Friday, April 26, 2024
spot_img
HomeChikballapurಶಿಡ್ಲಘಟ್ಟ ತಾಲ್ಲೂಕಿನಲ್ಲಿ 9ನೇ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ವನ್ನು ಮೊಟ್ಟಮೊದಲಬಾರಿಗೆ ಗ್ರಾಮೀಣ ಭಾಗದಲ್ಲಿ ಆಚರಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 9ನೇ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ವನ್ನು ಮೊಟ್ಟಮೊದಲಬಾರಿಗೆ ಗ್ರಾಮೀಣ ಭಾಗದಲ್ಲಿ ಆಚರಿಸಲಾಯಿತು.

ಪಾಲಾರ್ ಪತ್ರಿಕೆ | Palar Patrhike

ಶಿಡ್ಲಘಟ್ಟ : ತಾಲೂಕಿನ ಅಪ್ಪೆಗೌಡನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅದ್ಯಕ್ಷತೆವಹಿಸಿದ ಶಾಸಕ ವಿ.ಮುನಿಯಪ್ಪ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ಮಾಡುವುದರಿಂದ ಕನ್ನಡ ಭಾಷೆಯ ಮೇಲಿನ ಗೌರವ ಹೆಚ್ಚಿಸುವಂತ ಕೆಲಸ ಮಾಡಬೇಕಾಗಿದೆ. ಕನ್ನಡ ಭಾಷೆ,ನಾಡು, ನುಡಿ ಸಂಸ್ಕೃತಿಯ ಮೇಲೆ ಕನ್ನಡಿಗರಾದ ನಾವು ಹೆಚ್ಚಿನ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಬೇಕಿದೆ ಎಂದರು. 
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅದ್ಯಕ್ಷ ಅನಂತಕೃಷ್ಣ ಮಾತನಾಡಿ  ಕನ್ನಡದ ಗರಿಮೆಯನ್ನು ಹೊರ ರಾಜ್ಯಗಳಲ್ಲಿಯೂ ಸಹ ಸಾರಿದೆ.ನೆರೆ ರಾಜ್ಯ ವಾದ ಆಂದ್ರಪ್ರದೇಶದ ತಿರುಪತಿ ಹಾಗು ಇನ್ನೂ ಅನೇಕ ಕಡೆಗಳಲ್ಲಿ ನಮ್ಮ ಶಿಡ್ಲಘಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ  ಆಯೋಜಿಸಿದ್ದ ಕಾರ್ಯಕ್ರಮಗಳ ಪ್ರಮುಖ ಉದ್ದೇಶವೆಂದರೆ, ಕನ್ನಡವು ತನ್ನ ಸಾರ್ವಭೌಮತ್ವದ ಸ್ಥಾನಪಡೆದುಕೊಳ್ಳಬೇಕೆಂದರೆ ಉತ್ಕೃಷ್ಟವಾದ ಸಾಹಿತ್ಯದ ರಚನೆಯಾಗಬೇಕು, ಉತ್ತಮ ಸಾಹಿತ್ಯವು ಒಂದು ಜೀವನದಅನುಭವದಿಂದ ಹಾಗೂ ದೇಶ-ವಿದೇಶಗಳ ಪರ್ಯಟನೆಯಿಂದ ಮತ್ತು ನಿರಂತರ ಅಧ್ಯಯನದಿಂದ ಉತ್ತಮಗುಣಮಟ್ಟದ ಸಾಹಿತ್ಯ ರಚನೆಯಾಗಿ ತನ್ಮೂಲಕ ಕನ್ನಡ ನುಡಿಯ ಅಭಿವೃದ್ಧಿಯಾಗಬಲ್ಲದು ಎಂದು ತಿಳಿಸಿದರ
 ಶಿಡ್ಲಘಟ್ಟ ನಗರದಲ್ಲಿ ಈ ಹಿಂದೆ ಜಿಲ್ಲಾ ಮಟ್ಟದ ಹಾಗೂ 8 ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯಸಮ್ಮೇಳನಗಳನ್ನು ಶಿಡ್ಲಘಟ್ಟ ನಗರದಲ್ಲಿ ಆಯೋಜಿದ್ದ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಈ ಬಾರಿಪ್ರಪ್ರಥಮವಾಗಿ ಗ್ರಾಮಾಂತರ ಪ್ರದೇಶವಾದ ಅಪ್ಪೇಗೌಡನಹಳ್ಳಿ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿಶಾಲೆಯಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದು, ಇದಕ್ಕೆ ಪೂರಕವಾಗಿ ಸಾಹಿತಿಗಳು,ಮುಖ್ಯವಾಗಿ ರೈತರು, ತೋಟಗಾರಿಕಾ ತಜ್ಞರು ಹಾಗೂ ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು,ಇತಿಹಾಸ ಸಂಶೋಧಕರು ಮತ್ತು ಅನುವಾದಕರು ಆದ ಶ್ರೀ ಸಂತೆ ನಾರಾಯಣಸ್ವಾಮಿ ರವರು ಈ ಸಮ್ಮೇಳನದ ಅಧ್ಯಕ್ಷರಾಗಿ ಆಗಮಿಸಲು ಒಪ್ಪಿ ಈ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಅರ್ಥಪೂರ್ಣವಾಗಿಮೂಡಿ ಬರಲು ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಡಾ.  ಕೊಡಿ ರಂಗಪ್ಪ, ಶ್ರೀನಿವಾಸ್, ಇಒ ಮುನಿರಾಜು,ಬಿಇಒ ರಘುನಾಥ್ ರೆಡ್ಡಿ,ತ್ಯಾಗರಾಜ್,ಡಾ.ಸತ್ಯನಾರಾಯಣ, ನಂದೀಶ್, ನಾಗರಾಜ್,ಲಕ್ಷ್ಮಿನಾರಾಯಣ,ಕೃಷ್ಣ,ಕಾಳಪ್ಪ,ಗುರುರಾಜ್,ಗೋಪಾಲಗೌಡ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments