Saturday, May 4, 2024
spot_img
HomeBangaloreಕೊರೋನಾ ಮೂರನೇ ಅಲೆ ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಲಸಿಕೆ ಹಾಕಲು ಮುಂದಾಗಬೇಕು: ಜಿಪಂ ಸಿಇಓ...

ಕೊರೋನಾ ಮೂರನೇ ಅಲೆ ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಲಸಿಕೆ ಹಾಕಲು ಮುಂದಾಗಬೇಕು: ಜಿಪಂ ಸಿಇಓ ರೇವಣಪ್ಪ,

ದೇವನಹಳ್ಳಿ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯಿಂದ ಪಾರಾಗಲು ಇರುವುದು ಒಂದೇ ದಾರಿ ಲಸಿಕೆಯಾಗಿದ್ದು, ಗ್ರಾಮ ಮತ್ತು ಪಟ್ಟಣ ಪ್ರದೇಶದ ಜನರಿಗೆ ಮನದಟ್ಟು ಮಾಡಿ ಲಸಿಕೆ ಹಾಕಿಸಲು ಮುಂದಾಗಬೇಕುಎAದು ಜಿಪಂ ಸಿಇಓ ರೇವಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊರೋನಾ ಮೂರನೇ ಅಲೆ ನಿಯಂತ್ರಣ ಹಾಗೂ ಕೋವಿಡ್ ಲಸಿಕೆ ಸಂಬAಧಪಟ್ಟAತೆ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೊರೋನಾ ಲಸಿಕೆ ಜಿಲ್ಲೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳು ಶ್ರಮವಹಿಸಬೇಕು. ಜಿಲ್ಲೆಯ ದಲಿತ ಕೇರಿಗಳು, ಅಲ್ಪಸಂಖ್ಯಾತರು, ವಿಮಾನ ನಿಲ್ದಾಣ ಸುತ್ತಮುತ್ತಲೂ, ವಿಲ್ಲಾಗಳು, ಅಪಾರ್ಟ್ಮೆಂಟ್, ರೆಸ್ಟೋರೆಂಟ್, ಹೋಟೆಲ್‌ಗಳು ಸೇರಿದಂತೆ ವಿವಿಧ ಕಡೆಗಳಿಗೆ ಸಂಬAಧಪಟ್ಟ ಆಯಾ ಗ್ರಾಪಂ ಅಭಿವೃದ್ದಿ ಅಧಿಕಾರಿ, ಕಾರ್ಯದರ್ಶಿ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ತಂಡ ಲಸಿಕೆ ಹಾಕಿಸಲು ಮುಂದಾಗಬೇಕು. ಈ ರೀತಿ ತಂಡದ ರೀತಿಯಲ್ಲಿ ಹೋದರೆ ದಿನಕ್ಕೆ 4 ರಿಂದ 5ಸಾವಿರ ಕೊರೋನಾ ಲಸಿಕೆಗಳನ್ನು ಹಾಕಿಸಲು ಸಾಧ್ಯವಾಗುತ್ತದೆ. ಯಾವ ಅಧಿಕಾರಿ ಲಸಿಕೆ ಕಾರ್ಯದಲ್ಲಿ ಸ್ಪಂಧಿಸುವುದಿಲ್ಲವೋ ಅಂತಹ ಅಧಿಕಾರಿಗಳ ಪಟ್ಟಿಮಾಡಿ ಜಿಲ್ಲಾಧಿಕಾರಿಗಳು ಹಾಗೂ ನಮಗೆ ಶಿಫಾರಸ್ ಮಾಡುವಂತೆ ತಹಶೀಲ್ದಾರ್, ತಾಪಂ ಇಓ, ನೂಡಲ್ ಅಧಿಕಾರಿಗಳು ನೀಡಬೇಕು. ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಾ ಪ್ರೌಢಶಾಲೆಯ ಮುಖ್ಯಸ್ಥರ ಸಭೆಗಳನ್ನು ಕರೆದು 9 ಮತ್ತು 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಮಕ್ಕಳು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಗುರ್ತಿಸಲು ಸಹಾಯವಾಗುತ್ತದೆ. ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಶನಿವಾರ ಮತ್ತು ಭಾನುವಾರ ರಜಾದಿನಗಳಲ್ಲೂ ಸಹ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾರೂ ಸಹ ರಜಾ ಹಾಕಬಾರದು. ತಮ್ಮ ಕೇಂದ್ರಸ್ಥಾನಗಳಲ್ಲಿಯೇ ಇರಬೇಕು. ಗ್ರಾಪಂ ವ್ಯಾಪ್ತಿಯಲ್ಲಿ 4 ರಿಂದ 5ಸಾವಿರ ಲಸಿಕೆ ಹಾಕುವ ಬಾಕಿಯಿರುವ ಕಡೆ ತಹಶೀಲ್ದಾರ್ ಮತ್ತು ತಾಪಂ ಇಓ ಮತ್ತು ಪೋಲೀಸರ ಸಹಕಾರ ತೆಗೆದುಕೊಂಡು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಎರಡು ಡೋಸ್ ಗಳನ್ನು ತೆಗೆದುಕೊಂಡಿರುವುದಿಲ್ಲ. ಹಿರಿಯ ನಾಗರೀಕರನ್ನು ಮನವೊಲಿಸಿ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರ್ತಿಸಿ ಲಸಿಕೆ ಹಾಕಿಸಬೇಕು. ಇನ್ನು ಮೂರುದಿನದಲ್ಲಿ ಜಿಲ್ಲೆಯು ಶೇ 100ಕ್ಕೂ ಹೆಚ್ಚು ಲಸಿಕಾಕರಣವಾಗಬೇಕು. ಜಿಲ್ಲೆಯು ಮೊದಲ ಡೋಸ್-97, ಎರಡನೇ ಡೋಸ್-88 ರಷ್ಟು ಪ್ರಮಾಣವಾಗಿದೆ. ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಪ್ರತಿಮನೆಗೆ ಭೇಟಿನೀಡಿ 60ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಂಡಿರುವುದಿಲ್ಲ. ಅಂತಹವರನ್ನು ಗುರ್ತಿಸಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ಕೊರೋನಾ ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ಗ್ರಾಮಗಳಿಗೆ ಹರಡದಂತೆ ಹೆಚ್ಚು ನಿಗಾವಹಿಸಬೇಕು. ನಗರಕ್ಕೆ  ಹತ್ತಿರ ಇರುವುದರಿಂದ ಅನೇಕ ಜನ ರೈತರು ಮಾರುಕಟ್ಟೆ ಕೆಲಸಗಳಿಗೆ ಹೋಗುತ್ತಾರೆ. ಆದ್ದರಿಂದ ಹೆಚ್ಚು ಎಚ್ಚರವಹಿಸಬೇಕಾಗಿದೆ. ಅಧಿಕಾರಿಗಳು ಪ್ರತಿಮನೆಗೆ ಹೋಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು. ನನಗೂ ಸಹ ಕೊರೋನಾ ಪಾಸಿಟೀವ್ ಆಗಿತ್ತು. ಆರೋಗ್ಯದಿಂದ ಇದ್ದೇನೆ. ವೈದ್ಯರ ಸಲಹೆಯಂತೆ ಹೋಮ್ ಐಸೋಲೇಷನ್ ಅನ್ನು ಪೂರ್ಣಗೊಳಿಸಿದ್ದೇನೆ. ಮೂರನೇ ಅಲೆ ಬಂದಿದೆಯೆAದು ಯಾರೂ ಭಯಬೀಳಬಾರದು. ಧೈರ್ಯದಿಂದ ಎದುರಿಸಬೇಕು. 15 ರಿಂದ 18ವರ್ಷ ಮೇಲ್ಪಟ್ಟ ಶಾಲಾಮಕ್ಕಳಿಗೆ ಲಸಿಕೆ ಶೇ.90ರಷ್ಟು ಆಗಿದೆ. 60ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರು ಬೂಸ್ಟರ್ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದರು.

ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಮಾತನಾಡಿ ತಮ್ಮ ತಮ್ಮ ಕಚೇರಿಗಳಲ್ಲಿ ಏನೇ ಕೆಲಸಗಳಿದ್ದರೂ ಮೊದಲು ಲಸಿಕೆ ಹಾಕಿಸುವುದಕ್ಕೆ ಮೊದಲ ಆಧ್ಯತೆ ನೀಡಬೇಕು. ನಂತರ ವಿವಿಧ ಕೆಲಸಗಳನ್ನು ಮಾಡಿಕೊಡಬೇಕು. ತಾಲೂಕಿನಲ್ಲಿ 18ಸಾವಿರ ಲಸಿಕೆ ನೀಡಲು ಬಾಕಿಯಿದ್ದು ಅದನ್ನು ಪೂರ್ಣಗೊಳಿಸಿ ಶೇ.100ಕ್ಕಿಂತ ಹೆಚ್ಚು ಪ್ರಮಾಣವನ್ನು ಹೆಚ್ಚಿಸಬೇಕು ಎಂದರು.

ಇದೆ ವೆಳೆ ಜಿಪಂ ಯೋಜನಾಧಿಕಾರಿ ನಾಗರಾಜ್, ತಾಪಂ ಆಡಳಿತಾಧಿಕಾರಿ ರಮೇಶ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೃಷ್ಣಪ್ಪ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಪ್ರಭಾಕರ್, ತಾಪಂ ಇಓ ವಸಂತಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments