Thursday, April 25, 2024
spot_img
HomeBangalore Ruralನ್ಯಾಯಾಂಗದಿoದ ಪ್ರಜಾಪ್ರಭುತ್ವ ಉಳಿದಿದೆ: ನ್ಯಾ.ವಿ.ಗೋಪಾಲಗೌಡ

ನ್ಯಾಯಾಂಗದಿoದ ಪ್ರಜಾಪ್ರಭುತ್ವ ಉಳಿದಿದೆ: ನ್ಯಾ.ವಿ.ಗೋಪಾಲಗೌಡ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ‘ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ತಿಳಿಸಿದಂತೆ ವೈಜ್ಞಾನಿಕ ಭಾವನೆಯನ್ನು ದೇಶದ ಜನತೆಗೆ ನೀಡಲು ಸರ್ಕಾರಗಳು ವಿಫಲವಾಗಿದ್ದು, ಇಂದು ನ್ಯಾಯಾಂಗದಿAದ ಮಾತ್ರವೇ ಪ್ರಜಾಪ್ರಭುತ್ವ ಉಳಿದಿದೆ’ ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯ ಪಟ್ಟರು.

ಪಟ್ಟಣದ ನ್ಯಾಯಾಲಯ ಆವರಣದ ವಕೀಲರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಕೀಲರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ’ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ನಿತ್ಯ ಪತ್ರಿಕೆಗಳಲ್ಲಿ ವಕೀಲರ ಮೇಲೆ ಹಲ್ಲೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ಅವಶ್ಯಕತೆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುವ ಅಗತ್ಯತೆ ಇದೆ’ ಎಂದರು.

‘ಸoವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣವಾಗಬೇಕಿದ್ದಲ್ಲಿ, ಪುರುಷರಷ್ಟೇ ಸಮಾನವಾಗಿ ಮಹಿಳೆಯ ಪ್ರತಿನಿಧ್ಯ ಇರಬೇಕು. ಸಂವಿಧಾನ ಬದ್ಧವಾದ ನ್ಯಾಯಾಲಯಗಳು ಮಹಿಳಾ ಸಬಲೀಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ದೇಶದ ಸಾರ್ವಭೌಮತ್ವ, ಸಮಾಜವಾದ, ಧರ್ಮ ನಿರಪೇಕ್ಷತೆ, ಸಮಾನತೆಯ ಉಳಿವಿಗೆ ವಕೀಲರು ನ್ಯಾಯಾಂಗ ಹೋರಾಟ ಮಾಡಬೇಕಿರುವ ತುರ್ತು ಇಂದು ಒದಗಿ ಬಂದಿದೆ’ ಎಂದರು.

ಪ್ರಜಾಪ್ರಭುತ್ವದಲ್ಲಿ ನ್ಯಾಯಬದ್ಧ ಆಳ್ವಿಕೆಯೂ ವಿಫಲವಾದಗ ನ್ಯಾಯಾಂಗ ಮಧ್ಯೆ ಪ್ರವೇಶಿಬೇಕು. ವಕೀಲರು ನ್ಯಾಯಾಲಯದ ಭಾಗವಾಗಿದ್ದು, ನ್ಯಾಯಾಧೀಶರಿಗಿಂತ ಹೆಚ್ಚಿನ ಮಹತ್ವ ಹೊಂದಿದ್ದೀರಿ, ನಿಷ್ಠೆಯಿಂದ ವೃತ್ತಿ ನಡೆಸುವ ಯುವ ವಕೀಲರಿಗೆ ಯಶಸ್ಸು ತ್ವರಿತವಾಗಿ ಲಭಿಸುತ್ತದೆ. ವಕೀಲಿಕೆ ವೃತ್ತಿ ತ್ಯಾಗದ ಪ್ರತೀಕವಾಗಿದ್ದು, ಕಕ್ಷಿದಾರರ ಹಿತಕ್ಕಾಗಿ ವೈಯಕ್ತಿಕ ಜೀವನವನ್ನೇ ಮರೆತು ಹೋರಾಟ ಮಾಡುತ್ತೇವೆ. ನ್ಯಾಯವಾದಿ ಎಂದರೆ ಮಾನವೀಯ ಶಾಸ್ತçದ ಪರಿಣಿತ ಹೊಂದಿರುವ ಸಾಮಾಜಿಕ ವಿಜ್ಞಾನಿ ಎಂದು ಬಣ್ಣಿಸಿದರು.

ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ‘ದೇಶದಲ್ಲಿರುವ ಮೂಢ ನಂಬಿಕೆಗಳನ್ನು ನ್ಯಾಯಾಂಗದ ಮೂಲಕ ಹೋಗಲಾಡಿಸಲು ಸಮರ್ಥವಾದ ವಾದ ಮಂಡನೆಯಾದ ಪಕ್ಷದಲ್ಲಿ ಸಾಮಾನ್ಯ ಜನರಿಗೆ ವೈಜ್ಞಾನಿಕ ತಿಳುವಳಿಕೆ ಬರುತ್ತದೆ. ವೈಜ್ಞಾನಿಕ ವಿಚಾರಧಾರೆಗಳ ಪ್ರಜ್ಞಾವಂತ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದರು.

ಹುಲಿಕಲ್ ನಟರಾಜ್‌ರಿಂದ ಮೂಢನಂಬಿಕೆಗಳು ಬಗ್ಗೆ ಅರಿವು ಮೂಡಿಸುವ ಪ್ರದರ್ಶನ ನೀಡಿದರು. ನ್ಯಾ.ದೇವೇಂದ್ರಪ್ಪ ಬೀರಾದಾರ್, ನ್ಯಾ.ಮಧುಸೂದನ್ ಡಿ.ಕೆ, ನ್ಯಾ.ಪಾಟೀಲ್ ಹರೀಶ್ ರಂಗನಗೌಡ, ನ್ಯಾ. ರಾಜಶೇಖರ್ ನ್ಯಾ, ಪ್ರತಾಪ್ ಕುಮಾರ್ ಎನ್, ನ್ಯಾ. ಸುಕನ್ಯ ಸಿ ಎಸ್, ವಕೀಲ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೃಷ್ಣೋಜಿ ರಾವ್, ಜಂಟಿ ಕಾರ್ಯದರ್ಶಿ ವಿ.ಮುನೇಗೌಡ, ಖಜಾಂಜಿ ಮಾರೇಗೌಡ, ಪದಾಧಿಕಾರಿಗಳು, ವಕೀಲರು ಉಪಸ್ಥಿತರಿದ್ದರು.

ಗಡಿ ವಿವಾದ ರಾಜಕೀಯ ಪ್ರೇರಿತ

ಚುನಾವಣೆಗಳು ಹತ್ತಿರದಲ್ಲಿದ್ದಾಗ ರಾಜಕೀಯ ಪಟ್ಭಭದ್ರ ಹಿತಾಸಕ್ತಿಗಳು ಗಡಿ ವಿವಾದಗಳನ್ನು ಹುಟ್ಟು ಹಾಕಿ ರಾಜಕೀಯ ಲಾಭ ಪಡೆಯುತ್ತದೆ. ಕನ್ನಡ ಭಾಷೆಯನ್ನು ಮಾತನಾಡುವವರು ಸಾಕಷ್ಟು ವರ್ಷದಿಂದ ಅಲ್ಲಿ ಮಹಾರಾಷ್ಟçದಲ್ಲಿ ನೆಲೆಸಿದ್ದಾರೆ. ಭಾಷೆಯ ಮೇಲೆ ಹೃದಯವಂತಿಕೆ ಇರಬೇಕು. ಪ್ರಬುದ್ಧ ಭಾಷೆಯಿಂದ ಪ್ರಖರವಾದ ವಿಚಾರಗಳು ಹಂಚಿಕೆ ಸಾಧ್ಯವಾಗುತ್ತದೆ. ಕನ್ನಡದ ಮೇರು ಸಾಹಿತಿಗಳು ಅವರದ್ದೇ ರೀತಿಯಲ್ಲಿ ಸಾಹಿತ್ಯದ ಮೂಲಕ ಭಾಷೆಗೆ ಸೇವೆ ಸಲ್ಲಿಸಿದ್ದಾರೆ ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.

ಕನ್ನಡದಲ್ಲಿ ವಾದ: ಶೀಘ್ರ ನ್ಯಾಯದಾನ ಭರವಸೆ

ದೇವನಹಳ್ಳಿಯ ನ್ಯಾಯಾಲಯದಲ್ಲಿ ಕನ್ನಡ ಭಾಷೆಯನ್ನು ಬಳಸಿ ವಕೀಲಿ ವೃತ್ತಿಯನ್ನು ಮಾಡಿದ ವಕೀಲರಿರ ಪ್ರಕರಣದಗಳಲ್ಲಿ ಉದಾರದಿಂದ ತೀರ್ಪುಗಳನ್ನು ನೀಡಲಾಗುವುದು ಎಂದು ಕನ್ನಡ ಭಾಷೆಯನ್ನು ಪ್ರೋತ್ಸಾಹಿಸುವ ಮಾತುಗಳನ್ನು ನ್ಯಾಯಾಧೀಶ ದೇವೇಂದ್ರಪ್ಪ ಬೀರಾದಾರ್ ತಿಳಿಸಿದರು. ಕನ್ನಡ ಭಾಷೆಯ ಉಗಮ, ಹಲ್ಮಿಡಿ ಶಾಸನದಲ್ಲಿ ತಿಳಿಸಿರುವ ಸಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments