Tuesday, August 9, 2022
spot_img
HomeChikballapurವೃದ್ಧ ದಂಪತಿಗಳ ಗೋಳು ಕೇಳುವವರಾರು?

ವೃದ್ಧ ದಂಪತಿಗಳ ಗೋಳು ಕೇಳುವವರಾರು?

ಚಿಂತಾಮಣಿ: ನಗರದ ಆಜಾದ್ ಚೌಕದ, ಕನ್ಯಕಾಪರಮೇಶ್ವರಿ ರಸ್ತೆಯಲ್ಲಿ ವಾಸವಾಗಿರುವ ವೆಂಕಟಾಚಾರಿ ಕೆ.ವಿ. (86) ಮತ್ತು ಪದ್ಮಾವತಮ್ಮ (69) ದಂಪತಿಗಳಿಗೆ ತಮ್ಮ ಸ್ವಂತ ಮಕ್ಕಳೇ ಎರಡು ಹೊತ್ತು ಊಟ ಹಾಕದೇ ಮನೆಯಿಂದ ಆಚೆ ಹೋಗುವಂತೆ ಹಿಂಸಿಸುತ್ತಿದ್ದಾರೆAದು ವೃದ್ದ ದಂಪತಿಗಳು ಜಿಲ್ಲಾ ಹಿರಿಯ ನಾಗರೀಕರ ಸಹಾಯವಾಣಿ ಮೊರೆ ಹೋಗಿದ್ದಾರೆ.

ವೆಂಕಟಾಚಾರಿ ಕೆ.ವಿ. ದಂಪತಿಗಳು ಅನಾರೋಗ್ಯ ಹಾಗು ವಯೋಸಹಜ  ಕಾಯಿಲೆಗಳಿಂದ ನರಳುತ್ತಿದ್ದು ಇವರನ್ನು ಪಾಲನೆ-ಪೋಷಣೆ-ಸಂರಕ್ಷಣೆ ಮಾಡಬೇಕಾದ ಇವರ ಮೂವರು ಹೆಣ್ಣು ಮಕ್ಕಳು ವೆಂಕಟಾಚಾರಿ ಕೆ.ವಿ. ಸ್ವಯಾರ್ಜಿತ ಮನೆಯನ್ನು ಬಲವಂತವಾಗಿ ದೌರ್ಜನ್ಯನಡೆಸಿ ಆಸ್ತಿಯನ್ನು ಬರೆಸಿಕೊಂಡಿರುತ್ತಾರೆAದು ದೂರಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಚಿಂತಾಮಣಿ ತಹಸೀಲ್ದಾರ್ ಹನುಮಂತರಾಯಪ್ಪ ವೃದ್ಧ ದಂಪತಿಗಳನ್ನು ಭೇಟಿ ನೀಡಿ ಕಾನೂನು ರೀತಿಯಲ್ಲಿ ರಕ್ಷಣೆ ನೀಡುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments