Monday, April 29, 2024
spot_img
HomeChamarajanagarಮಸಣ ನಿರ್ವಾಹಕ ನೌಕರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ

ಮಸಣ ನಿರ್ವಾಹಕ ನೌಕರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ

ಪಾಲಾರ್ ಪಾತ್ರಿಕೆ | Palar pathrike 

ಬಾಗೇಪಲ್ಲಿ:- ತಾಲ್ಲೂಕು ಎಲ್ಲ ಸಾರ್ವಜನಿಕ ಸ್ಮಶಾನಗಳು ಒಬ್ಬರಂತೆ ಸ್ಥಳೀಯ ಸಂಸ್ಥೆಗಳು ಮಸಣ ನಿರ್ವಾಹಕ ನೌಕರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಮಸಣ ಕಾರ್ಮಿಕರ ಸಂಘ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಾ.ಪಂ.ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕ ಯು.ಬಸವರಾಜ ಮಾತನಾಡಿಮಸಣ ಕಾರ್ಮಿಕರ ಹಾಗೂ ಅವರ ಕುಟುಂಬಗಳ ಸದಸ್ಯರುಗಳು ಜನಗಣತಿ ಮಾಡಿ ಅವರಿಗೆ ಗುರುತಿನ ಚೀಟಿ ನೀಡಬೇಕು. ಗುಣಿ ತೆಗೆಯುವ ಮುಚ್ಚುವ ಕಾರ್ಮಿಕರಿಗೆ ಅಗತ್ಯ ಪರಿಕರ ವಿತರಸಬೇಕು. ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 3 ಸಾವಿರ ರೂ. ಮಜೂರಿಯನ್ನು ಪಾವತಿಸಬೇಕು. 45 ವರ್ಷ ಮೇಲಿನ ಎಲ್ಲಾ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ ಪಕ್ಷ 3 ಸಾವಿರ ರೂ. ನೀಡಬೇಕು ಎನ್ನವುದು ಪ್ರಮುಖ ಬೇಡಿಕೆಯಾಗಿದೆ.ಮುಂಬರುವ 2023 ಬಡ್ಜೆಟ್‍ನಲ್ಲಿ ಮಸಣ ಕಾರ್ಮಿಕರ ಹಕ್ಕೋತ್ತಾಯಗಳನ್ನು ಈಡೇರಿಸಬೇಕು ಎಂದು  ಕರ್ನಾಟಕ ರಾಜ್ಯ ಮಸಣ ಕಾರ್ಮಿಕ ಸಂಘದ ರಾಜ್ಯ ಸಂಚಾಲಕ ಯು.ಬಸವರಾಜ ಮನವಿ ಮಾಡಿದರು.
ಅವರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್  ಅವರಿಗೆ ಮನವಿ ಪತ್ರ ಸಲ್ಲಿಸದ ನಂತರ ಮಾತನಾಡಿ ಸಾರ್ವಜನಿಕ ಸ್ಮಶಾನಕ್ಕೆ ಕಾರ್ಮಿಕರೊಬ್ಬರನ್ನು ಸ್ಥಳೀಯ ಸಂಸ್ಥೆಗಳು ಮಸಣ ನಿರ್ವಾಹಕ ನೌಕರನ್ನಾಗಿ ನೇಮಿಸಬೇಕು. ಎನ್ನುವ ವೇದಿಕೆಯನ್ನೊಗಳಗೊಂಡಂತೆ ಹಲವಾರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಸಂಘದ ಚಿಕ್ಕಬಳ್ಳಾಪುರ ಜಿಲ್ಲೆಯ ಸಹ ಸಂಚಾಲಕ ಮುನಿಯಪ್ಪ,ಬಿಳ್ಳೂರು ನಾಗರಾಜು, ಕೃಷ್ಣಪ್ಪ, ಆಶ್ವತ್ಥಪ್ಪ,ಗೂಳೂರು ಕೃಷ್ಣಪ್ಪ ಇನ್ನೂ ಮುಂತಾದ ಮಸಣ ಕಾರ್ಮಿಕರ ಸಂಘದ ಪಧಾದಿಕಾರಿಗಳು ಸದಸ್ಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments