Friday, April 26, 2024
spot_img
HomeMysoreರೈತ ಕಲ್ಯಾಣ ಸಂಘದ ನಾಮಫಲಕ ಅನಾವರಣ ಹುಣಸೂರು ತಾಲೂಕು ಅಧ್ಯಕ್ಷರಾಗಿ ಪ್ರತಾಪ್ ನೇಮಕ

ರೈತ ಕಲ್ಯಾಣ ಸಂಘದ ನಾಮಫಲಕ ಅನಾವರಣ ಹುಣಸೂರು ತಾಲೂಕು ಅಧ್ಯಕ್ಷರಾಗಿ ಪ್ರತಾಪ್ ನೇಮಕ

ಪಾಲಾರ್ ಪಾತ್ರಿಕೆ | Palar Pathrike

ಹುಣಸೂರು: ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮ ಸೋಮವಾರ ಜರುಗಿತು.ಗದ್ದಿಗೆಯ ಕೆಂಡಗಣ್ಣ ಸ್ವಾಮಿ ಸನ್ನಿಧಿಯಲ್ಲಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳಾದ ಸೋಮೇಶ್ವರನಾಥ ಸ್ವಾಮೀಜಿಗಳ ಘನ ಉಪಸ್ಥಿತಿಯಲ್ಲಿ ಜರುಗಿತು.ಸಂಘದ ರಾಜ್ಯಾಧ್ಯಕ್ಷರಾದ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಮಾತನಾಡಿದ ಶ್ರೀಗಳು, ರೈತರು ಸಾವಯವ ಕೃಷಿಗೆ  ಹೆಚ್ಚಿನ ಆದ್ಯತೆ ನೀಡಬೇಕು.ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕೆಂದರಲ್ಲದೇ, ರಾಸಾಯನಿಕ ಮುಕ್ತ ಕೃಷಿಯತ್ತ ಒಲವು ತೋರುವಂತಾಗಬೇಕೆಂದು ಸಲಹೆ‌ ನೀಡಿದರಲ್ಲದೇ, ರೈತ ಕಲ್ಯಾಣ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯಾಧ್ಯಕ್ಷ ಚಂದನ್ ಗೌಡ ಅವರು ಮಾತನಾಡಿ,ಈಗಾಗಲೇ  ಸಂಘದ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಪ್ರತಿ ಹಳ್ಳಿ- ಹಳ್ಳಿಗೂ ತೆರಳಿ ಅನ್ನದಾತರಿಗೆ ಜೈವಿಕ ಕೃಷಿ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.ಅಲ್ಲದೇ ವಿಷಮುಕ್ತ ಸಾವಯವ ಕೃಷಿಗೆ ಅಗತ್ಯವಿರುವ ಗೊಬ್ಬರ ಸೇರಿದಂತೆ ಇನ್ನಿತರೆ ಸಲಕರಣೆಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ.ಇದರ ಪ್ರಯೋಜನ ಪಡೆದುಕೊಂಡು ಮುಂದಿನ ದಿ‌ನಗಳಲ್ಲಾದರೂ  ಮಣ್ಣಿನ ಸಂರಕ್ಷಣೆಗೆ ಒಣ ತೊಡಬೇಕು.ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ರೈತರೂ ಕೂಡ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಅಧ್ಯಕ್ಷರ ನೇಮಕ:ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಗೊಳಿಸಿ,ಹುಣಸೂರು ತಾಲೂಕು ಅಧ್ಯಕ್ಷರನ್ನಾಗಿ ಎ.ಎಂ ಪ್ರತಾಪ್ ಅವರನ್ನು ಆಯ್ಕೆ ಮಾಡಲಾಯಿತಲ್ಲದೇ, ಸಂಘದ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಯಿತು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಮಾದೇಗೌಡ,ರಾಜ್ಯ ಗೌರವಾಧ್ಯಕ್ಷ ಸಿ.ಹೇಮಂತ್ ಕುಮಾರ್,ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡರು,ರಾಜ್ಯ ಸಂಘಟನಾ ಕಾರ್ಯದರ್ಶಿ  ಮೂರ್ತಿ‌ ಕೋಟೆ,ರಾಜ್ಯ ಪತ್ರಿಕಾ ಕಾರ್ಯದರ್ಶಿ ಪಿ.ಹರೀಶ್ ಗೌಡ,ರಾಜ್ಯ ಸಹ ಕಾರ್ಯದರ್ಶಿ ಕಂದಸ್ವಾಮಿ,ರಾಜ್ಯ ಯುವ ಘಟಕ ಅಧ್ಯಕ್ಷ ಅಭಿಷೇಕ್,ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಟ್ಟಮ್ಮ,ತಾಲೂಕು ಮಹಿಳಾ ಘಟಕದ ಅಧ್ಯಕ್ಷರ ಮೀನಾಕ್ಷಿ,ಜಿಲ್ಲಾ ಸಂಚಾಲಕ ಸಂಜಯ್,ಹಳ್ಳಿ ಮನೆ ಹೊಟೇಲ್ ಮಾಲೀಕರಾದ,ಯುವ ಮುಖಂಡ ಸಂದೇಶ್ ಸ್ಯಾಂಡಿ,ಎಚ್ ಡಿ ಕೋಟೆ ತಾಲೂಕು ಅಧ್ಯಕ್ಷರಾದ ಉಮೇಶ್, ಗೌರವಾಧ್ಯಕ್ಷರಾದ ದಾಸೇಗೌಡರು,ಗಜೇಂದ್ರ, ಬಸವರಾಜ್,ಶಿವಮಲ್ಲಪ್ಪ, ರವಿ,ರೈತ ಕಲ್ಯಾಣ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು,ಮಹಿಳಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments