Sunday, April 28, 2024
spot_img
HomeBangalore Ruralನೌಕರರ ಹಿತಕಾಪಾಡಲು ಬದ್ದ

ನೌಕರರ ಹಿತಕಾಪಾಡಲು ಬದ್ದ

ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ರಾಜ್ಯದ ೨೩ಕಡೆಯಲ್ಲಿ ಈಗಾಗಲೇ ಪ್ರತಿಭಾ ಪುರಸ್ಕಾರ ಸಮಾರಂಭ ಮಾಡಿ ಸರ್ಕಾರಿ ನೌಕರರ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಯಾವುದೇ ಕಾರ್ಪೊರೇಟ್ ಕಂಪನಿಗಳಲ್ಲೂ ಈ ರೀತಿಯಲ್ಲಿ ಉತ್ತೇಜನ ಮಾಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅಭಿಪ್ರಾಯಪಟ್ಟರು.
ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ನೌಕರರ ಮಕ್ಕಳು ಸ್ವಾಭಿಮಾನದಿಂದ ಜೀವನ ರೂಪಿಸಿಕೊಳ್ಳಬೇಕು. ಅವರ ಪೋಷಕರಿಗೆ ಪಿಂಚಣಿ ಇಲ್ಲದಿದ್ದರೂ ಸಂಬಳ ಬರದಿದ್ದರೂ ಕುಟುಂಬ ನಿರ್ವಹಣೆ ಮಾಡುವಂತಹ ಆರ್ಥಿಕ ಸ್ಥೆöÊರ್ಯ ಅವರದಾಗಬೇಕೆಂದು ಗುರ್ತಿಸಿ ಪ್ರತಿಭೆಗಳಿಗೆ ಉತ್ತೇಜನ ಮಾಡಿದ್ದೇವೆ ಎಂದರು.
ಕೆಟ್ಟ ಆಕರ್ಷಣೆಗೆ ವಿದ್ಯಾರ್ಥಿಗಳು ಒಳಗಾಗದೇ ಈ ವೇದಿಕೆಯಲ್ಲಿ ಗೌರವ ಪಡೆದವರು. ಅವರ ತಂದೆ ತಾಯಿಗೆ ಅಪಮಾನವಾಗದಂತೆ ಜೀವನ ರೂಪಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವಶಕ್ತಿಯೂ ದೇಶದ ಅಭಿವೃದ್ದಿಗೆ ಮುಂದಾಗೋಣ ಎಂದರು.
ನಾಡು ನುಡಿ, ಗಡಿ, ಭಾಷೆಯ ವಿಚಾರದಲ್ಲಿ ಎಲ್ಲರೂ ಸೇನಾನಿಗಳಂತೆ ಕೆಲಸ ಮಾಡೋಣ. ನಾಡನ್ನು ಕಟ್ಟುವ ಕೆಲಸ ಮಾಡೋಣ ಎಂದರು.
ಎಲ್ಲರೂ ಪ್ರಜ್ಞಾವಂತಸರ್ಕಾರಿ ನೌಕರರಂತೆ ವರ್ತಿಸಬೇಕು. ಅಧಿಕಾರ ಯಾರ ಬಳಿ ಇದ್ದರೂ ನಮ್ಮ ಹಕ್ಕುಗಳಿಗೆ ಸಂಘಟಿತ ಹೋರಾಟ ಮಾಡುತ್ತೇವೆ ಎಂದರು.
ಎನ್.ಪಿ.ಎ.ಎಸ್ ತೆಗೆದು ಹಾಕಲು ಹೋರಾಟ ಮಾಡುತ್ತೇವೆ. ಸರ್ಕಾರಿ ನೌಕರರ ಹಿತ ಕಾಪಾಡುವ ಕೆಲಸ ಮಾಡುತ್ತೇವೆ. ಸಂಘದಲ್ಲಿ ದುಡ್ಡಿದೆ. ಅದನ್ನು ಬಳಸುವ ಪ್ರಾಮಾಣಿಕ ಮನಸ್ಥಿತಿ ಇರಬೇಕಷ್ಟೇ. ಸರ್ಕಾರಿ ನೌಕರರ ಸಂಘದ ಕಚೇರಿಯೂ ಯಾವುದೇ ಕಾರ್ಪೋರೇಟ್ ಕಂಪನಿಗಿAತ ಕಡಿಮೆ ಇರಬಾರದು ಎಂಬ ಆಶಯ ನಮ್ಮದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣ್ಣಪ್ಪ ಮಾತನಾಡಿ ಸರ್ಕಾರದೊಂದಿಗೆ ಸೌಹಾರ್ದದ ವಾತಾವರಣ ಸೃಷ್ಟಿಸಿದ್ದಾರೆ. ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಹುದ್ದೆ ಮೇಲ್ದರ್ಜೆಗೆ ಏರಿಸುವುದರಲ್ಲಿ ಅವರ ಶ್ರಮ ಅಭಿನಂದನಾರ್ಹ ಎಂದರು.
ಸರ್ಕಾರಿ ನೌಕರರ ಬೇಡಿಕೆಯನ್ನು ಬಗೆಹರಿಸುವ ಚಾಣಾಕ್ಷತನ ಅವರಲ್ಲಿದೆ. ಶೀಘ್ರವೇ ಕೇಂದ್ರಸರ್ಕಾರದ ವೇತನ ಸ್ಕೇಲ್ ರಾಜ್ಯಕ್ಕೆ ಸಿಗುವುದಿದೆ. ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಭಾಷೆಯ ಉಳಿವಿಗೆ ಸರ್ಕಾರಿ ನೌಕರರ ಬದ್ದತೆಯಾಗಿದೆ ಎಂದರು.
ಇಡೀ ರಾಷ್ಟçದಲ್ಲಿ ಕರ್ನಾಟಕದ ಆಡಳಿತ ಮಾದರಿಯಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಾರಿಯಲ್ಲಿಯೂ ನಾವು ಕಂಕಣಬದ್ದರಾಗಿದ್ದೇವೆ. ಇನ್ನಷ್ಟು ಭಾಷೆಯ ಉಳಿವಿನ ಕೆಲಸಕ್ಕೆ ಎಲ್ಲರೂ ಮುಂದಾಗೋಣ. ಒಂದಾಗಿ ಸಾಗೋಣ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ನಿತ್ಯ ಪತ್ರಿಕೆಗಳಲ್ಲಿ ಸರ್ಕಾರಿ ನೌಕರರ ಒಳಿತಿಗಾಗಿ ದುಡಿಯುತ್ತಿದ್ದಾರೆ. ಸಾಕಷ್ಟು ರಾಜಕೀಯ ಮುಖಂಡರೊAದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಅನಾಮಧೇಯ ದೂರುಗಳ ವಿರುದ್ದ ಸರ್ಕಾರಿ ನೌಕರರಿಗೆ ಹೊಂದಿರುವ ಮಾನಸಿಕ ನೋವುಗಳನ್ನು ತಡೆ ನೀಡಿದ್ದಾರೆ. ಮೃತ ಸರ್ಕಾರಿ ನೌಕರರ ಕುಟುಂಬದ ಹೆಚ್ಚುವರಿ ಪಿಂಚಣಿ, ರಜೆಗಳನ್ನು ಹೆಚ್ಚು ವಾರ್ಷಿಕ ೧೫ದಿನಗಳಮಾಡಿದ್ದರು. ಹಲವಾರು ಮುಂಬಡ್ತಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಅನುದಾನ ಹೆಚ್ಚಿಸಿದರು. ಸುಲಭ ಸಾಲ ಸೌಲಭ್ಯ, ತುಟ್ಟಿ ಭತ್ಯೆ ಹೆಚ್ಚಿಸಿದರು. ಅವರ ಚತುರತೆಯಿಂದ ಸಾಕಷ್ಟು ಸರ್ಕಾರಿ ನೌಕರರಿಗೆ ಸವಲತ್ತು ಮಾಡಿದ್ದರು ಎಂದರು.
ಎಸ್.ಎಸ್.ಎಲ್.ಸಿ , ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಆರ್. ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷರಾದ ರುದ್ರಪ್ಪ, ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಗಂಗಾಧರಪ್ಪ, ಹೊಸಕೋಟೆ ತಾಲೂಕು ಅಧ್ಯಕ್ಷ ಮುನಿಶಾಮಪ್ಪ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷಿö್ಮÃನರಸಿಂಹಯ್ಯ, ನೆಲಮಂಗಲ ತಾಲೂಕು ಅಧ್ಯಕ್ಷ ವಾಸುದೇವ ಮೂರ್ತಿ, ಜಿಲ್ಲಾ ಹಿರಿಯ ಉಪಾಧ್ಯಕ್ಷ ರವಿಶಂಕರ್, ಜಿಲ್ಲಾ ಖಜಾಂಚಿ ಮಹಮದ್ ಮುಜಾಮಿಲ್, ಮತ್ತಿತರರು ಇದ್ದರು.
ಪೋಟೋ ೧೦ಡಿಹೆಚ್‌ಎಲ್ ಪಿ೧
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಉದ್ಘಾಟಿಸಿದರು.
ಪೋಟೋ ೧೦ಡಿಹೆಚ್‌ಎಲ್ ಪಿ೨
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments