Thursday, April 25, 2024
spot_img
HomeChikballapurBagepalliಬಾಗೇಪಲ್ಲಿ 5ನೇ ವಾರ್ಡ್ ನಲ್ಲಿ ಕಣ್ಮರೆಯಾದ ಸ್ವಚ್ಚತೆ ನಿತ್ಯ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಕಾಟ

ಬಾಗೇಪಲ್ಲಿ 5ನೇ ವಾರ್ಡ್ ನಲ್ಲಿ ಕಣ್ಮರೆಯಾದ ಸ್ವಚ್ಚತೆ ನಿತ್ಯ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಕಾಟ

ಬಾಗೇಪಲ್ಲಿ: ಪಟ್ಟಣದ 5ನೇ ವಾರ್ಡ್ ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳು ಇಲ್ಲದೆ ನೀರು ರಸ್ತೆಯಲ್ಲಿ ಸರಾಗವಾಗಿ ಹರಿಯುತ್ತಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರಸ್ತೆ ಮೇಲೆ ಕೊಳಚೆ ನೀರು ಹರಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ ಎಂದು ವಾರ್ಡಿನ ನಿವಾಸಿಗಳು ಅಭಿಪ್ರಾಯ ಪಟ್ಟಿದ್ದಾರೆ.

ವಾರ್ಡಿನ ನಿವಾಸಿ ಕೃಷ್ಣಪ್ಪರವರು ಮಾತನಾಡಿ, ಸುಮಾರು ತಿಂಗಳಿನಿಂದ ರಸ್ತೆ ಬದಿಯ ಚರಂಡಿಗಳು ಇಲ್ಲದೆ ಹಾಗೂ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯಲ್ಲಿ ನೀರು ನಿಂತಲ್ಲೇ ನಿಂತಿರುವುದರಿಂದ ಕಸವು ಸೇರಿ ಕೊಳೆಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗಿದೆ. ಸುತ್ತಮುತ್ತಲಿನ ಮನೆಗಳ ವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುವಂತಿದೆ. 

ಸಾಂಕ್ರಾಮಿಕ ರೋಗದ ಭೀತಿಯು ಹೆಚ್ಚಾಗಿದ್ದು, ನಿತ್ಯ ಕೊಳಚೆನೀರಿನಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಚರಂಡಿಗಳು ಇಲ್ಲದೆ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದ್ದು, ಮನೆಗಳಲ್ಲಿ ವಾಸ ಮಾಡುವುದಕ್ಕೂ ತೊಂದರೆಪಡುವಂತಾಗಿದೆ. ತಿಂಗಳು ಕಳೆದರೂ ಸ್ವಚ್ಛತೆಯಿಲ್ಲದ ಚರಂಡಿಗಳಿಂದ ರೋಗ ಭೀತಿ ಎದುರಾಗಿದೆ ಎಂದರು. ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚರಂಡಿಯ ಸ್ವಚ್ಛತೆಗೆ ಗಮನ ಹರಿಸಿ ಕೂಡಲೇ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments