Friday, April 19, 2024
spot_img
HomeChikballapurರಾಮದಾಸಿ ಭಿಕ್ಷೆದ ಪಡೆದ ಶ್ರೀ ಬ್ರಹ್ಮಚೈತನ್ಯ ಭಕ್ತರು

ರಾಮದಾಸಿ ಭಿಕ್ಷೆದ ಪಡೆದ ಶ್ರೀ ಬ್ರಹ್ಮಚೈತನ್ಯ ಭಕ್ತರು

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ : ಗೋಂದಾವಲೇಕರ್ ಸದ್ಗುರು ಬ್ರಹ್ಮಚೈತನ್ಯ ಮಹಾರಾಜ್ ರವರ ೧೦೯ ನೇ ವಾರ್ಷಿಕ ಆರಾಧನೋತ್ಸವದ ಅಂಗವಾಗಿ ಗುರುವಾರ ಶ್ರೀ ರಾಮದಾಸೀ ಭಿಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎನ್.ಆರ್.ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸದ್ಗುರು ಬ್ರಹ್ಮಚೈತನ್ಯ ಮಹಾರಾಜ್‌ರ ಭಕ್ತಾಧಿಗಳು ಶ್ರೀರಾಮನಾಮವನ್ನು ಪಸರಿಸಿ ರಾಮದಾಸಿ ಭಿಕ್ಷಾ ಪಾದಯಾತ್ರೆಯನ್ನು ಕೈಗೊಂಡರು.
ಶ್ರೀರಾಮ ಮಂದಿರದ ಟ್ರಸ್ಟೀ ಬಿ.ಸಿ.ಪ್ರಸಾದ್ ಮಾತನಾಡಿ ರಾಮದಾಸೀ ಭಿಕ್ಷೆ ಅಂತಿAತ ಭಿಕ್ಷೆಯಲ್ಲ ಸ್ವತ: ಪರಮಶಿವನು ಬೇಡಿದ ಭಿಕ್ಷೆ, ಶ್ರೀರಾಮದಾಸರು ಅಂದು ಜೋಳಿಗೆ ಧರಿಸಿ ರಾಮನಾಮವ ಪಠಿಸಿ ಭಿಕ್ಷೆ ಬೇಡುತ್ತಿದ್ದರು. ಶ್ರೀ ಬ್ರಹ್ಮಾನಂದ ಮಹಾರಾಜರು ಆಶೀರ್ವದಿಸಿದ ಜೋಳಿಗೆ ಪೂಜೆ ವೆಂಕಣಯ್ಯನವರ ಕೃಪೆಯಿಂದ ಕೂಡಿದ ಜೋಳಿಗೆ ಶ್ರೀ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದ ದಿವಂಗತ ರಾಮಶೇಷಯ್ಯನವರ ಪಾಲಿಗಿದ್ದು ಅಕ್ಷಯ ಜೋಳಿಗೆ ಗುರು ಶಿಷ್ಯ ಸಂಬAಧಕ್ಕೆ ನಾಂದಿಯಾದ ಜೋಳಿಗೆ ಎಂದು ಬಣ್ಣಿಸಿದರು. ಸಮರ್ಥ ರಾಮದಾಸರ ಪಂಥದಲ್ಲಿ ಭಿಕ್ಷೆ ಪಡೆಯುವುದು ಒಂದು ಪ್ರಮುಖ ಭಾಗವಾಗಿದೆ ಎಂದರು.
ತಮ್ಮ ತಂದೆಯವರಾದ ಪೂಜ್ಯ ರಾಮಶೇಷಯ್ಯನವರು ಪ್ರತಿ ಗುರುವಾರ ಹೆಗಲಿಗೆ ಜೋಳಿಗೆ ಧರಿಸಿ ಕೈಯಲ್ಲಿ ಝೇಂಕರಿಪ ತಾಳ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹಣೆಯಲ್ಲಿ ಗಂಧ ತಿಲಕವನ್ನಿಟ್ಟುಕೊಂಡು ರಘುಪತಿ ರಾಘವ ರಾಜಾ ರಾಮ ಪತಿತ ಪಾವನ ಸೀತಾರಾಮ ಎಂದು ಹೇಳಿಕೊಂಡು ಹಗಲಿನಿಂದ ಸಂಜೆಯವರೆವಿಗೂ ನಗರ ಪ್ರದಕ್ಷಿಣೆಯನ್ನು ಹಾಕಿ ರಾಮನಾಮವನ್ನು ಪಸರಿಸಿದ ಕೀರ್ತಿ ರಾಮಶೇಷಯ್ಯನವರು ಸಲ್ಲುತ್ತದೆಂದು ವಿವರಿಸಿದರು.
ಮಂದಿರದ ಅಧ್ಯಕ್ಷ ಜಿ.ಹೆಚ್. ವೆಂಕಟೇಶ್ ಮೂರ್ತಿ ಮಾತನಾಡಿ ಶ್ರೀ ಸಮರ್ಥ ರಾಮದಾಸರ ದೃಷ್ಟಿಕೋನದಲ್ಲಿ ಭಿಕ್ಷೆಯೆಂದರೆ ಬರೀ ಬೇಡುವುದಲ್ಲ, ಸಮರ್ಥರ ಪ್ರಕಾರ ಭಿಕ್ಷೆ ಬೇಡುವುದರಲ್ಲಿ ನಾಲ್ಕು ನಿಯಮಗಳಿಗೆ ಅದರಲ್ಲಿ ಆತ್ಮ ಸಾಕ್ಷತ್ಕಾರ ಮಾಡಿಕೊಳ್ಳಲು ಇಚ್ಚಿಸಿ ಸರ್ವಸಂಗ ಪರಿತ್ಯಾಗಿ ಆದವನು ಭಿಕ್ಷೆ ಬೇಡಬಹುದು, ಭಗವಂತನೇ ತನ್ನನ್ನು ಕಾಯುತ್ತಿರುವನು ಎಂದು ಧೃಡವಾಗಿ ನಂಬಿರುವವನು ಭಿಕ್ಷೆ ಬೇಡಬಹುದು, ಭಿಕ್ಷೆಯಿಂದ ವೈರಾಗ್ಯ ಮೂಡುವುದು, ಸಾಧಕರು ಸಾಮಾಜಿಕ ಹಿತವನ್ನು ಬಯಸಿ ಯಾವುದಾದರೂ ಕಾರ್ಯಕೈಗೊಂಡು ಅದಕ್ಕಾಗಿ ಭಿಕ್ಷೆ ಬೇಡಬಹುದು ಎಂಬುದನ್ನು ಅವರು ಹೇಳಿದ್ದಾರೆ ಎಂದರು. ಹತ್ತೂ ಜನರಿಂದ ಪಡೆದ ದಾನದಿಂದ ಮಂದಿರಗಳನ್ನು ಅಥವಾ ಮಠಗಳನ್ನು ನಡೆಸುವುದನ್ನು ಶ್ರೀ ಸಮರ್ಥ ರಾಮದಾಸರಿಂದ ಬಳುವಳಿಯಾಗಿ ಬಂದಿದ್ದು ಅದೇ ರೀತಿಯಲ್ಲಿ ಶ್ರೀ ಮಂದಿರ ನಡೆಯುತ್ತಿದೆಯೆಂದರು.
ಆರಾಧನೋತ್ಸವಕ್ಕೆ ಸಂಗೀತದ ಮೆರಗು : ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯವೂ ಸಂಜೆ ವಿವಿಧ ಬಗೆಯ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರಸಿದ್ದ ವಿದುಷಿಯರಾದ ಚಿಲುಕುಂಡ ಸಹೋದರಿಯರಾದ ಲಕ್ಷಿö್ಮà ನಾಗರಾಜ್ ಮತ್ತು ಇಂದು ನಾಗರಾಜ್ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರಿಗೆ ಪಕ್ಕವಾದ್ಯದಲ್ಲಿ ವಿದ್ವಾನ್ ಪ್ರದೇಶ ಆಚಾರ್ ವಯೊಲಿನ್‌ನಲ್ಲಿ, ವಿದ್ವಾನ್ ನಾಗೇಂದ್ರ ಪ್ರಸಾದ್ ಮೃದಂಗದಲ್ಲಿ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments