ಪಾಲಾರ್ ಪತ್ರಿಕೆ | Palar Pathrike
ದೇವನಹಳ್ಳಿ: ಮುರುಘಾರಾಜೇಂದ್ರ ಮಠದ ಕರ್ಮಕಾಂಡವನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸ್ವಾಮಿಜಿ ಶಿವಮೂರ್ತಿಯನ್ನು ಗಲ್ಲಿಗೇರಿಸಲು ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ನಂದಿಗುoದ ಪಿ.ವೆಂಕಟೇಶ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗದಲ್ಲಿರುವ ಒನಕೆ ಓಬವ್ವ ಸರ್ಕಲ್‌ನಲ್ಲಿ ಡಿ.೨೧ರಂದು ಬೆಳಿಗ್ಗೆ ೧೧ಗಂಟೆಗೆ ೧೦ಸಾವಿರ ಬಿಎಸ್‌ಪಿಯಿಂದ ಜನರನ್ನು ಸೇರಿಸಿ, ಅನ್ಯಾಯಕ್ಕೊಳಗಾಗಿರುವ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೂಡಲೇ ರಾಜ್ಯ ಸರಕಾರ ಮುರುಘಾರಾಜೇಂದ್ರ ಮಠದ ಶಿವಮೂರ್ತಿ ಸ್ವಾಮಿಜೀಯನ್ನು ಗಲ್ಲಿಗೇರಿಸಬೇಕೆಂದು ಪ್ರತಿಭಟನೆ ಮಾಡಲಾಗುತ್ತದೆ. ಡಿ.೨೭ರಂದು ಬೆಂಗಳೂರಿನ ವಸಂತ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಬಿಎಸ್‌ಪಿ ರಾಷ್ಟç ಯುವ ನಾಯಕ ಆಕಾಶ್ ಆನಂದ್ ಅವರ ನೇತೃತ್ವದಲ್ಲಿ ಯುವ ಸಮ್ಮೇಳನ ನಡೆಯಲಿದ್ದು, ರಾಜ್ಯಾದಾದ್ಯಂತ ಅಪಾರ ಪ್ರಮಾಣದಲ್ಲಿ ಯುವ ಸಮುದಾಯದವರು ಪಾಲ್ಗೊಂಡು, ಸಂವಿಧಾನವನ್ನು ಉಳಿಸುವ ಕೆಲಸ ಮಾಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ೪೦೦ಕ್ಕೂ ಹೆಚ್ಚು ಪಕ್ಷದ ಯುವ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದೇಶವನ್ನು ಆಳ್ವಿಕೆ ಮಾಡಿದ ಸರಕಾರಗಳು ತಮಗಿಷ್ಟಬಂದAತೆ ಸಂವಿಧಾನವನ್ನು ತಿದ್ದುಪಡಿ ಮಾಡಿರುತ್ತಾರೆ. ಶೋಷಿತರನ್ನು ರಕ್ಷಿಸಲು ಮತ್ತು ಸಂವಿಧಾನದ ಮೂಲ ಆಶಯವನ್ನು ಕಾಪಾಡಲು ಬಿಎಸ್‌ಪಿಯಿಂದ ಮಾತ್ರ ಸಾದ್ಯವಾಗುತ್ತದೆ. ಡಿ.೨೫ರೊಳಗೆ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದರೆ ಬೆಂಬಲಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾ.ಜಿಲ್ಲಾಧ್ಯಕ್ಷ ಪಿ.ಮಹದೇವ್, ಪ್ರ.ಕಾ. ನರಸಿಂಹಮೂರ್ತಿ, ಕಾರ್ಯದರ್ಶಿ ದ್ಯಾವಪ್ಪ, ಖಜಾಂಚಿ ಹೇಮಚಕ್ರಪಾಣಿ, ಸಂ.ಕಾ.ಮುನಿರಾಜು, ಕಾರ್ಯದರ್ಶಿ ಚಿಕ್ಕರಂಗಪ್ಪ, ತಾ.ಅಧ್ಯಕ್ಷ ಬಂಗಾರಪ್ಪ, ತಾ.ಸಂಯೋಜಕ ನಾರಾಯಣಸ್ವಾಮಿ, ತಾಲೂಕು ಪ್ರ.ಕಾ ವೇಣುಗೋಪಾಲ್, ಟೌನ್ ಅಧ್ಯಕ್ಷ ನಾಗರಾಜ್.ಎಂ, ಮುಖಂಡರಾದ ಜಾನಿ, ಮೂರ್ತಿ, ಕಾರಹಳ್ಳಿ ಮುನಿರಾಜ್, ಪದಾಧಿಕಾರಿಗಳು ಇದ್ದರು.