Thursday, July 18, 2024
spot_img
HomeTumkurಬಿಜೆಪಿ ತುಮಕೂರು-ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಪ್ರಶಿಕ್ಷಣ ವರ್ಗ ಬಿಜೆಪಿ ಸಂಘಟನೆ, ರಾಷ್ಟ್ರೀಯತೆ, ಸಮರ್ಪಣೆಗೆ ಪ್ರಶಿಕ್ಷಣ ವರ್ಗ...

ಬಿಜೆಪಿ ತುಮಕೂರು-ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಪ್ರಶಿಕ್ಷಣ ವರ್ಗ ಬಿಜೆಪಿ ಸಂಘಟನೆ, ರಾಷ್ಟ್ರೀಯತೆ, ಸಮರ್ಪಣೆಗೆ ಪ್ರಶಿಕ್ಷಣ ವರ್ಗ : ಡಾ.ಸಂದೀಪ್‌ಕುಮಾರ್

ಪಾಲಾರ್ ಪಾತ್ರಿಕೆ | Palar Pathrike

ತುಮಕೂರು : ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರಿಗೆ ಪ್ರಶಿಕ್ಷಣದ ವರ್ಗ ಆಯೋಜಿಸಿ, ಪಕ್ಷದ ಸಂಘಟನೆ, ಸಮರ್ಪಣಾ ಮನೋಭಾವ, ರಾಷ್ಟ್ರೀಯತೆಯ ಬಗ್ಗೆ ಅರಿವು ಮೂಡಿಸಿ, ಕಟ್ಟಾ ಕಾರ್ಯಕರ್ತರ ಪಡೆ ನಿರ್ಮಾಣ ಮಾಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಯುವಮೋರ್ಚಾ ಘಟಕದ ಅಧ್ಯಕ್ಷ ಡಾ.ಸಂದೀಪ್‌ಕುಮಾರ್ ತಿಳಿಸಿದರು.
ಇವರು ಸೋಮವಾರ ತುಮಕೂರು ತಾಲ್ಲೂಕಿನ ದೇವರಾಯನದುರ್ಗದಲ್ಲಿ ಬಿಜೆಪಿ ತುಮಕೂರು ಮತ್ತು ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರಿಗೆ ನಡೆಯುತ್ತಿರುವ ಎರಡು ದಿನಗಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡುತ್ತಾ, ಬಿಜೆಪಿ ಪ್ರತಿವರ್ಷ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳಿಗೆ ಪಕ್ಷದ ಸಂಘಟನೆಗೆ ಪೂರಕವಾದ ವಿವಿಧ ವಿಷಯಗಳನ್ನು ಹಿರಿಯ ನಾಯಕರಿಂದ ಮಾರ್ಗರ್ಶನ ಕೊಡಿಸಿಕೊಡುವುದರ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಪರಿಚಯಿಸಿ ಸಂಘಟನೆಗೆ ಒತ್ತು ನೀಡಿ ಕಾರ್ಯಕರ್ತರಿಗೆ ರಾಷ್ಟ್ರೀಯತೆಯ ಜಾಗೃತಿ ಮತ್ತು ಸಮರ್ಪಣಾ ಮನೋಬಾವದ ಭೂಮಿಕೆ ಸಿದ್ದಪಡಿಸಿ, ಕ್ರೀಯಾಶೀಲರಾಗುವಂತೆ ಮಾಡುವುದಾಗಿದೆ ಎಂದು ಡಾ.ಸಂದೀಪ್‌ಕುಮಾರ್ ವಿವರಿಸಿದರು.
ಯುವಕರಿಗೆ ಆಧ್ಯತೆ : ಹೆಚ್.ಎಸ್.ರವಿಶಂಕರ್ ಹೆಬ್ಬಾಕ
ಬಿಜೆಪಿ ಪ್ರಪಂಚದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದ್ದು, ಪಕ್ಷದ ಸಂಘಟನೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರಾಗಿ ನೊಂದಾವಣೆಯಾಗಿದ್ದು, ಯುವಮೋರ್ಚಾ ಘಟಕದ ಕಾರ್ಯಕರ್ತರು ಪಕ್ಷದ ಸಂಘಟನೆ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆAದು ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಹಿತನುಡಿಗಳನ್ನಾಡಿದರು.
ಮುಂಬರುವ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರ ಪಾತ್ರ ಮಹತ್ವದಾಗಿದ್ದು, ಪಕ್ಷದ ಗೆಲುವಿಗೆ ಸಕ್ರೀಯರಾಗಿ ಕಾರ್ಯನಿರ್ವಹಿಸಲು ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಕರೆ ನೀಡಿದರು.
ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಟಿ.ವೈ.ಯಶಸ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಟಿ.ಎನ್.ರುದ್ರೇಶ್, ಮಧುಗಿರಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಾಲಿಭರತ್, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್, ಕೆ.ಸಿ.ಪರಮೇಶ್, ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
ಈ ಎರಡು ದಿನಗಳ (ದಿ.12,13,-12-2022)ಪ್ರಶಿಕ್ಷಣ ವರ್ಗದಲ್ಲಿ ತುಮಕೂರು ಮತ್ತು ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಎಲ್ಲಾ ಮಂಡಲ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಪ್ರಮುಖರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಮಧುಗಿರಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಪಾವಗಡರವಿ ಪ್ರಸ್ತಾವಿಕ ನುಡಿದರು. ಪ್ರಶಿಕ್ಷಣ ವರ್ಗದ ಸಂಚಾಲಕ ಸಾಗರ್ ದಯಾನಂದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments