Sunday, May 5, 2024
spot_img
HomeBangalore Ruralಕಾಂಗ್ರೆಸ್ ಸರ್ಕಾರದಲ್ಲಿ ಗುಂಡ್ ಪಿನ್ ನಿಂದ ಹಿಡಿದು ವಿಮಾನದ ವರೆಗೆ ಅಭಿವೃದ್ದಿಪಡಿಸಿದ್ದು ಕಾಂಗ್ರೆಸ್ : ಮಾಜಿ...

ಕಾಂಗ್ರೆಸ್ ಸರ್ಕಾರದಲ್ಲಿ ಗುಂಡ್ ಪಿನ್ ನಿಂದ ಹಿಡಿದು ವಿಮಾನದ ವರೆಗೆ ಅಭಿವೃದ್ದಿಪಡಿಸಿದ್ದು ಕಾಂಗ್ರೆಸ್ : ಮಾಜಿ ಶಾಸಕ ಮುನಿನರಸಿಂಹಯ್ಯ

ಪಾಲಾರ್ ಪತ್ರಿಕೆ | Palar Patrhike

ದೇವನಹಳ್ಳಿ: ಡಿಸೆಂಬರ್ 17 ರಂದು ರಾಜ್ಯದಾದ್ಯಂತ ಕಾಲೇಜುಗಳ ಬಂದ್ ಗೆ ಕರೆ

ಇಂದಿನ ಸರ್ಕಾರ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಅಭಿವೃದ್ಧಿ ಕಡೆ ಗಮನ ನೀಡದೆ ಎ¯್ಲÁ ಕಡೆ ರಸ್ತೆ ಗಳು ಹಾಳಾಗಿದ್ದು, ಯಾವುದೇ ಯೋಜನೆಗಳಿಗೆ ಕಾರ್ಯ ರೂಪ ನೀಡುತ್ತಿಲ್ಲ,ಪದೇ ಪದೇ ಗೊಬ್ಬರದ ಬೆಲೆ ಏರಿಕೆ ಮಾಡುತ್ತಿದ್ದು ರೈತರಿಗೂ ಸಹ ತೊಂದರೆಯಾಗುತ್ತಿದೆ ನಮ್ಮ ಎಸ್ಸಿ -ಎಸ್ಟಿ ವಿದ್ಯಾರ್ಥಿಗಳ ಅನುದಾನಗಳನ್ನು ಸಹ ಕಡಿಮೆ ಮಾಡಲಾಗಿದೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಒತ್ತಾಯಿಸಿದರು.
ಪಟ್ಟಣದ ಬಿಬಿ ರಸ್ತೆಯಲ್ಲಿರುವ ಖಾದಿಬೋರ್ಡ್ ಕಟ್ಟಡದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾರತೀಯ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಹಲವು ಸಮಸ್ಯೆಗಳನ್ನು ವಿರೋಧಿಸಿ ಡಿಸೆಂಬರ್ 17 ರಂದು ರಾಜ್ಯದಾದ್ಯಂತ ಕಾಲೇಜುಗಳನ್ನು ಬಂದ್ ಮಾಡಿಸಿ ಇಂದಿನ ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ನಮ್ಮ ಪಕ್ಷ 70 ವರ್ಷದಲ್ಲಿ ಅಭಿವೃದ್ಧಿ ಮಾಡದೇ ಇರುವುದನ್ನು ಇಂದಿನ ಸರ್ಕಾರ ಅಭಿವೃದ್ಧಿಪಡಿಸುತ್ತದೆ ಅಂತ ಸುದ್ದಿಗಳು ಅಬ್ಬಿಸಿz್ದÁರೆ ನಿಜವಾದ ನೈತಿಕತೆಯಿಂದ ಅಭಿವೃದ್ಧಿ ಮಾಡಲಿ ಎಂದರು,ಮುAದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೆ ಕಾಲಹರಣ ಮಾಡುತ್ತಿದೆ. ಯಾವುದೇ ಅನುದಾನ ಕೇಳಿದರೆ ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ. ಇಂತ ಸರ್ಕಾರಗಳಿಂದ ರಾಜ್ಯ ಅಭಿವೃದ್ದಿಯಾಗದೆ ಹಿಂದುಳಿದಿದೆ. ದೇವನಹಳ್ಳಿ ತಾಲೂಕಿನಲ್ಲಿ ಎಲ್ಲಾ ರಸ್ತೆಗಳು ಗುಂಡಿಗಳು ಬಿದ್ದಿದ್ದು ಹಲವಾರು ಜನ ಬಿದ್ದು ಗಾಯಮಾಡಿಕೊಂಡು ಅಪಾಯದಿಂದ ಪಾರಾಗುತ್ತಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಸರ್ಕಾರ ಬಿಜೆಪಿ ಸರ್ಕಾರ ಇದೆ. ಅನುದಾನಗಳು ಸಮರ್ಪಕವಾಗಿ ನೀಡದೆ ಇರುವುದರಿಂದ ತಾಲೂಕನ್ನು ಸಾಕಷ್ಟು ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಪಾಸ್ ವಿತರಣೆ ಸಮಸ್ಯೆ, ವಿದ್ಯಾರ್ಥಿ ವೇತನ ವಿಳಂಬ ಮುಂತಾದ ಸಮಸ್ಯೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ ಇದೇ ತಿಂಗಳ 17 ರಂದು ಕಾಲೇಜುಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದರು.
ದಿನನಿತ್ಯ ಜೀವನದಲ್ಲಿ ಕಷ್ಟ ಪಡುವ ವಿಧ್ಯಾರ್ಥಿಗಳಿಗೆ ಸೇವಾ ದೃಷ್ಟಿಯಿಂದ ಸರ್ಕಾರ ಸೂಕ್ತ ಸಾರಿಗೆಯ ವ್ಯವಸ್ಥೆ ಕಲ್ಪಿಸಬೇಕು, ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮತ್ತು ಮುಂದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉದ್ಯೋಗಾವಕಾಶಗಳಿಗಾಗಿ ವಿದ್ಯಾರ್ಥಿಗಳ ಫಲಿತಾಂಶ ಶೀಘ್ರವಾಗಿ ನೀಡಬೇಕು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಇದ್ದಾಗ ವಿದ್ಯಾರ್ಥಿಗಳಿಗೆ ಸಾಕಷ್ಟು ಕಾನೂನು ಮತ್ತು ಯೋಜನೆಗಳನ್ನು ತಂದಿದೆ. ಈಗಿನ ಬಿಜೆಪಿ ವಿದ್ಯಾರ್ಥಿಗಳ ಹಕ್ಕನ್ನು ಕಸಿಯುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದರೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಇಂತ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕುಎಂದು ಹೇಳಿದರು.
ಭಾರತೀಯ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟದ ಜಿ¯್ಲÁಧ್ಯಕ್ಷ ಮುಖೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ಬರೆದ ಪರೀಕ್ಷೆಯ ಫಲಿತಾಂಶಗಳ ವಿಳಂಭ ಧೋರಣೆ, ವಿದ್ಯಾರ್ಥಿ ವೇತನ, ಸಾರಿಗೆ ಬಸï, ಸರ್ಕಾರಿ ಕಾಲೇಜು ಶುಲ್ಕ ಏಕಾಏಕಿ ಹೆಚ್ಚಳ ಮಾಡಿರುವುದು ಖಂಡಿಸಿ ಹಾಗೂ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡಬೇಕು ವಿದ್ಯಾರ್ಥಿಗಳಿಗೆ ಎ¯್ಲÁ ವರ್ಗದವರಿಗೂ ಉಚಿತವಾಗಿ ಬಸ್ ಪಾಸ್ ನೀಡಬೇಕು ಸರ್ಕಾರಿ ಕಾಲೇಜಿನಲ್ಲಿ ಶುಲ್ಕ ಕಡಿಮೆ ಮಾಡಬೇಕು ಹಾಗು ವಿದ್ಯಾರ್ಥಿ ವೇತನ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಇದೇ ತಿಂಗಳ 17 ರಂದು ಕಾಲೇಜುಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದರು.
ಈ ವೇಳೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ, ಭಾರತೀಯ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಮುರಳಿ, ಜಿ¯್ಲÁ ಉಪಾಧ್ಯಕ್ಷ ಹರ್ಷ, ವಿಜಯ್ ಕುಮಾರ್, ತಾಲೂಕು ಉಪಾಧ್ಯಕ್ಷ ಹರೀಶï, ಜಿ¯್ಲÁ ಐ.ಟಿ ವಿಂಗ್ ಅಧ್ಯಕ್ಷ ಸಂದೀಪ್ ಮತ್ತಿತರರು ಇದ್ದರು.
ಪೋಟೋ 12ಡಿಹೆಚ್‌ಎಲ್ ಪಿ2
ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿರುವ ಖಾದಿಬೋರ್ಡ್ ಕಟ್ಟಡದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾರತೀಯ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments