Friday, April 19, 2024
spot_img
HomeChikballapur“ಗುರುವೇ ಸರ್ವಸ್ವವೆಂದು ತಿಳಿಯಿರಿ”

“ಗುರುವೇ ಸರ್ವಸ್ವವೆಂದು ತಿಳಿಯಿರಿ”

ಪಾಲಾರ್ ಪತ್ರಿಕೆ | Palar Patrike
ಅಂತರoಗದಲ್ಲಿ ಮಾನಸಿಕವಾಗಿ ಗುರುವೇ ಸರ್ವಸ್ವ ಎಂದು ಹೇಳಿಕೊಳ್ಳುತ್ತಾ ಲೌಕಿಕ ಮಾಯಾ ಪ್ರಪಂಚವನ್ನು ಮರೆಯಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಚಿಂತಾಮಣಿ ನಗರದ ಗಜಾನನ ವೃತ್ತದಲ್ಲಿರುವ ಬ್ರಹ್ಮವಿದ್ಯಾ ಸಮಾಜದಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಆತ್ಮಬೋಧಾಮೃತ ಪ್ರವಚನವನ್ನು ನೀಡುತ್ತಾ ಮಾತನಾಡಿದರು.
ನಾವು ನೋಡುತ್ತಿರುವುದೆಲ್ಲಾ ಮಾಯಾ ಪ್ರಪಂಚ, ಶಾಶ್ವತವಾಗಿರುವುದು ಗುರುವೊಬ್ಬನೇ ಎಂದು ತಿಳಿದುಕೊಂಡು ಗುರುಗಳ ಸೇವೆಯನ್ನು ನಿರ್ವಂಚನೆಯಿAದ ಮಾಡಬೇಕು. ನಾವು ನೋಡುತ್ತಿರುವುದೆಲ್ಲಾ ಮಾಯಾ ಪ್ರಪಂಚ, ಶಾಶ್ವತವಾಗಿರುವುದು ಗುರುವೊಬ್ಬನೇ ಎಂದು ತಿಳಿದುಕೊಂಡು ಗುರುಗಳ ಸೇವೆಯನ್ನು ನಿರ್ವಂಚನೆಯಿAದ ಮಾಡಬೇಕು. ಆಗ ಗುರು ನಿನ್ನನ್ನು ಒಪ್ಪಿಕೊಳ್ಳುತ್ತಾನೆ. ಇದು ಶಿಷ್ಯನು ಮಾಡಬೇಕಾದ ಮೊದಲ ಕರ್ತವ್ಯ. ಇಂತಹ ಶಿಷ್ಯನಿಗೆ ಗುರು ಬಂದು ಉಪದೇಶವನ್ನು ಮಾಡುತ್ತಾನೆ ಎಂದರು.
ಮಾಯಾ ವಿಕಾರಗಳು, ಮತ್ಸರಗಳು, ಧನಧಾನ್ಯಗಳ ಆಸೆ, ದುರ್ಗುಣಗಳು ಎಲ್ಲವೂ ಮನಸ್ಸಿನಲ್ಲಿ ಹುಟ್ಟುತ್ತವೆ. ಮನೋಭ್ರಮೆಗಳನ್ನು ಮನಸ್ಸೆಂಬ ಕತ್ತಿಯಿಂದಲೇ ಕಡಿದುಹಾಕಿ, ಮನಸ್ಸನ್ನು ಜಯಿಸಿದವನು ಮಹಾತ್ಮನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣವನ್ನು ಮಾಡಲಾಯಿತು. ಜ್ಯೋತಿಪೂಜೆಯನ್ನು ನೆರವೇರಿಸಲಾಯಿತು. ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಬಾಲಕೃಷ್ಣ ಭಾಗವತರ್ ರವರು ಪ್ರಾರ್ಥನೆಯನ್ನು ಮಾಡಿದರು. ರೆಡ್ಡಪ್ಪಾಚಾರಿ ರವರು ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸೀತಮ್ಮರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ||ಸತ್ಯನಾರಾಯಣ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಬ್ರಹ್ಮವಿದ್ಯಾ ಸಮಾಜದ ಚೆನ್ನಕೃಷ್ಣಪ್ಪ, ಸೊಣ್ಣಪ್ಪರೆಡ್ಡಿ, ಎಂ.ಎ.ವೆAಕಟಸ್ವಾಮಿ, ಶಿವಶಂಕರ್, ಎ.ವೆಂಕಟರೆಡ್ಡಿ, ಶಂಕರರೆಡ್ಡಿ, ಎ.ಲೀಲಾ, ಅಂಬುಜಾಕ್ಷರೆಡ್ಡಿ, ವಿಶಾಲಾಕ್ಷಮ್ಮ, ಪದ್ಮಮ್ಮ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments