Friday, April 26, 2024
spot_img
HomeBangalore Ruralಬಡವರ ಸೇವೆಗಾಗಿ ನಮ್ಮ ಕ್ಲಿನಿಕ್ ಪ್ರಾರಂಭಕ್ಕೆ ಚಾಲನೆ

ಬಡವರ ಸೇವೆಗಾಗಿ ನಮ್ಮ ಕ್ಲಿನಿಕ್ ಪ್ರಾರಂಭಕ್ಕೆ ಚಾಲನೆ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: 12 ಮತ್ತು 5ನೇ ವಾರ್ಡಿನಲ್ಲಿ ಅಧಿಕೃತ ನಮ್ಮ ಕ್ಲಿನಿಕ್ ಲೋಕಾರ್ಪಣೆಬಡವರ ಮತ್ತು ಹಿಂದುಳಿದ ವರ್ಗಗಳ ಜನತೆಗೆ ಸರ್ಕಾರ ಮನೆ ಬಾಗಿಲಿಗೆ ಚಿಕಿತ್ಸೆ ಕಲ್ಪಿಸಬೇಕೆಂಬ ಆಶಯದೊಂದಿಗೆ ಈ ಯೋಜನೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ ನಮ್ಮ “ಕ್ಲಿನಿಕ್ ಸೇವೆ” ಯು ಸಂಪೂರ್ಣ ಉಚಿತವಾಗಿದ್ದು,ಬೆಳ್ಳಗೆ 9 ರಿಂದ 4 ಯವರೆಗೆ ಎರಡು ಕ್ಲಿನಿಕ್ ಗಳು ಕಾರ್ಯ ನಿರ್ವಹಿಸುತ್ತದೆ, ಇದರಲ್ಲಿ ಸಾರ್ವಜನಿಕರ ಎಲ್ಲಾ ತರಹದ ಪರೀಕ್ಷೆ ಸೇರಿದಂತೆ ಮಕ್ಕಳ ಹಾರೈಕೆ ಮಾಡಲಾಗುತ್ತದೆ ಎಂದು ದೇವನಹಳ್ಳಿ ವಿಧಾನಸಭಾಕ್ಷೇತ್ರ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ 12 ಮತ್ತು 5ನೇ ವಾರ್ಡ್ ನಲ್ಲಿನ ಮರಳುಬಾಗಿಲಿನ ಕಾಳಪ್ಪನವರ ವೆಂಕಟೇಶ್‌ರವರ ಕಟ್ಟಡದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ನಮ್ಮ ಕ್ಲಿನಿಕ್‌ನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿ ಪಟ್ಟಣದಲ್ಲಿ ಮೂರು ವಾರ್ಡ್ ಗಳಲ್ಲಿ ಸರ್ಕಾರ ಯೋಜನೆಯಾದ ನಮ್ಮ ಕ್ಲೀನಿಕ್ ನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಟೇಪ್ ಕತ್ತರಿಸುವ ಮೂಲಕ ದೇವನಹಳ್ಳಿ ಯಲ್ಲಿ ಚಾಲನೆ ನೀಡಿದರು ಹಾಗೂ ರಾಜ್ಯದ ಅನೇಕ ಕಡೆಗಳಲ್ಲಿ ಏಕಕಾಲದಲ್ಲಿ ಆಯಾ ಭಾಗದ ಮುಖಂಡರು ಉದ್ಘಾಟಿಸಿದರು.
ಅರೋಗ್ಯ ಪರಿಸ್ಥಿತಿ ಬಿಗಡಾಯಿಸಿದಾಗ ಮಾತ್ರ ಆಸ್ಪತ್ರೆಗೆ ಹೋಗುವ ನಮ್ಮ ಗ್ರಾಮೀಣ ಭಾಗದ ಜನತೆಗೆ ಪ್ರಾಥಮಿಕವಾಗಿ ಕಾಯಿಲೆಯ ಆರಂಭಿಕ ಹಂತದಲ್ಲೇ ಅರೋಗ್ಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ತೆರೆಯಲಾಗಿರುವ “ನಮ್ಮ ಕ್ಲಿನಿಕ್” ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲೆಂದು ಆಶಿಸುತ್ತೇನೆ ಎಂದರು.
ಪುರಸಭಾ ಸದಸ್ಯರಾದ ಸುಮಿತ್ರ ಮಂಜುನಾಥ್ ಮಾತನಾಡಿ, ಸಾರ್ವಜನಿಕರು ಆರೋಗ್ಯದಲ್ಲಿ ಏರುಪೇರಾದಾಗ ಸರ್ಕಾರ ನೂತನವಾಗಿ ತೆರೆದಿರುವ ನಮ್ಮ ಕ್ಲಿನಿಕ್‌ನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು. ಜನತೆ ತಮ್ಮ ಮನೆ ಬಾಗಿಲಿಗೆ ಬಂದಿರುವ ಉಚಿತ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ .ರೇವಣಪ್ಪ ,ತಾಲ್ಲೂಕು ಆರೋಗ್ಯಾಧಿಕಾರಿ ಸಂಜಯ್, ಡಾ.ಶ್ರೀನಿವಾಸ್ ಪುರಸಭಾ ಮುಖ್ಯಾಧಿಕಾರಿ ದೊಡ್ಡ ಮಲ್ಲವಯ್ಯ, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾಶ್ರೀಧರ್, ಪುರಸಭಾಸದಸ್ಯರಾದ ರವೀಂದ್ರ, ವೈ.ಆರ್.ರುದ್ರೇಶ್, ಸುರೇಶ್,ಬಾಲರಾಜು, ಕಾಳಪ್ಪವೆಂಕಟೇಶ, ಗೋಪಾಲಕೃಷ್ಣ, ಸೊಸೈಟಿ ಕುಮಾರ್, ಅಂಬರೀಶ್, ಗುಟ್ಟಹಳ್ಳಿ ರವಿ, ಬಾಂಬೆ ನಾರಾಯಣಸ್ವಾಮಿ, ಚಂದ್ರಪ್ಪ ನಾಗೇಶ, ಲಕ್ಷಿ÷್ಮÃ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಸುನೀಲ್, ಭಾನುಪ್ರಕಾಶ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments