Friday, May 3, 2024
spot_img
HomeBangaloreಲಸಿಕೆ ಶೇ.100 ಗುರಿತಲುಪಲು ಲಸಿಕೆ ಪಡೆಯುವಂತೆ ದೂರವಾಣಿ ಮೂಲಕ ಮನವೊಲಿಕೆ

ಲಸಿಕೆ ಶೇ.100 ಗುರಿತಲುಪಲು ಲಸಿಕೆ ಪಡೆಯುವಂತೆ ದೂರವಾಣಿ ಮೂಲಕ ಮನವೊಲಿಕೆ

ದೇವನಹಳ್ಳಿ: ತಾಲ್ಲೂಕಿನಲ್ಲಿ ವ್ಯಾಕ್ಸಿನೇಷನ್ ಉತ್ತಮವಾಗಿದ್ದು, ಬಾಕಿ ಉಳಿದಿರುವ ಹಾಗು ಮೊದಲನೇ ಡೋಸ್ ಪಡೆದು ಅವದಿ ಮುಗಿದಿದ್ದರು ಸಹ 2ನೇ ಡೊಸ್ ಪಡೆಯದವರಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಸಹಯೋಗದಿಂದಿಗೆ ತಾಲ್ಲೂಕಿನಲ್ಲಿ 1ನೇ ಡೊಸ್ ಪಡೆದು ಎರಡನೇ ಡೊಸ್ ಪಡೆಯದವರಿಗೆ ದೂರವಾಣಿ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲಾಗುತ್ತಿದೆ ಎಂದು ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಕೋವಿಡ್-19 ನಿಯಂತ್ರಣ ಘಟಕ ಕಚೇರಿಯಲ್ಲಿ ಮಾದ್ಯವದವರೊಂದಿಗೆ ಮಾತನಾಡಿದ ಅವರು. ಮೊದಲನೆ ಡೋಸ್ ಪಡೆದು 50-100 ದಿನಗಳು ಪೂರ್ಣಗೊಂಡಿದ್ದರು ಸಹ ಕೆಲವರು ಇದುವರೆಗೂ 2ನೇ ಡೋಸ್ ಲಸಿಕೆ ಪಡೆದಿಲ್ಲ ಆಗಾಗಿ ಪ್ರಥಮ ಡೋಸ್ ಪಡೆದ ಎಲ್ಲರ ಪಟ್ಟಿ ತಯಾರಿಸಿ  ಮೊದಲನೇ ಡೋಸ್ ಪಡೆದು ಅವದಿ ಮುಗಿದಿರುವವರನ್ನು ಗುರುತಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಳಿಸಲಾಗುತ್ತಿದೆ.  ಮಾಹಿತಿಯ ಕೊರತೆಯಿಂದ ಕೆಲವರು ಮನೆಯಲ್ಲೇ ಇದ್ದಾರೆ ಆಗಾಗಿ ದೂರವಾಣಿ ಕರೆ ಮಾಡಿ ಲಸಿಕೆ ಪಡೆಯುವಂತೆ ಮನವೊಲಿಕೆ ಮಾಡಲಾಗುತ್ತಿದೆ. ಕೆಲವರು ಮೊದಲನೇ ಡೋಸ್ ಪಡೆದು ತಿಂಗಳುಗಳೆ ಮುಗಿದಿದೆ ಅಂತಹವರನ್ನು ಸಹ ಕರೆತಂದು ಲಸಿಕೆ ನೀಡುವ ಕೆಲಸ ಪ್ರಗತಿಯಲ್ಲಿದೆ. ದೇವನಹಳ್ಳಿ ಲಯನ್ಸ್ ಸಂಸ್ಥೆ ಹಾಗು ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರಂತರವಾಗಿ ಲಸಿಕೆ ಅಭಿಯಾನ ನಡೆಯುತ್ತಿದ್ದು ಲಸಿಕೆ ಪಡೆಯದೆ ಇರುವವರು ಲಸಿಕೆ ಪಡೆಯುವಂತೆ ತಿಳಿಸಿದ್ದಾರೆ.

ಜ.23 ಭಾನುವಾರ ವೈದ್ಯರ ನಡಿಗೆ ಹಳ್ಳಿಕಡೆಗೆ ಕಾರ್ಯಕ್ರಮ ತಾಲ್ಲೂಕಿನ ವಿಜಯಪುರ ಪಟ್ಟಣ ವ್ಯಾಪ್ತಿ, ದೇವನಹಳ್ಳಿ ಟೌನ್, ಗೊಡ್ಲುಮುದ್ದೇನಹಗಳ್ಳಿ, ಕಾರಹಳ್ಳಿ, ಆವತಿ,ಕೊಯಿರ, ಚನ್ನರಾಯಪಟ್ಟಣ, ಅರದೇಶನಹಳ್ಳಿ, ಸಾದಹಳ್ಳಿ, ಬೂದಿಗೆರೆ, ನಲ್ಲೂರು, ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ವೈದ್ಯರ ತಂಡ ಭೇಟಿ ನೀಡಲಿದ್ದು ಕೊವಿಡ್ ತಪಾಸಣೆ, ಲಸಿಕೆ, ಸ್ವಾಬ್‌ಟೆಸ್ಟ್ ಸಂಗ್ರಹ ಹಾಗು ಹೋಮ್ ಐಸೋಲೇಷನ್ ಆದವರಿಗೆ ಚಿಕಿತ್ಸೆ ನೀಡಲಿದ್ದು ಸಾರ್ವಜನಿಕರು ಅವಕಾಶ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಇದೆ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಆರ್.ಐ ಮಂಜುನಾಥ್, ಪುರಸಭೆ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕರ್ಯಕರ್ತೆಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments