( ರೋಟರಾಕ್ಟ್ 3190) ಆಯೋಜಿಸಿದ್ದ ಸಾಹಸಸಿಂಹ ಡಾ. ವಿಷ್ಣುರ‍್ಧನ್ ಸವಿ ನೆನಪು ಹಾಗೂ ಚಿತ್ರನಟ ಅನಿರುದ್ದ್ ಜತ್ಕರ್ ಹುಟ್ಟು ಹಬ್ಬದ ಅಂಗವಾಗಿ ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿ, ತಮಿಳುನಾಡು ಗಡಿಭಾಗದ ಶ್ರೀ ಮಹದೇವ ಗ್ರಾಮಾಂತರ ಪ್ರೌಢಶಾಲೆ ಕೊಳಗೊಂಡನಹಳ್ಳಿಯಲ್ಲಿ ಶಾಲಾ ವಿದ್ಯರ‍್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ ಕರ‍್ಯಕ್ರಮ ಉದ್ಘಾಟಿಸಿದರು . ನಂತರ ಮಾತನಾಡಿ ವಿಷ್ಣುರ‍್ಧನ್ ರವರು ತಮ್ಮ 21ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ವಂಶವೃಕ್ಷ ಚಲನಚಿತ್ರದಲ್ಲಿ ಸಹನಟನಾಗಿ ನಂತರ ಪುಟ್ಟಣ್ಣ ಕಣಗಾಲ್ ನರ‍್ದೇಶನದ ನಾಗರಹಾವು ಚಿತ್ರದಲ್ಲಿ ನಾಯಕ ನಟನಾಗಿ ಮನೋಜ್ಞವಾಗಿ ನಟಿಸಿದ್ದು ನಾಲ್ಕು ದಶಕಗಳ ಕಾಲ ಸುಮಾರು 200ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡು ನೀಡಿರುವುದು ಸ್ಮರಣೀಯ. ವಿಷ್ಣುರ‍್ಧನ್ ರವರು ಪೌರಾಣಿಕ,ಸಾಮಾಜಿಕ, ಐತಿಹಾಸಿಕ ಚಲನಚಿತ್ರಗಳಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಫಿಲಂ ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು . ಬೆಂಗಳೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಚಿತ್ರರಂಗ ಮಾತ್ರವಲ್ಲದೆ ಅನೇಕ ಸಮಾಜಮುಖಿ ಕೆಲಸಗಳಿಗೆ ತಮ್ಮನ್ನು ಸರ‍್ಪಿಸಿಕೊಂಡಿದ್ದು ಅವಿಸ್ಮರಣೀಯ.
ವಿಷ್ಣುರ‍್ಧನ್ ರವರ ಅಳಿಯ ಅನಿರುದ್ದ್ ಜತ್ಕರ್ ಸಹ ಚಿತ್ರನಟರಾಗಿದ್ದು ಜೊತೆ ಜೊತೆಯಲಿ ಧಾರವಾಹಿಯ ನಾಯಕರಾಗಿ ಜನಮನ ಸೂರೆಗೊಂಡಿದ್ದು, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ಗ್ರಾಮೀಣದ ಪ್ರದೇಶದ ಅನೇಕ ಶಾಲೆಗಳಿಗೆ ಸಹಾಯ ಹಸ್ತ ನೀಡುತ್ತಾ, ಸಮಾಜಮುಖಿ ಕರ‍್ಯಗಳನ್ನು ಮಾಡುತ್ತಿರುವುದು ಸ್ಮರಣೀಯ ಎಂದು ಹೇಳುತ್ತಾ ವಿದ್ಯರ‍್ಥಿಗಳು ಕಲಿಕೆಗೆ ಹೆಚ್ಚು ಒತ್ತುಕೊಟ್ಟು ಪೋಷಕರಿಗೆ ಶಾಲೆಗೆ ಕರ‍್ತಿ ತರುವಂತಾಗಬೇಕು ಎಂದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಸಂಗಪ್ಪ ಎಸ್. ರವರು ಮಾತನಾಡುತ್ತಾ ರೋಟರಾಕ್ಟ್ ಬೆಂಗಳೂರು ಹಾಗೂ ಅನಿರುದ್ಧ ಅಭಿಮಾನಿಗಳು ಶಾಲೆಯು ಶಿಥಿಲಗೊಂಡಿದ್ದು. ಅದರ ಜೀವನೋದ್ಧಾರ ಮಾಡಿ ಕಟ್ಟಡಗಳಿಗೆ ಬಣ್ಣ ಬಳಿಸಿದ್ದು ವಿದ್ಯರ‍್ಥಿಗಳಿಗೆ ಕಲಿಕಾ ಪರಿಕರಗಳನ್ನು ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಅನಿರುದ್ದ್ ರವರು ಜೀವನೋಪಯೋಗಿ ಕರ‍್ಯವನ್ನು ಮಾಡುತ್ತಿದ್ದು . ಉಳ್ಳವರು ಸಮಾಜಮುಖಿ ಕರ‍್ಯಗಳಲ್ಲಿ ತೊಡಗುವಂತಾಗಬೇಕು ಎಂದರು.
ಪ್ರಸ್ತಾವಿಕ ನುಡಿಯನ್ನು ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡುತ್ತಾ ಕನ್ನಡ ನಾಡು ನುಡಿ ನೆಲ ಜಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸಾವಯವ ಕೃಷಿಕ ಕೆ .ಎಂ ನಾಗರಾಜು ಶಿಕ್ಷಕರಾದ
ಕೆ. ಎಸ್ ಮಹೇಶ್, ಹೆಚ್. ವಿ ಲೋಕೇಶ್, ಶಶಿಧರ್, ಉಮೇಶ್ ಕೆ. ಜಿ, ಅಂಬಿಕಾ, ಮಾದ ಶೆಟ್ಟಿ, ಮಾನವ ಹಕ್ಕು ಆಯೋಗದ ಸದಸ್ಯರಾದ ದಿಲೀಪ್ ಉಪಸ್ಥಿತರಿದ್ದರು.
ಶಾಲಾ ವಿದ್ಯರ‍್ಥಿಗಳು ಸಾಂಸ್ಕೃತಿಕ ಕರ‍್ಯಕ್ರಮವನ್ನು ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments