Sunday, April 28, 2024
spot_img
HomeBangalore Ruralವಿದ್ಯಾರ್ಥಿಗಳು ದೀಪದಂತೆ ಬೆಳಗಬೇಕು ವಿನೋದ್ ಕುಮಾರ್ ಗೌಡ

ವಿದ್ಯಾರ್ಥಿಗಳು ದೀಪದಂತೆ ಬೆಳಗಬೇಕು ವಿನೋದ್ ಕುಮಾರ್ ಗೌಡ


ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ಪರಿವರ್ತನಾ ಕಲಾ ಸಂಸ್ಥೆ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ”ರಂಗದೀಪ-1″ ವಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಮೂಲಕ ಜ್ಞಾನವನ್ನು ಪಡೆದುಕೊಂಡು ದೀಪದಂತೆ ಬೆಳಗಿ ಬಾಳನ್ನು ಬೆಳಗಿಸಿಕೊಂಡು ತಮ್ಮಲ್ಲಿರುವ ಅಜ್ಞಾನ ದ್ವೇಷ ಅಸೂಯೆ ಜಾತಿ ಮತ ಪಂಥಗಳನ್ನು ಬದಿಗಿಟ್ಟು ಕುವೆಂಪುರವರ ವಿಶ್ವಮಾನವತೆ ಸಂದೇಶವನ್ನು ಸಾರಿ ಬಾಳನ್ನು ಸಾರ್ಥಕ ಗೊಳಿಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ(ಪ್ರೊ. ಎಮ್.ಡಿ.ಎನ್ ಬಣ) ಜಿಲ್ಲಾ ಗೌರವ ಅಧ್ಯಕ್ಷರಾದ ವಿನೋದ್ ಕುಮಾರ್ ಗೌಡ ರವರು ಕರೆ ನೀಡಿದರು.ರಂಗಭೂಮಿ ವಿದ್ಯಾರ್ಥಿಗಳು ಸಮಾಜದ ಜ್ವಲಂತ ಸಮಸ್ಯೆಗಳನ್ನು ಜನರಿಗೆ ಅರ್ಥ ಮಾಡಿಸಿ ಅದರ ಬಗ್ಗೆ ಅರಿವು ಉಂಟು ಮಾಡುವುದು ಒಂದು ಸವಾಲಿನ ಸಾಧನೆಯೇ ಸರಿ ಇದರೊಟ್ಟಿಗೆ ಪ್ರತಿ ರಂಗಭ್ಯಾಸಿಗಳ ಸರ್ವತೋಮುಖ ಬೆಳವಣಿಗೆಯನ್ನು ಈ ಮುಖೇನ ನಿರೀಕ್ಷಿಸಬಹುದು ಹಾಗಾಗಿ ನಿಮ್ಮ ಏಕಾಗ್ರತೆಯ ಅಭ್ಯಾಸ ಸಮಾಜದ ಒಳಿತಿಗೆ ನಾಂದಿ ಹಾಡುತ್ತದೆ ಎಂದು ಹೇಳುತ್ತಾ ಎಲ್ಲರಿಗೂ ಶುಭ ಕೋರಿದರು.ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ “ಟ್ರಾವೆಲರ್ “ಸಿನಿಮಾದ ನಿರ್ದೇಶಕರಾದ ಅಖಿಲ್ ರವರು ತಮ್ಮ ಸಿನಿಮಾಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಸಂಭಾಷಣೆ,ದೇಹಭಾಷೆ  ಮುಖಾಂತರ ಗುರುತಿಸಿ  “ಕಲಾವಿದರ ಆಯ್ಕೆ ಪ್ರಕ್ರಿಯೆ”ಯನ್ನು ಆಯೋಜಿಸಿ  ಸಾಕಷ್ಟು ವಿದ್ಯಾರ್ಥಿಗಳಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವ ಭರವಸೆ ನೀಡಿದರು.ದೇವನಹಳ್ಳಿ ಪೊಲೀಸ್ ಠಾಣೆ ಆರಕ್ಷಕ ದಪೇದರ್ ಆದ ಅನ್ನಪೂರ್ಣ ರವರು ಮಾತನಾಡುತ್ತಾ ಕಲೆಗಳಿಂದ ಮನುಷ್ಯನ ವ್ಯಕ್ತಿತ್ವ ವಿಕಸನ ಜೊತೆಗೆ ಸಮಾಜದ ವಿಕಾಸನಕ್ಕೆ ದಾರಿಯಾಗುತ್ತದೆ ಎಲ್ಲರೂ ಗಂಭೀರವಾಗಿ ಕಲಿಕೆಯಲ್ಲಿ ನಿರತರಾಗಿ ನಿಮ್ಮ ಪ್ರತಿಭೆಯನ್ನು ಹೊರೆಹಚ್ಚಲು ಅನುವು ಮಾಡಿಕೊಂಡು ವಿಶೇಷವಾಗಿ ಗುರ್ತಿಸಿ ಕೊಳ್ಳಿ ಎಂದು ಕಿವಿಮಾತು ಹೇಳಿದರು.ಪರಿವರ್ತನಾ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಟ ಮತ್ತು ನಿರ್ದೇಶಕರಾದ ಡಾ.ದೇವನಹಳ್ಳಿ ದೇವರಾಜ್ ರ ಮಾತನಾಡುತ್ತಾ ಸಮಾಜದ ಸ್ವಾಸ್ಥ್ಯ ಬದುಕಿಗೆ ಕಲಾವಿದರು, ಕಲೆಯ ಪಾತ್ರ ಅಪಾರವಾದದ್ದು ಈ ನಿಟ್ಟಿನಲ್ಲಿ ಗಂಭೀರವಾಗಿ ಕಲೆಗಳ ಅಧ್ಯಯನ ಮಾಡಿದರೆ, ನಿಜಕ್ಕೂ ಎಲ್ಲವನ್ನು ಗೆಲ್ಲುವ ಶಕ್ತಿ ಆ ಕಲಾದೇವಿ ಕರುಣಿಸುತ್ತಾಳೆ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ, ನೃತ್ಯ ಸಂಯೋಜಿಕೆ ದೀಪಿಕಾ ದೇವರಾಜ್ ನಿರೂಪಿಸಿದರೆ ಫೋಟೋಗ್ರಾಫರ್ ಡಿ.ಎನ್ ನಾರಾಯಣಸ್ವಾಮಿ ವಂದಿಸಿದರು. ಈ ಸಮಾರಂಭದಲ್ಲಿ ಕಲಾವಿದರಾದ ಸುಪ್ರಿಯಾ ದರ್ಶನ್ ,ತೇಜಸ್ ಗೌಡ ನವ್ಯ ಗಗನ್, ಪಾರ್ಥ, ಐಶ್ವರ್ಯ,ಯೋಗೇಶ್,ನಿತಿನ್, ಹಾಗೂ  ಕಲಾವಿದರು ಮತ್ತು ವಿದ್ಯಾರ್ಥಿಗಳು  ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments